ಶುಕ್ರವಾರ, ಫೆಬ್ರವರಿ 3, 2023
16 °C

Fact check: ದೆಹಲಿಯಲ್ಲಿ ಬಿಜೆಪಿಯಿಂದ ಸುಸಜ್ಜಿತ ಮನೆ ಒದಗಿಸಲಾಯಿತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೆಹಲಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ ಬಿಜೆಪಿ ಸರ್ಕಾರವು ಸುಸಜ್ಜಿತ ಮನೆಗಳನ್ನು ಒದಗಿಸಿದೆ. ಅಂತಹ ಫಲಾನುಭವಿಗಳ ಕುಟುಂಬ ಇದು ಎಂದು ಒಂದು ಚಿತ್ರವನ್ನು ದೆಹಲಿ ಬಿಜೆಪಿ ಘಟಕವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ಚಿತ್ರ ಇರುವ ಪೋಸ್ಟರ್‌ ಅನ್ನೂ ದೆಹಲಿ ಬಿಜೆಪಿ ಘಟಕ ಹಂಚಿಕೊಂಡಿದೆ. ಈ ಕುಟುಂಬದ ಚಿತ್ರ ಇರುವ ಪೋಸ್ಟರ್‌ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಹಲವು ನಾಯಕರು ಹಂಚಿಕೊಂಡಿದ್ದಾರೆ. ಆದರೆ, ಪೋಸ್ಟರ್‌ನಲ್ಲಿ ಬಳಕೆಯಾಗಿರುವ ಚಿತ್ರವು ಸುಸಜ್ಜಿತ ಮನೆ ಯೋಜನೆಯ ಫಲಾನುಭವಿಗಳದ್ದಲ್ಲ.

‘ಕೇಂದ್ರ ಸರ್ಕಾರದ ಮೂಲಕ ಕೊಳೆಗೇರಿ ನಿವಾಸಿಗಳಿಗೆ ಸುಸಜ್ಜಿತ ಮನೆಗಳನ್ನು ಒದಗಿಸಿರುವುದು ನಿಜ. ಆದರೆ, ಈ ಬಗ್ಗೆ ಪ್ರಚಾರಕ್ಕೆ ಬಳಸಿಕೊಂಡ ಪೋಸ್ಟರ್‌ನಲ್ಲಿ ಇರುವ ಚಿತ್ರವು ಯೋಜನೆಯ ಫಲಾನುಭವಿಗಳದ್ದಲ್ಲ. ಬದಲಿಗೆ ಆಸ್ಟ್ರೇಲಿಯಾ ನಿವಾಸಿ ಸರೂ ಬ್ರಿರ್ಲೆ ಅವರಿಗೆ ಸಂಬಂಧಿಸಿದ್ದು. ಸರೂ ಮೂಲತಃ ಮಧ್ಯಪ್ರದೇಶದವರು. 1989ರಲ್ಲಿ ಭಾರತೀಯ ಕುಟುಂಬದಲ್ಲಿ ಜನಿಸಿದ್ದ ಅವರನ್ನು, ಐದು ವರ್ಷಗಳ ನಂತರ ಪೋಷಕರು ಬಿಟ್ಟು ಹೋಗಿದ್ದರು. ಅನಾಥವಾಗಿದ್ದ ಸರೂ ಅವರನ್ನು ಆಸ್ಟ್ರೇಲಿಯಾದ ದಂಪತಿ ದತ್ತು ಪಡೆದಿದ್ದರು. ಸರೂ ಅವರು 2013ರಲ್ಲಿ ತಮ್ಮ ಕುಟುಂಬದವರನ್ನು ಹುಡುಕಿಕೊಂಡು ಮಧ್ಯಪ್ರದೇಶಕ್ಕೆ ಬಂದಿದ್ದರು. ತಮ್ಮ ಕುಟುಂಬದವರನ್ನು ಭೇಟಿ ಮಾಡಿ, ಫೋಟೊ ತೆಗೆಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ವಿಶೇಷ ವರದಿಯನ್ನು ‘ಹಿಂದುಸ್ತಾನ್ ಟೈಮ್ಸ್‌’ 2013ರಲ್ಲಿ ಪ್ರಕಟಿಸಿತ್ತು. ಆ ವರದಿಯಲ್ಲಿ ಪ್ರಕಟವಾಗಿದ್ದ ಚಿತ್ರವನ್ನು ದೆಹಲಿ ಬಿಜೆಪಿ ಘಟಕವು ತನ್ನ ಪೋಸ್ಟರ್‌ನಲ್ಲಿ ಬಳಸಿಕೊಂಡಿದೆ. ಈ ಮೂಲಕ ಜನರ ಹಾದಿ ತಪ್ಪಿಸಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು