ಹುಡುಗನೊಬ್ಬನಿಗೆ ಇಬ್ಬರು ಪೊಲೀಸರು ಮನಬಂದಂತೆ ಥಳಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ನಡೆದ ಘಟನೆಯ ವಿಡಿಯೊ ಇದು ಎಂದು ಹೇಳಲಾಗಿದೆ. ಹುಡುಗ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುತ್ತಿದ್ದ ಕಾರಣಕ್ಕೆ ಥಳಿಸಲಾಗಿದೆ ಎಂದು ವಿಡಿಯೊದಲ್ಲಿ ಬಿಂಬಿಸುವ ಪ್ರಯತ್ನ ನಡೆದಿದೆ. ‘ನಿಮ್ಮ ಮತದ ಮೌಲ್ಯವನ್ನು ನೀವೇ ನೋಡಿ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದ ಹುಡುಗನಿಗೆ ಉತ್ತರ ಪ್ರದೇಶ ಪೊಲೀಸರು ಸರಿಯಾದ ಪಾಠ ಕಲಿಸುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಯೋಗಿ ಸರ್ಕಾರದ ರೀತಿಯ ಸರ್ಕಾರ ಇರಬೇಕು’ ಎಂದು ಅಡಿಬರಹ ನೀಡಲಾಗಿದೆ.

ವೈರಲ್ ಆಗಿರುವ ಈ ವಿಡಿಯೊ ಜೊತೆ ಹಂಚುತ್ತಿರುವ ಮಾಹಿತಿ ಸುಳ್ಳು ಎಂದು ದಿ ಲಾಜಿಕಲ್ ಇಂಡಿಯನ್ ವೇದಿಕೆ ವರದಿ ಮಾಡಿದೆ. ಈ ವಿಡಿಯೊವನ್ನು 2021ರಲ್ಲಿ ಸೆರೆಹಿಡಿಯಲಾಗಿದೆ. ಉತ್ತರ ಪ್ರದೇಶದ ಚಾಂದೌಲಿಯಲ್ಲಿ ಈ ಘಟನೆ ನಡೆದಿತ್ತು. ಮೂವರು ಬಾಲಕರನ್ನು ಕಳ್ಳತನದ ಶಂಕೆಯ ಮೇಲೆಇಬ್ಬರು ಪೊಲೀಸರು ಮನಬಂದಂತೆ ಥಳಿಸಿದ್ದರು.ಈ ಘಟನೆಯ ವಿಡಿಯೊ ಹೊರಬಿದ್ದ ಬಳಿಕ ಇಬ್ಬರು ಪೊಲೀಸರನ್ನು ಅಲ್ಲಿಯ ಎಸ್ಪಿ ಅಮಾನತುಗೊಳಿಸಿದ್ದರು.ಈ ಕುರಿತು ಉತ್ತರ ಪ್ರದೇಶದ ಸ್ಥಳೀಯ ಪತ್ರಿಕೆಗಳು 2021ರ ಮೇ 6ರಂದೇ ವರದಿ ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.