ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact check: ಹುಡುಗಿಯರ ಪ್ರಜ್ಞೆ ತಪ್ಪಿಸಿ, ವಿಡಿಯೊ ಮಾಡಿದರೇ ಮುಸ್ಲಿಂ ಯುವಕರು?

Last Updated 15 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಹುಟ್ಟುಹಬ್ಬದ ಆಚರಣೆಯ ವಿಡಿಯೊವೊಂದು ವೈರಲ್‌ ಆಗಿದೆ.ಯುವಕರ ಗುಂಪೊಂದುಇಬ್ಬರು ಯುವತಿಯರ ಮುಖಕ್ಕೆ ಕೇಕ್‌ ಮೆತ್ತುತ್ತಾರೆ. ಬಳಿಕ ಅರೆ ಪ್ರಜ್ಞಾವಸ್ತೆಯಲ್ಲಿದ್ದ ಯುವತಿಯರನ್ನು ಕೋಣೆಯ ಒಳಗೆ ಕರೆದೊಯ್ಯುತ್ತಾರೆ. ಈ ಕೃತ್ಯ ನಡೆಸಿರುವವರು ಮುಸ್ಲಿಂ ಯುವಕರು. ಯುವತಿಯರು ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಿ ಅವರ ಆಕ್ಷೇಪಾರ್ಹ ವಿಡಿಯೊಗಳನ್ನು ಚಿತ್ರಿಸಿದ್ದಾರೆ. ಯುವತಿಯರಿಗೆ ಇಸ್ಲಾಂಗೆ ಮತಾಂತರ ಆಗುವಂತೆ ಅವರಿಗೆ ಬೆದರಿಕೆ ಒಡ್ಡಿದ್ದಾರೆ. ಇಂಥ ಘಟನೆಗಳ ಕುರಿತು ಹಿಂದೂಗಳು ಎಚ್ಚರಿಕೆಯಿಂದ ಇರಿ ಎಂದು ಹೇಳಲಾಗಿದೆ.

ಜಾಗೃತಿ ಮೂಡಿಸಲು ತಯಾರಿಸಿರುವ ವಿಡಿಯೊ ಇದಾಗಿದೆ ಎಂದು ‘ದಿ ಕ್ವಿಂಟ್‌’ ವರದಿ ಮಾಡಿದೆ. ಯುಟ್ಯೂಬ್‌ನಲ್ಲಿ ಸಂಪೂರ್ಣ ವಿಡಿಯೊ ಇದೆ. ವಿಡಿಯೊದ ಕಡೆಯಲ್ಲಿ ‘ವಿಡಿಯೊ ನೋಡಿದ್ದಕ್ಕಾಗಿ ಧನ್ಯವಾದಗಳು. ಈ ಚಾನಲ್‌ನಲ್ಲಿ ಹಾಸ್ಯ, ಅಣಕು ನಾಟಕಗಳನ್ನು ಪೋಸ್ಟ್‌ ಮಾಡಲಾಗುತ್ತದೆ. ಈ ಕಿರುಚಿತ್ರಗಳು ಕೇವಲ ಅರಿವು ಮೂಡಿಸುವ ಉದ್ದೇಶಕ್ಕಾಗಿ’ ಎಂಬ ಘೋಷಣೆಯಿದೆ. ಇದೇ ರೀತಿಯ ಹಲವಾರು ವಿಡಿಯೊಗಳನ್ನು ಆ ಯುಟ್ಯೂಬ್‌ ಚಾನಲ್‌ ಪೋಸ್ಟ್‌ ಮಾಡಿದೆ. ಜಾಗೃತಿ ಮೂಡಿಸಲು ತಯಾರಿಸಲಾಗಿರುವ ವಿಡಿಯೊದ ಕೆಲವು ಭಾಗಗಳನ್ನು ಕತ್ತರಿಸಿ ಪೋಸ್ಟ್‌ ಮಾಡಿ ಅದಕ್ಕೆ ಕೋಮು ಬಣ್ಣ ನೀಡಲಾಗಿದೆ ಎಂದು ದಿ ಕ್ವಿಂಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT