‘ಭಾರತೀಯರು ವಿಜ್ಞಾನ–ತಂತ್ರಜ್ಞಾನ ವಿಚಾರದಲ್ಲಿ ವಿಶ್ವದ ಬೇರೆಲ್ಲಾ ನಾಗರಿಕತೆಗಳಿಗಿಂತ ಬಹಳ ಮುಂದೆ ಇದ್ದರು. ಪಲ್ಲವ ರಾಜ 2ನೇ ನರಸಿಂಹನು 1,400 ವರ್ಷಗಳ ಹಿಂದೆ ನೆಲ್ಲೂರಿನಲ್ಲಿ ಕಟ್ಟಿಸಿದ್ದ ರಂಗನಾಥ ಸ್ವಾಮಿಯ ದೇವಾಲಯದಲ್ಲಿ ಒಂದು ಉಬ್ಬು ಶಿಲ್ಪವಿದೆ. ಅದರಲ್ಲಿ ವ್ಯಕ್ತಿಯೊಬ್ಬ ಕಂಪ್ಯೂಟರ್ ಬಳಸುತ್ತಿದ್ದಾನೆ. ನಮ್ಮ ಪೂರ್ವಜರ ಕಲ್ಪನೆ ಅಗಾಧವಾದುದಲ್ಲವೇ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವಿವರಣೆಗೆ ಹೋಲುವ ಚಿತ್ರವೂ ವೈರಲ್ ಆಗಿವೆ.

ಗೂಗಲ್ ಲೆನ್ಸ್ ಮೂಲಕ ಈ ಚಿತ್ರವನ್ನು ಹುಡುಕಿದಾಗ ಈ ಕಲಾಕೃತಿಯ ಹಲವು ಫೋಟೊಗಳುದೊರೆತವು. ಇದು ಲ್ಯಾಟಿನ್ ಅಮೆರಿಕದ ಕಲಾವಿದ ರೌಲ್ ಕ್ರೂಸ್ ಅವರ ಕಲಾಕೃತಿ. ಅವರ ಅಧಿಕೃತ ಜಾಲತಾಣದಲ್ಲಿ ಈ ಚಿತ್ರವಿದೆ. ಮಾಯನ್ ಸಂಸ್ಕೃತಿಯ ಚಿತ್ರಕಲಾ ಪ್ರಕಾರದಿಂದ ಪ್ರೇರಣೆ ಪಡೆದು ಈ ಚಿತ್ರ ರಚಿಸಿರುವುದಾಗಿ ರೌಲ್ ಹೇಳಿಕೊಂಡಿದ್ದಾರೆ. 2003ರಲ್ಲಿ ಪ್ರಕಟವಾಗಿದ್ದ ‘ಕಾಸ್ಮೋಸ್ ಲ್ಯಾಟಿನ್ಸ್’ ವಿಜ್ಞಾನ ಕಥಾಪುಸ್ತಕದಲ್ಲಿ ರೌಲ್ ಅವರ ಕಲಾಕೃತಿಯನ್ನು ಮುಖಪುಟದ ಚಿತ್ರವಾಗಿ ಬಳಸಲಾಗಿದೆ. ಅದೇ ಚಿತ್ರವನ್ನು ಭಾರತದ ದೇವಾಲಯದ ಉಬ್ಬುಶಿಲ್ಪ ಎಂದು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.