ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Factcheck | ಉಕ್ರೇನ್ ಸಂಘರ್ಷ; ಮಧ್ಯಪ್ರವೇಶಿಸದಂತೆ ಭಾರತಕ್ಕೆ ಪುಟಿನ್ ಎಚ್ಚರಿಕೆ?

Last Updated 28 ಫೆಬ್ರುವರಿ 2022, 1:39 IST
ಅಕ್ಷರ ಗಾತ್ರ

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದರೆ ಭಾರತ ಬೆಲೆ ತೆರಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎಚ್ಚರಿಸಿದ್ದಾರೆ ಎಂದು ಹೇಳಲಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಎನ್‌ಎನ್‌ ಸುದ್ದಿವಾಹಿನಿಯಿಂದ ಸ್ಕ್ರೀನ್‌ಶಾಟ್ ಮಾಡಿದ್ದೆಂದು ಹೇಳಲಾದ ಚಿತ್ರದ ಅಡಿಯಲ್ಲಿ ಭಾರತಕ್ಕೆ ಪುಟಿನ್ ಎಚ್ಚರಿಕೆ ನೀಡಿರುವ ಉಲ್ಲೇಖವಿದೆ. ಹಲವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈವರೆಗೆ ಭಾರತಕ್ಕೆ ಪುಟಿನ್ ಇಂತಹ ಎಚ್ಚರಿಕೆ ನೀಡಿಲ್ಲ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ. ಉಕ್ರೇನ್ ಮೇಲೆ ದಾಳಿ ಘೋಷಿಸುವಾಗ ಪುಟಿನ್ ಅವರು ಭಾರತದ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೆ ಭಾರತವು ಈ ವಿಚಾರದಲ್ಲಿ ತಟಸ್ಥ ನಿಲುವು ತೆಗೆದುಕೊಂಡಿದೆ. ಪುಟಿನ್ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಿಂಸಾಚಾರ ನಿಲ್ಲಿಸುವಂತೆ ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT