ತೈವಾನ್‌ನಲ್ಲಿ ಮೊದಲ ಸಲಿಂಗ ವಿವಾಹ

ಮಂಗಳವಾರ, ಜೂನ್ 18, 2019
29 °C

ತೈವಾನ್‌ನಲ್ಲಿ ಮೊದಲ ಸಲಿಂಗ ವಿವಾಹ

Published:
Updated:
Prajavani

ತೈಪೆ: ತೈವಾನ್‌ನಲ್ಲಿ ಮೊದಲ ಅಧಿಕೃತ ಸಲಿಂಗ ವಿವಾಹ ಶುಕ್ರವಾರ ನೆರವೇರಿತು.

ಪುರುಷ ಸಲಿಂಗ ಜೋಡಿಗಳಾದ ಶೇನ್‌ ಲಿನ್‌ ಮತ್ತು ಮಾರ್ಕ್‌ ಯುವಾನ್ ಮದುವೆಯಾದರು. ಈ ಮೂಲಕ ಏಷ್ಯಾದಲ್ಲಿ ಲೈಂಗಿಕ ಅಲ್ಪಸಂಖ್ಯಾತರು (ಎಲ್‌ಜಿಬಿಟಿ) ನಡೆಸುತ್ತಿದ್ದ ಮೂರು ದಶಕಗಳ ಹೋರಾಟಕ್ಕೆ ಜಯ ಸಂದಿದೆ.

ಕಾಲೇಜು ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದ ಶೇನ್‌ ಲಿನ್‌ ಮತ್ತು ಮಾರ್ಕ್‌ ಯೋನ್‌ ಅವರು ಇಲ್ಲಿನ ಸರ್ಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದಾರೆ.

 ಕಳೆದ ವಾರ ತೈವಾನ್‌, ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿತ್ತು. ಇಂತಹ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದ ಏಷ್ಯಾದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ  ಪಾತ್ರವಾಗಿದೆ.

ಸಲಿಂಗ ವಿವಾಹಕ್ಕೆ ಅವಕಾಶ ನೀಡುವ ಮಸೂದೆಯ ಪರ ಹಾಗೂ ವಿರೋಧ ಹೋರಾಟಗಳು ಇಲ್ಲಿ ನಡೆದಿದ್ದವು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !