ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FACT CHECK: ಸಿಪಿಐ (ಮಾವೋವಾದಿ) ಬದಲು ಸಿಪಿಐ ಎಂದು ಉಲ್ಲೇಖಿಸಿ ಲೋಪ

Last Updated 21 ಮಾರ್ಚ್ 2023, 18:42 IST
ಅಕ್ಷರ ಗಾತ್ರ

ಜಾಗತಿಕ ಭಯೋತ್ಪಾದಕ ಸೂಚ್ಯಂಕದಲ್ಲಿ ಹೆಸರಿಸಲಾಗಿರುವ ಅಪಾಯಕಾರಿ 20 ಉಗ್ರ ಸಂಘಟನೆಗಳಲ್ಲಿ ಕಮ್ಯೂನಿಸ್ಟ್ ಫಾರ್ಟಿ ಆಫ್ ಇಂಡಿಯಾ (ಸಿಪಿಐ) ಹೆಸರಿದೆ ಎಂದು ಹೇಳಲಾಗುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ‘ಇನ್‌ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಆ್ಯಂಡ್ ಪೀಸ್ (ಐಇಪಿ) ಬಿಡುಗಡೆ ಮಾಡಿರುವ ವರದಿಯಲ್ಲಿ ಸಿಪಿಐ 12ನೇ ಸ್ಥಾನ ಪಡೆದಿದೆ’ ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಕೆಲವು ಟ್ವಿಟರ್‌ ಖಾತೆಗಳಲ್ಲೂ ಉಗ್ರ ಸಂಘಟನೆಗಳ ಪಟ್ಟಿಯನ್ನು ತೋರಿಸುವ ಚಿತ್ರ ಹಂಚಿಕೆಯಾಗಿದೆ. ಆದರೆ ಇದು ತಪ್ಪು ಮಾಹಿತಿ.

ಇನ್‌ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಆ್ಯಂಡ್ ಪೀಸ್ ಬಿಡುಗಡೆ ಮಾಡಿದ್ದ ಮೊದಲ ವರದಿಯಲ್ಲಿ ಸಿಪಿಐ (ಮಾವೋವಾದಿ) ಎಂದು ಉಲ್ಲೇಖಿಸುವ ಬದಲು ಸಿಪಿಐ ಎಂದು ತಪ್ಪಾಗಿ ಉಲ್ಲೇಖಿಸಲಾಗಿತ್ತು ಎಂದು ಪಿಟಿಐ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ವರದಿಯಲ್ಲಿ ಆಗಿರುವ ಲೋಪವನ್ನು ತಕ್ಷಣ ಸರಿಪಡಿಸಿದ ಸಂಸ್ಥೆಯು, ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿಪಿಐ ಬದಲಾಗಿ ಸಿಪಿಐ (ಮಾವೋವಾದಿ) ಎಂದು ಸರಿಪಡಿಸಿ ಪ್ರಕಟಿಸಿದ್ದು, ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದೆ. ಸಿಪಿಐ (ಮಾವೋವಾದಿ) ಹಾಗೂ ಅದರ ಅಂಗ ಸಂಸ್ಥೆಗಳನ್ನು ಯುಎಪಿಎ ಅಡಿ ನಿಷೇಧಿತ ಉಗ್ರ ಸಂಘಟನೆಗಳು ಎಂದು ಗುರುತಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT