ಮಂಗಳವಾರ, ಡಿಸೆಂಬರ್ 7, 2021
19 °C

ಫ್ಯಾಕ್ಟ್‌ ಚೆಕ್‌: ಮಳೆಯಲ್ಲೇ ಕೊಚ್ಚಿ ಹೋದವೇ ಗ್ಯಾಸ್ ಸಿಲಿಂಡರ್‌ಗಳು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವಾಹದಲ್ಲಿ ಗ್ಯಾಸ್‌ ಸಿಲಿಂಡರ್‌ಗಳು ಕೊಚ್ಚಿಕೊಂಡು ಹೋಗುತ್ತಿರುವ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಳೆದ ವಾರದಿಂದ ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮಳೆಯಿಂದ ಅಲ್ಲಿಯ ಕಾಶಿಪುರ ನಗರದ ಗ್ಯಾಸ್ ಸಿಲಿಂಡರ್‌ ಘಟಕ ಕೊಚ್ಚಿ ಹೋಗಿದೆ ಎಂದು ಸುದ್ದಿಯಾಗುತ್ತಿದೆ. ಹಲವಾರು ಯುಟ್ಯೂಬ್‌ ಚಾನಲ್‌ಗಳ ಕೂಡಾ ಅ.20ರಿಂದ ಈ ವಿಡಿಯೊವನ್ನು ಅಪ್‌ಲೋಡ್‌ ಮಾಡುತ್ತಿವೆ. ಉತ್ತರಾಖಂಡದ ದುರಂತ ಎಂಬಂತೆ ಈ ವಿಡಿಯೊವನ್ನು ಬಿಂಬಿಸುತ್ತಿವೆ.

ಈ ವಿಡಿಯೊ ಜೊತೆಗೆ ನೀಡಲಾಗುತ್ತಿರುವ ಮಾಹಿತಿ ಸುಳ್ಳು ಎಂದು ಲಾಜಿಕಲ್‌ ಇಂಡಿಯನ್‌ ವರದಿ ಮಾಡಿದೆ. ಇದು ಹಳೆಯ ವಿಡಿಯೊ. ಮಧ್ಯಪ್ರದೇಶದ ಗುನಾ ನಗರದಲ್ಲಿ 2021ರ ಆಗಸ್ಟ್‌ನಲ್ಲಿ ಈ ವಿಡಿಯೊ ಸೆರೆಹಿಡಿಯಲಾಗಿದೆ. ಮಧ್ಯಪ್ರದೇಶದ ಪ್ರವಾಹ ಕುರಿತು ವರದಿ ಮಾಡಿರುವ ಪತ್ರಿಕೆಗಳು ಈ ಫೋಟೊ ಮತ್ತು ವಿಡಿಯೊವನ್ನು ಪ್ರಕಟಿಸಿವೆ. ಗ್ಯಾಸ್‌ ಸಿಲಿಂಡರ್‌ಗಳು ಕೊಚ್ಚಿ ಹೋಗುತ್ತಿರುವುದನ್ನು ಜನರು ದಡಗಳ ಮೇಲೆ ನಿಂತು ಅಸಹಾಯಕರಾಗಿ ನೋಡುತ್ತಿದ್ದ ಕುರಿತೂ ಪತ್ರಿಕೆಗಳಲ್ಲಿ ವರದಿಯಾಗಿದೆ ಎಂದು ಲಾಜಿಕಲ್‌ ಇಂಡಿಯನ್ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು