ಅಗಸೆ ಬೀಜದ ರುಚಿಕರ ಅಡುಗೆಗಳು

ಭಾನುವಾರ, ಮಾರ್ಚ್ 24, 2019
32 °C

ಅಗಸೆ ಬೀಜದ ರುಚಿಕರ ಅಡುಗೆಗಳು

Published:
Updated:
Prajavani

ಅಗಸೆಬೀಜ ಪೌಷ್ಟಿಕಾಂಶಯುಕ್ತ ಧಾನ್ಯ. ಅಗಸೆಕಾಳಿನಿಂದ ಚಟ್ನಿ, ಚಪಾತಿ, ಲಾಡು ಮುಂತಾದ ರುಚಿಕರ ಅಡುಗೆಗಳನ್ನು ಮಾಡಬಹುದು.

ಅಗಸೆ ಬೀಜದ ಒಬ್ಬಟ್ಟು

ಬೇಕಾಗುವ ವಸ್ತುಗಳು : 1 ಕಪ್ ಅಗಸೆ ಬೀಜ, ½ ಕಪ್ ಚಿರೋಟಿ ರವೆ, ½ ಕಪ್ ಮೈದಾ ಹಿಟ್ಟು, ¾ ಕಪ್ ಬೆಲ್ಲ, 2 ಚಮಚ ತುಪ್ಪ, ಸ್ವಲ್ಪ ಏಲಕ್ಕಿ, 2 ಚಮಚ ಎಣ್ಣೆ.

ಮಾಡುವ ವಿಧಾನ : ಮೈದಾ, ಚಿರೋಟಿ ರವೆ, ಸ್ವಲ್ಪ ನೀರು, ಎಣ್ಣೆ ಸೇರಿಸಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಕಲಸಿ. ಬಾಣಲೆ ಒಲೆಯ ಮೇಲಿಟ್ಟು ಅಗಸೆ ಬೀಜ ಹಾಕಿ ಡ್ರೈ ಆಗಿ ಹುರಿಯಿರಿ. ಪಟ ಪಟ ಸಿಡಿದಾಗ ಒಲೆಯಿಂದ ಕೆಳಗಿಳಿಸಿ. ನಂತರ ಬೆಲ್ಲದ ಪುಡಿ ತುಪ್ಪ ಸೇರಿಸಿ ಏಲಕ್ಕಿ ಪುಡಿ ಉಂಡೆ ಮಾಡಿ. ಕಲಸಿದ ಮಿಶ್ರಣವನ್ನು ½ ಗಂಟೆ ಕಳೆದ ಮೇಲೆ ಚೆನ್ನಾಗಿ ನಾದಿ ಇಡಿ. ನಂತರ ಮೈದಾ ಮಿಶ್ರಣವನ್ನು ಕೈಯಲ್ಲಿ ಸ್ವಲ್ಪ ತಟ್ಟಿ ಅಗಸೆಬೀಜದ ಉಂಡೆಯನ್ನು ಇಟ್ಟು ಮುಚ್ಚಿ ಚಪಾತಿಯಂತೆ ಮೈದಾ ಮಿಶ್ರಣವನ್ನು ಕೈಯಲ್ಲಿ ಸ್ವಲ್ಪ ತಟ್ಟಿ ಅಗಸೆಬೀಜದ ಉಂಡೆಯನ್ನು ಇಟ್ಟು ಮುಚ್ಚಿ ಚಪಾತಿಯಂತೆ ಲಟ್ಟಿಸಿ. ತಟ್ಟಿದ ಒಬ್ಬಟ್ಟನ್ನು ಬಿಸಿ ಕಾವಲಿಯಲ್ಲಿ ಹಾಕಿ ಸ್ವಲ್ಪ ಹೊತ್ತಿನ ಬಳಿಕ ಕವುಚಿ ಹಾಕಿ ಹದವಾಗಿ ಬೇಯಿಸಿ ತೆಗೆಯಿರಿ. ಈಗ ರುಚಿಕರ ಪೌಷ್ಟಿಕ ಅಗಸೆ ಬೀಜದ ಒಬ್ಬಟ್ಟು ಸವಿಯಲು ಸಿದ್ಧ.

ಅಗಸೆ ಬೀಜದ ಲಾಡು
ಬೇಕಾಗುವ ವಸ್ತುಗಳು : 1 ಕಪ್ ಹುರಿದ ಅಗಸೆ ಕಾಳು, ¼ ಕಪ್ ಹುರಿದ ಶೇಂಗಾಬೀಜ , 1 ಕಪ್ ಬೆಲ್ಲ, ¼ ಕಪ್ ತುಪ್ಪ, 1 ಚಮಚ ಏಲಕ್ಕಿ ಪುಡಿ, ¼ ಕಪ್ ಒಣಕೊಬ್ಬರಿ, 2 ಚಮಚ ಹಾಲು.

ಮಾಡುವ ವಿಧಾನ : ಅಗಸೆ ಕಾಳನ್ನು ಸ್ವಲ್ಪ ಸ್ವಲ್ಪವೇ ಬಾಣಲೆಗೆ ಹಾಕಿ ಚೆನ್ನಾಗಿ ಸಿಡಿಯುವಂತೆ ಹುರಿದು ತೆಗೆಯಿರಿ. ಸ್ವಲ್ಪ ಆರಿದ ನಂತರ ಬೆಲ್ಲ, ಶೇಂಗಾಬೀಜ ಸೇರಿಸಿ ಪುಡಿ ಮಾಡಿ. ನಂತರ ಏಲಕ್ಕಿ ಪುಡಿ, ಒಣಕೊಬ್ಬರಿ, ತುಪ್ಪ, ಸೇರಿಸಿ ಚೆನ್ನಾಗಿ ಕಲಸಿ. ಹಾಲು ಸೇರಿಸಿ ಚೆನ್ನಾಗಿ ಬೆರೆಸಿ ಉಂಡೆ ಮಾಡಿ. ಈಗ ರುಚಿಯಾದ ಪೌಷ್ಟಿಕ ಲಾಡು ಸವಿಯಲು ರುಚಿ.

ಅಗಸೆ ಬೀಜದ ಚಟ್ನಿಪುಡಿ

ಬೇಕಾಗುವ ವಸ್ತುಗಳು : 1 ಕಪ್ ಅಗಸೆಬೀಜ, ¼ ಕಪ್ ಒಣಕೊಬ್ಬರಿ, ಒಣಮೆಣಸು 5-6, 1 ಎಸಳು ಕರಿಬೇವು, ನೆಲ್ಲಿಗಾತ್ರದ ಹುಳಿ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ಅಗಸೆ ಬೀಜ ಹಾಕಿ ಹುರಿಯಿರಿ. ಚೆನ್ನಾಗಿ ಸಿಡಿದ ನಂತರ ಒಲೆಯಿಂದ ಕೆಳಗಿಳಿಸಿ. ನಂತರ ಒಣಮೆಣಸು, ಕರಿಬೇವು ಹುರಿದು ತೆಗೆಯಿರಿ. ನಂತರ ಹುರಿದ ಅಗಸೆ ಬೀಜ, ಹುರಿದ ಒಣಮೆಣಸು, ಕರಿಬೇವು, ಒಣಕೊಬ್ಬರಿ, ಉಪ್ಪು, ಹುಳಿ ಸೇರಿಸಿ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಈಗ ರುಚಿಯಾದ ಚಟ್ನಿ ಪುಡೀ ಅನ್ನ, ಚಪಾತಿಯೊಂದಿಗೆ ಸವಿಯಲು ಸಿದ್ಧ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !