ಶನಿವಾರ, ಜುಲೈ 24, 2021
26 °C

ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್‌‌ರನ್ನು ಕ್ರಿಕೆಟಿಗ ಎಂದುಕೊಂಡಿದ್ದರೇ ರಾಹುಲ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಆತ್ಮಹತ್ಯೆಗೆ ಸಂತಾಪ ಸೂಚಿಸಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಮಾಡಿದ್ದ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಚರ್ಚೆಯಾಗುತ್ತಿದೆ.

‘ಸುಶಾಂತ್‌ ಸಿಂಗ್‌ ಅವರ ನಿಧನದ ಸುದ್ದಿ ವಿಷಾದಕರ. ಈ ಯುವ ಹಾಗೂ ಪ್ರತಿಭಾನ್ವಿತ ಕ್ರಿಕೆಟರ್‌ ಎಷ್ಟು ಬೇಗನೇ ಇಲ್ಲವಾದರು. ಅವರ ಕುಟುಂಬ ವರ್ಗ, ಸ್ನೇಹಿತರು ಹಾಗೂ ಜಗತ್ತಿನಾದ್ಯಂತ ಹರಡಿರುವ ಅವರ ಅಭಿಮಾನಿಗಳಿಗೆ ನಾನು ಸಂತಾಪ ವ್ಯಕ್ತಪಡಿಸುವೆ’ ಎಂಬ ರಾಹುಲ್‌ ಅವರ ಟ್ವೀಟ್‌ನ ಸ್ಕ್ರೀನ್‌ ಶಾಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕೆಲವರು, ‘ಪಪ್ಪುವಿಗೆ ಮೊದಲು ಸಾಮಾನ್ಯ ಜ್ಞಾನವನ್ನು ಹೇಳಿಕೊಡಿ’ ಎಂದು ನೆಟ್ಟಿಗರು ಗೇಲಿ ಮಾಡಿದ್ದರು.

ರಾಹುಲ್‌ ಅವರು ಮಾಡಿದ್ದ ಈ ಟ್ವೀಟ್‌ ಪರಿಶೀಲಿಸಿದಾಗ, ಅದರಲ್ಲಿನ ಅಂಶ ತಿದ್ದಿ, ಸ್ಕ್ರೀನ್‌ ಶಾಟ್‌ ತೆಗೆದಿರುವುದು ಎದ್ದು ಕಂಡಿದೆ. ‘ಸುಶಾಂತ್‌ ಸಿಂಗ್‌ ಅವರ ನಿಧನದ ಸುದ್ದಿ ವಿಷಾದಕರ. ಈ ಯುವ ಹಾಗೂ ಪ್ರತಿಭಾನ್ವಿತ ನಟ ಎಷ್ಟು ಬೇಗನೇ ಇಲ್ಲವಾದರು. ಅವರ ಕುಟುಂಬ ವರ್ಗ, ಸ್ನೇಹಿತರು ಹಾಗೂ ಜಗತ್ತಿನಾದ್ಯಂತ ಹರಡಿರುವ ಅವರ ಅಭಿಮಾನಿಗಳಿಗೆ ನಾನು ಸಂತಾಪ ವ್ಯಕ್ತಪಡಿಸುವೆ’ ಎನ್ನುವುದು ರಾಹುಲ್‌ ಅವರ ಟ್ವೀಟ್‌ನ ಪೂರ್ಣಪಾಠವಾಗಿತ್ತು. ಅದರಲ್ಲಿ ‘ನಟ’ ಎಂಬ ಸ್ಥಳದಲ್ಲಿ ‘ಕ್ರಿಕೆಟರ್‌’ ಎಂಬ ಪದವನ್ನು ಸೇರಿಸಿ, ಸ್ಕ್ರೀನ್‌ಶಾಟ್‌ ತೆಗೆಯಲಾಗಿದೆ. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು