ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಟಾ ಫಟ್ ಬ್ರೇಕ್ ಫಾಸ್ಟ್: ಓಟ್ಸ್ ಉಪ್ಪಿಟ್ಟು, ಓಟ್ಸ್ ಬಾರ್ ಮತ್ತು ಮಿಲ್ಕ್‌‌ಶೇಕ್

Last Updated 10 ಜೂನ್ 2022, 19:30 IST
ಅಕ್ಷರ ಗಾತ್ರ

ಓಟ್ಸ್ ಉಪ್ಪಿಟ್ಟು

ಬೇಕಾಗುವ ಸಾಮಗ್ರಿಗಳು: 1 ಕಪ್ ಓಟ್ಸ್, 2 ಚಮಚ ಎಣ್ಣೆ, 1 ಚಮಚ ಸಾಸಿವೆ, 1 ಚಮಚ ಉದ್ದಿನ ಬೇಳೆ, 1 ಚಮಚ ಕಡಲೆಬೇಳೆ, 2 ಚಮಚ ನೆಲಗಡಲೆ, 4 ಹಸಿಮೆಣಸಿನಕಾಯಿ, 1 ಈರುಳ್ಳಿ, ½ ಚಮಚ ಅರಿಸಿನ, ½ ಕಪ್ ತುರಿದ ತೆಂಗಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು, ½ ನಿಂಬೆ,
1 ಕ್ಯಾರೆಟ್, ½ ಕಪ್ ಬಟಾಣಿ.

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಹುರಿಯಿರಿ. ಬಳಿಕ ಅದಕ್ಕೆ ಹಸಿಮೆಣಸಿನ ಕಾಯಿ, ಅರಿಸಿನ, ಈರುಳ್ಳಿ, ಉಪ್ಪು, ಕರಿಬೇವು ಹಾಕಿ ಫ್ರೈ ಮಾಡಿ. ಆಮೇಲೆ ಬಟಾಣಿ, ಕ್ಯಾರೆಟ್ ಸೇರಿಸಿ ಮಿಶ್ರಣ ಮಾಡಿ ಬೇಯಿಸಿ. ಬೆಂದ ಬಳಿಕ ಓಟ್ಸ್ ಮತ್ತು ಉಪ್ಪು, ತೆಂಗಿನಕಾಯಿ ಹಾಕಿ ಮತ್ತೆ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ, ನಿಂಬೆ ರಸ ಬೆರೆಸಿದರೆ ಓಟ್ಸ್ ಉಪ್ಪಿಟ್ಟು ರೆಡಿ.

ಓಟ್ಸ್ ಬಾರ್ (ಚಿಕ್ಕಿ)

ಬೇಕಾಗುವ ಸಾಮಗ್ರಿಗಳು: ರೋಲ್ಡ್ ಓಟ್ಸ್ 2 ಕಪ್, ಬಾದಾಮಿ ಚೂರು 1/2 ಕಪ್, ಕುಂಬಳಕಾಯಿ ಬೀಜ 1/2 ಕಪ್, ಸೂರ್ಯಕಾಂತಿ ಬೀಜ 1/2 ಕಪ್, ಸೀಡ್ ಲೆಸ್ ಖರ್ಜೂರ 2 ಕಪ್, ಪೀನಟ್ ಬಟರ್ 1/2 ಕಪ್, ಜೇನುತುಪ್ಪ 1/4 ಕಪ್, ವೆನಿಲ್ಲಾ ಸಾರ (extract) 1 ಚಮಚ, ಉಪ್ಪು ಚಿಟಿಕೆಯಷ್ಟು

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ಓಟ್ಸ್ ಹಾಕಿಕೊಂಡು ಡ್ರೈ ರೋಸ್ಟ್ ಮಾಡಿ ತೆಗೆದಿಡಿ. ನಂತರ ಅದೇ ಬಾಣಲೆಯಲ್ಲಿ ಮತ್ತೊಮ್ಮೆ ಕುಂಬಳ ಬೀಜ, ಬಾದಾಮಿ, ಸೂರ್ಯಕಾಂತಿ ಬೀಜಗಳನ್ನು ಕೆಂಪಗೆ ಹುರಿದು ಎತ್ತಿಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್‌ಗೆ ಖರ್ಜೂರ ಹಾಕಿಕೊಂಡು ಸ್ವಲ್ಪ ನೀರು ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ರುಬ್ಬಿದ ಖರ್ಜೂರಕ್ಕೆ ಪೀನಟ್ ಬಟರ್ ಸೇರಿಸಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ತಿರುವಿ. ಖರ್ಜೂರ ಮತ್ತು ಪೀನಟ್ ಬಟರ್ ಮಿಶ್ರಣವಾಗಿ ತಳ ಬಿಟ್ಟಾದ ಮೇಲೆ ಸ್ಟವ್‌ ಆರಿಸಿ.

ಈಗ ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಮೊದಲೇ ಹುರಿದು ತೆಗೆದಿರಿಸಿದ ಓಟ್ಸ್ , ಡ್ರೈ ಪ್ರುಟ್ಸ್, ನಟ್ಸ್‌ಗಳನ್ನೆಲ್ಲ ಒಟ್ಟುಗೂಡಿಸಿಕೊಳ್ಳಿ. ಮಿಕ್ಸಿಂಗ್ ಬೌಲ್‌ಗೆ ಜೇನುತುಪ್ಪ, ವೆನಿಲ್ಲಾ ಸಾರ, ಸ್ವಲ್ಪ ಉಪ್ಪು ಮತ್ತು ಖರ್ಜೂರದ ಮಿಶ್ರಣ ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಬೇಕಿಂಗ್ ಪೇಪರ್ ಇರುವ ಮೌಲ್ಡ್‌ನಲ್ಲಿ ತಯಾರಿಸಿದ ಮಿಶ್ರಣ ಸುರಿದು, ಸೆಟ್ ಮಾಡಿ. ನಾಲ್ಕು ಗಂಟೆಗಳ ಕಾಲ ಫ್ರೀಜ್‌ ಮಾಡಿಕೊಳ್ಳಿ. ಮಿಶ್ರಣ ಗಟ್ಟಿಯಾದ ಕೂಡಲೇ ಬೇಕಾದ ಆಕಾರದಲ್ಲಿ ಕಟ್ ಮಾಡಿ. ಸರ್ವ್‌ ಮಾಡಿ. ಆರೋಗ್ಯಪೂರ್ಣ ಓಟ್ಸ್ ಬಾರ್ ಸವಿಯಲು ಸಿದ್ಧ.

ಓಟ್ಸ್ ಮಿಲ್ಕ್ ಶೇಕ್

ಬೇಕಾಗುವ ಸಾಮಗ್ರಿಗಳು: ಓಟ್ಸ್ 1 ಕಪ್, ಬೀಜ ತೆಗೆದ ಖರ್ಜೂರ 1 ಕಪ್, ಐಸ್ ಕ್ಯೂಬ್ಸ್ 5-6, ಹಾಲು 1 ಕಪ್, ಫ್ರೆಶ್ ಕ್ರೀಂ 1 ಚಮಚ

ತಯಾರಿಸುವ ವಿಧಾನ: ಓಟ್ಸ್ ಮತ್ತು ಖರ್ಜೂರವನ್ನು ಪ್ರತ್ಯೇಕವಾಗಿ ಬಿಸಿನೀರಿನಲ್ಲಿ ಐದು ನಿಮಿಷ ನೆನೆಹಾಕಿರಿ. ನಂತರ ನೀರು ಬಸಿದು ಜ್ಯೂಸ್ ಜಾರ್‌ಗೆ ಹಾಕಿರಿ. ಓಟ್ಸ್ ಜೊತೆಗೆ ಖರ್ಜೂರ, ಐಸ್ ಕ್ಯೂಬ್, ಹಾಲು ಹಾಕಿಕೊಂಡು ನುಣ್ಣಗೆ ಬ್ಲೆಂಡ್ ಮಾಡಿಕೊಳ್ಳಿ. ಗ್ಲಾಸಿಗೆ ವರ್ಗಾಯಿಸಿಕೊಂಡು ಫ್ರೆಶ್ ಕ್ರೀಂ ಬೆರೆಸಿ ತಣ್ಣಗೆ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT