'ಪ್ರಾಮಾಣಿಕ ರಾಜಕಾರಣಿಗಳ ಪಟ್ಟಿಯಲ್ಲಿ ಮೋದಿಗೆ ಅಗ್ರಸ್ಥಾನ' - ಇದು ಸುಳ್ಳು ಸುದ್ದಿ

ಮಂಗಳವಾರ, ಏಪ್ರಿಲ್ 23, 2019
32 °C

'ಪ್ರಾಮಾಣಿಕ ರಾಜಕಾರಣಿಗಳ ಪಟ್ಟಿಯಲ್ಲಿ ಮೋದಿಗೆ ಅಗ್ರಸ್ಥಾನ' - ಇದು ಸುಳ್ಳು ಸುದ್ದಿ

Published:
Updated:

ಬೆಂಗಳೂರು: ಪ್ರಾಮಾಣಿಕ ರಾಜಕಾರಣಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮೊದಲ ಸ್ಥಾನ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಮೆರಿಕ ಬಿಡುಗಡೆ ಮಾಡಿದ  50 ಮಂದಿ ಪ್ರಾಮಾಣಿಕ ರಾಜಕಾರಣಿಗಳ ಪಟ್ಟಿಯಲ್ಲಿ  ನರೇಂದ್ರ ಮೋದಿಗೆ ಮೊದಲ ಸ್ಥಾನ ಎಂಬ ಪೋಸ್ಟ್‌ ಹಲವಾರು ಫೇಸ್‍ಬುಕ್ ಪೇಜ್‍ಗಳಲ್ಲಿ ಶೇರ್ ಆಗಿದೆ.

ಈ ಪೋಸ್ಟ್ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್, ಇದು ಸತ್ಯಕ್ಕೆ ದೂರವಾದದು ಎಂದು ವರದಿ ಮಾಡಿದೆ.

ಫ್ಯಾಕ್ಟ್ ಚೆಕ್
50 ಪ್ರಾಮಾಣಿಕ ರಾಜಕಾರಣಿಗಳ ಪಟ್ಟಿಯನ್ನು ಇಂಟರ್ನೆಟ್‌ನಲ್ಲಿ ಹುಡುಕಿದರೂ ಅಂತದೊಂದ್ದು ಪಟ್ಟಿ ಸಿಕ್ಕಿಲ್ಲ. ಆದಾಗ್ಯೂ ಈ ಹಿಂದಿನ ವರ್ಷಗಳಲ್ಲಿ  ರಾಜಕಾರಣಿಗಳ ರ‍್ಯಾಂಕಿಂಗ್ ಪಟ್ಟಿ ಸಿಕ್ಕಿದ್ದು ಅದರಲ್ಲಿ ನರೇಂದ್ರ ಮೋದಿ ಹೆಸರಿದೆ.

ಫೋರ್ಬ್ಸ್ - ಜಗತ್ತಿನ ಪ್ರಬಲ ವ್ಯಕ್ತಿಗಳ ಪಟ್ಟಿ
ಅಮೆರಿಕದ ವಾಣಿಜ್ಯ ಮ್ಯಾಗಜಿನ್ ಫೋರ್ಬ್ಸ್ 2018ರಲ್ಲಿ ಪ್ರಕಟಿಸಿದ ಈ ಪಟ್ಟಿಯಲ್ಲಿ  ನರೇಂದ್ರ ಮೋದಿ 9ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಲ್ಲಿ  ಚೀನಾ ರಿಪಬ್ಲಿಕ್‌ನ  ಅಧ್ಯಕ್ಷ ಕ್ಸಿ ಜಿನ್‍ಪಿಂಗ್  ಮೊದಲನೇ ಸ್ಥಾನದಲ್ಲಿದ್ದಾರೆ.

ಫಾರ್ಚ್ಯೂನ್- ಜಗತ್ತಿನ ಬಲಿಷ್ಠ ನಾಯಕರು
2015ರಲ್ಲಿ ಜಗತ್ತಿನ 50 ಬಲಿಷ್ಠ ನಾಯಕರ ಪಟ್ಟಿಯನ್ನು ಫಾರ್ಚ್ಯೂನ್  ಮ್ಯಾಗಜಿನ್ ಪ್ರಕಟಿಸಿತ್ತು. ಅದರಲ್ಲಿ ಮೋದಿ 5 ನೇ ಸ್ಥಾನದಲ್ಲಿದ್ದರು. 2018ರಲ್ಲಿ ಪ್ರಕಟಿಸಿದ ಪಟ್ಟಿಯಲ್ಲಿ ಮೋದಿ ಹೆಸರಿಲ್ಲ. ಅಂದ ಹಾಗೆ  ಈ ಪಟ್ಟಿಯ ಮೊದಲ ಹತ್ತು ಸ್ಥಾನಗಳಲ್ಲಿ ಭಾರತದ ಯಾವುದೇ ವ್ಯಕ್ತಿಗಳ ಹೆಸರಿಲ್ಲ.

ಟೈಮ್ ನಿಯತಕಾಲಿಕದ ಪ್ರಭಾವಿ  ವ್ಯಕ್ತಿಗಳ ಪಟ್ಟಿ
 2017ರಲ್ಲಿ ಟೈಮ್ ಮ್ಯಾಗಜಿನ್ ಬಿಡುಗಡೆ ಮಾಡಿದ100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ ಹೆಸರಿತ್ತು.

ಆದರೆ ಅಮೆರಿಕ ಬಿಡುಗಡೆ ಮಾಡಿದ ಎನ್ನಲಾಗುವ ಅತಿ ಪ್ರಾಮಾಣಿಕ ನಾಯಕರ ಪಟ್ಟಿ ಬೂಮ್‍ಗೆ ಸಿಕ್ಕಿಲ್ಲ.

ಆದಾಗ್ಯೂ, ಮೋದಿ ಪ್ರಾಮಾಣಿಕ ಮತ್ತು ನೇರ ರಾಜಕಾರಣಇ ಎಂದು  ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದರು ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ಹೇಳಿರುವುದಾಗಿ  2015ರಲ್ಲಿ ಪಿಟಿಐ ವರದಿ ಮಾಡಿತ್ತು. 

ಬರಹ ಇಷ್ಟವಾಯಿತೆ?

 • 26

  Happy
 • 2

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !