ಮಂಗಳವಾರ, ಸೆಪ್ಟೆಂಬರ್ 21, 2021
23 °C

ಫ್ಯಾಕ್ಟ್‌ಚೆಕ್: ತಾಂತ್ರಿಕ ದೋಷದಿಂದ ರಫೇಲ್ ವಿಮಾನ ಅಪಘಾತ- ಇದು ಸುಳ್ಳು ಸುದ್ದಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: 'ತಾಂತ್ರಿಕ ದೋಷದಿಂದಾಗಿ ರಫೇಲ್ ಜೆಟ್ ಅಪಘಾತಕ್ಕೀಡಾಗಿದೆ' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವುದು ಸುಳ್ಳು ಸುದ್ದಿ ಎಂದು ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೊ (ಪಿಐಬಿ) ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪಿಐಬಿ, ‘ಅಂಬಾಲ ವಾಯನೆಲೆ ಬಳಿ ತಾಂತ್ರಿಕ ದೋಷ ಕಾಣಿಸಿಕೊಂಡು ರಫೇಲ್ ಜೆಟ್‌‌ ಯುದ್ಧ ವಿಮಾನವು ಅಪಘಾತಕ್ಕೀಡಾಗಿದೆ ಹಾಗೂ ಒಬ್ಬರು ಫೈಲಟ್ ಹುತಾತ್ಮರಾಗಿದ್ದಾರೆ ಎಂದು ಭಾರತೀಯ ವಾಯು ಸೇನೆ ಟ್ವೀಟ್‌ ಮಾಡಿದೆ ಎಂದು  ಹೇಳಲಾಗಿದೆ. ಈ ಮಾಹಿತಿ ಇರುವ ಚಿತ್ರವು ಎಡಿಟ್‌ ಮಾಡಿರುವುದಾಗಿದೆ. ಭಾರತೀಯ ವಾಯುಸೇನೆಯು ಅಂತಹ ಯಾವುದೇ ಟ್ವೀಟ್‌ ಮಾಡಿಲ್ಲ ಮತ್ತು ಅಂತಹ ಯಾವುದೇ ಘಟನೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು