ಬುಧವಾರ, ಡಿಸೆಂಬರ್ 1, 2021
26 °C

ಫ್ಯಾಕ್ಟ್‌ಚೆಕ್ | ಮಹಿಳೆಯನ್ನು ಗುಂಪೊಂದು ಥಳಿಸುತ್ತಿರುವ ವಿಡಿಯೊದ ಸತ್ಯಾಂಶ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಮಹಿಳೆಯನ್ನು ಗುಂಪೊಂದು ಥಳಿಸುತ್ತಿರುವ ವಿಡಿಯೊವನ್ನು ‘ಬಿಜೆಪಿ ಉತ್ತರ ಪ್ರದೇಶ’ ಟ್ವಿಟರ್‌ ಖಾತೆಯಲ್ಲಿ  ಇದೇ 18ರಂದು ಟ್ವೀಟ್‌ ಮಾಡಲಾಗಿತ್ತು. ಇದು, ಕಾಂಗ್ರೆಸ್‌ ಆಡಳಿತ ಇರುವ ರಾಜಸ್ಥಾನದಲ್ಲಿ ನಡೆದಿದೆ ಎಂದು ಹೇಳಲಾಗಿತ್ತು. ಈ ಘಟನೆಯ ಕುರಿತು ಕಾಂಗ್ರೆಸ್‌ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್‌ ಗಾಂಧಿ ಇಬ್ಬರಿಂದಲೂ ಪ್ರತಿಕ್ರಿಯೆ ಕೇಳಲಾಗಿತ್ತು. ಈ ಟ್ವೀಟ್‌ ಅನ್ನು ಬಿಜೆಪಿಯ ಜಮಶೆಡ್‌ಪುರ್‌ ಮಹಾನಗರ, ಆಗ್ರ ಮಹಾನಗರ ಟ್ವಿಟರ್‌ ಖಾತೆಗಳೂ ಸೇರಿ ಹಲವಾರು ಟ್ವಿಟರ್‌ ಖಾತೆಗಳು ಹಂಚಿಕೊಂಡಿದ್ದವು.

ಇದು ರಾಜಸ್ಥಾನದ ಘಟನೆಯಲ್ಲ ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ. ಉತ್ತರ ಪ್ರದೇಶದ ಅಮೇಠಿಯ ಭಾಗ್ವ ಗ್ರಾಮದಲ್ಲಿ ಈ ಘಟನೆ ನಡೆದಿರುವ ಕುರಿತು ದೈನಿಕ್‌ ಜಾಗರಣ್‌ ದಿನ ಪತ್ರಿಕೆಯ ಪತ್ರಕರ್ತರೊಬ್ಬರು 18ರಂದೇ ಟ್ವೀಟ್‌ ಮಾಡಿದ್ದಾರೆ. ಈ ಪ್ರಕರಣ ಇದೇ 15ರಂದು ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರಿಗಂಜ್‌ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಭೂ ಕಲಹದ ಕಾರಣ ತಾಯಿ, ಮಗಳನ್ನು ಥಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು