ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ: ತಂಗಳನ್ನ ಮಸಾಲಾ ಮಜ್ಜಿಗೆ, ರಾಗಿ ಸಿಹಿ ಮಜ್ಜಿಗೆ ಮಾಡುವ ವಿಧಾನ

ಬಿರುಬಿಸಿಲಿಗೆ ಅಗತ್ಯವಿರುವ ಹಲವು ಪೇಯಗಳ ರೆಸಿಪಿ ನೀಡಿದ್ದಾರೆ ಕೆ.ವಿ.ರಾಜಲಕ್ಷ್ಮಿ.
Published 26 ಏಪ್ರಿಲ್ 2024, 20:51 IST
Last Updated 26 ಏಪ್ರಿಲ್ 2024, 20:51 IST
ಅಕ್ಷರ ಗಾತ್ರ

ತಂಗಳನ್ನ ಮಸಾಲಾ ಮಜ್ಜಿಗೆ

ಬೇಕಾಗುವ  ಸಾಮಗ್ರಿ: ತಂಗಳನ್ನ 1 ಕಪ್, ತಾಜಾ  ಮಜ್ಜಿಗೆ 2 ಕಪ್,  ಸಣ್ಣದಾಗಿ ಕತ್ತರಿಸಿದ ಪುದೀನಾ ಎಲೆ ಸ್ವಲ್ಪ. ರುಚಿಗೆ ತಕ್ಕಷ್ಟು ಉಪ್ಪು,

ಮಾಡುವ ವಿಧಾನ : ತಂಗಳನ್ನವನ್ನು ಎರಡು ಕಪ್ ನೀರಿನಲ್ಲಿ ಚೆನ್ನಾಗಿ ಮೆತ್ತಗೆ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಎರಡು ಗಂಟೆಗಳ ಕಾಲ ಪಕ್ಕಕ್ಕಿಡಿ. ನಂತರ ಕಡೆದ ಮಜ್ಜಿಗೆಯನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕದಡಿ, ಪುದಿನಾಸೊಪ್ಪನ್ನು  ಉದುರಿಸಿ. 

ರಾಗಿ ಸಿಹಿ ಮಜ್ಜಿಗೆ

ಬೇಕಾಗುವ  ಸಾಮಗ್ರಿ: ರಾಗಿ ಹುರಿಹಿಟ್ಟು 1 ಚಮಚ, ತಾಜಾ ಮಜ್ಜಿಗೆ 1 ಲೋಟ, ಸಿಹಿಗೆ ತಕ್ಕಷ್ಟು ಬೆಲ್ಲ, ಚಿಟಿಕಿ ಏಲಕ್ಕಿ ಪುಡಿ, ಸಣ್ಣದಾಗಿ ತುಂಡರಿಸಿದ ಗೋಡಂಬಿ,ಬಾದಾಮಿ ಸ್ವಲ್ಪ. 
ಮಾಡುವ ವಿಧಾನ: ಮೊದಲಿಗೆ ಹುರಿಹಿಟ್ಟನ್ನು ಸ್ವಲ್ಪ ಮಜ್ಜಿಗೆ ಸೇರಿಸಿ ಗಂಟಿಲ್ಲದAತೆ ಕಲೆಸಿ ನಂತರ ಉಳಿದ ಮಜ್ಜಿಗೆ ಮತ್ತು ಇತರ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ರಾಗಿ ಮಸಾಲಾ ಮಜ್ಜಿಗೆ

ಬೇಕಾಗುವ  ಸಾಮಗ್ರಿ: ರಾಗಿ ಹುರಿಹಿಟ್ಟು 1 ಚಮಚ, ತಾಜಾ  ಮಜ್ಜಿಗೆ 1 ಲೋಟ,ಚಿಟಿಕೆ ಶುಂಠಿಪುಡಿ, ಚಿಟಿಕಿ ಜೀರಿಗೆ ಪುಡಿ,ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ. ರುಚಿಗೆ ತಕ್ಕಷ್ಟು ಉಪ್ಪು. 
ಮಾಡುವ ವಿಧಾನ : ಮೊದಲಿಗೆ ಹುರಿಹಿಟ್ಟನ್ನು ಸ್ವಲ್ಪ ಮಜ್ಜಿಗೆ ಸೇರಿಸಿ ಗಂಟಿಲ್ಲದAತೆ ಕಲೆಸಿ ನಂತರ ಉಳಿದ ಮಜ್ಜಿಗೆ ಮತ್ತು ಇತರ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ತಂಗಳನ್ನ ಸಿಹಿಮಜ್ಜಿಗೆ

ಬೇಕಾಗುವ  ಸಾಮಗ್ರಿ: ತಂಗಳನ್ನ 1 ಕಪ್,  ತಾಜಾ ಮಜ್ಜಿಗೆ 2 ಕಪ್, ಸಿಹಿಗೆ ತಕ್ಕಷ್ಟು ಸಕ್ಕರೆ, ಚಿಟಿಕಿ ಏಲಕ್ಕಿ ಪುಡಿ, ಸಣ್ಣದಾಗಿ ತುಂಡರಿಸಿದ ಗೋಡಂಬಿ,ಬಾದಾಮಿ ಸ್ವಲ್ಪ. ಮಾಡುವ ವಿಧಾನ: ತಂಗಳನ್ನವನ್ನು ಎರಡು ಕಪ್ ನೀರಿನಲ್ಲಿ ಚೆನ್ನಾಗಿ ಮೆತ್ತಗೆ ಮಾಡಿ  ಎರಡು ಗಂಟೆಗಳ ಕಾಲ ಪಕ್ಕಕ್ಕಿಡಿ. ನಂತರ ಸಕ್ಕರೆ, ಚಿಟಿಕಿ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಬಾದಾಮಿ,ಗೋಡಂಬಿ ತುಂಡುಗಳನ್ನು ಉದುರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT