ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Factcheck: ಬೆಳಗಾವಿಯಲ್ಲಿ ಕಸ ಸಂಗ್ರಹಣೆಗೆ ವಿನೂತನ ತಂತ್ರಜ್ಞಾನ; ನಿಜವೇ?

Last Updated 28 ಅಕ್ಟೋಬರ್ 2021, 23:30 IST
ಅಕ್ಷರ ಗಾತ್ರ

‘ಬೆಳಗಾವಿಯಲ್ಲಿ ಕಸ ಸಂಗ್ರಹಣೆಗೆ ವಿನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಬೆಳಗಾವಿಯ ಬೀದಿಗಳ ನೆಲದಾಳದಲ್ಲಿ ಕಸದ ತೊಟ್ಟಿಗಳನ್ನು ಇರಿಸಲಾಗಿದೆ. ಕಸದ ಡಂಪರ್ ಟ್ರಕ್‌ಗಳು ಬಂದಾಗ, ಈ ತೊಟ್ಟಿಗಳಿಂದ ಕಸವನ್ನು ಎತ್ತಿಹಾಕಿಕೊಳ್ಳಲಾಗುತ್ತದೆ’ ಎಂಬ ವಿವರ ಇರುವ ಪೋಸ್ಟ್ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವಾರು ಮಂದಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಆದರೆ ಇದು ತಿರುಚಲಾದ ಮಾಹಿತಿ ಎಂದು ದಿ ಕ್ವಿಂಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಈ ವಿಡಿಯೊದಲ್ಲಿ ಇರುವ ದೃಶ್ಯಗಳು ಟರ್ಕಿ ದೇಶದ ಇಸ್ತಾಂಬುಲ್ ನಗರಕ್ಕೆ ಸಂಬಂಧಿಸಿದ್ದು. ವಿಡಿಯೊದಲ್ಲಿ ಇರುವ ಟ್ರಕ್‌ ಇಸ್ತಾಂಬುಲ್‌ನಲ್ಲಿ ನೋಂದಣಿಯಾಗಿದೆ. ಮೂಲ ವಿಡಿಯೊವನ್ನು 2013ರಲ್ಲಿ ಮೊದಲ ಬಾರಿ ಪೋಸ್ಟ್‌ ಮಾಡಲಾಗಿದೆ. ಅದರಲ್ಲಿ ಅದು ಟರ್ಕಿಯ ಇಸ್ತಾಂಬುಲ್ ನಗರದ ವಿಡಿಯೊ ಎಂಬ ಮಾಹಿತಿ ಇದೆ. ಆದರೆ ಆ ವಿವರವನ್ನು ತಿರುಚಿ, ಇದು ಬೆಳಗಾವಿಯದ್ದು ಎಂದು ಹಂಚಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT