ಭಾನುವಾರದ ಬಾಡೂಟಕ್ಕೆ ಕುರಿಮಾಂಸ, ಕೋಳಿ ಮಾಂಸದ ಖಾದ್ಯಗಳಷ್ಟೇ ಏಕೆ? ಹಂದಿಮಾಂಸ ಪ್ರಿಯರು ಈ ಸ್ವಾದಿಷ್ಟ ರೆಸಿಪಿಗಳನ್ನೂ ಟ್ರೈ ಮಾಡಿ ನೋಡಬಹುದು.

ಚಿಲ್ಲಿ ಫ್ರೈ

ಬೇಕಾಗುವ ಸಾಮಗ್ರಿ: ಪೋರ್ಕ್ 1/2 ಕೆ.ಜಿ. (ಮಾಂಸ ಮತ್ತು ಚರ್ಬಿ), ಶುಂಠಿ 2 ಇಂಚು, ಬೆಳ್ಳುಳ್ಳಿ 2 ಉಂಡೆ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನ ಸೊಪ್ಪು ಸ್ವಲ್ಪ, ಮೆಣಸಿನಕಾಯಿ ಪುಡಿ 1 ಚಮಚ, ಅರಸಿನ ಸ್ವಲ್ಪ, ಪೋರ್ಕ್ ಮಸಾಲೆ 1 ಚಮಚ, ಈರುಳ್ಳಿ 2, ಹಸಿಮೆಣಸಿನಕಾಯಿ 4, ನಿಂಬೆಹಣ್ಣು 1/2 ಹೋಳು, ಎಣ್ಣೆ, ಉಪ್ಪು.

ತಯಾರಿಸುವ ವಿಧಾನ: ಶುಂಠಿ, ಬೆಳ್ಳುಳ್ಳಿ, 1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪಿಗೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಫ್ರೈ ಪ್ಯಾನ್ಗೆ ಪೋರ್ಕ್, ಉಪ್ಪು, ಅರಸಿನ ಪುಡಿ ಹಾಕಿ ಉಪ್ಪು ಹಿಡಿಯುವ ತನಕ ಹುರಿಯಿರಿ. ಆಮೇಲೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನಾ, ಹಸಿಮೆಣಸಿನಕಾಯಿ, ಮೆಣಸಿನಕಾಯಿ ಪುಡಿ, ರುಬ್ಬಿದ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ. ಆಗಾಗ ಚೆನ್ನಾಗಿ ತಿರುಗಿಸುತ್ತಿರಿ. ಬೇಕೆಂದರೆ ನೀರನ್ನು ಸೇರಿಸುತ್ತಿರಿ. ಪೋರ್ಕ್ ಮಸಾಲೆ ಹಾಕಿ ಸ್ವಲ್ಪ ಫ್ರೈ ಮಾಡಿ ಕೊನೆಗೆ ನಿಂಬೆಹಣ್ಣಿನ ರಸವನ್ನು ಸೇರಿಸಿ.

ರುಚಿ ರುಚಿ ಗ್ರೇವಿ

ಬೇಕಾಗುವ ಸಾಮಗ್ರಿ: ಪೋರ್ಕ್ 1/2 ಕೆ.ಜಿ. (ಮಾಂಸ ಮತ್ತು ಚರ್ಬಿ), ಶುಂಠಿ 2 ಇಂಚು, ಬೆಳ್ಳುಳ್ಳಿ 1 ಉಂಡೆ, ಹಸಿಮೆಣಸಿನಕಾಯಿ 4, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನಾ ಸೊಪ್ಪು ಸ್ವಲ್ಪ, ಕರಿಬೇವು 1 ಕಡ್ಡಿ, ಬ್ಯಾಡಗಿ ಮೆಣಸಿನಕಾಯಿ 4, ಮೆಣಸಿನಕಾಯಿ ಪುಡಿ 1 ಚಮಚ, ದನಿಯಾ ಪುಡಿ 1 ಚಮಚ, ಅರಸಿನ ಸ್ವಲ್ಪ, ಗರಂಮಸಾಲೆ ಸ್ವಲ್ಪ, ಪೆಪ್ಪರ್ ಪುಡಿ ಸ್ವಲ್ಪ, ಗಸಗಸೆ ಸ್ವಲ್ಪ, ಈರುಳ್ಳಿ 1, ನಿಂಬೆಹಣ್ಣು 1/2 ಹೋಳು, ಕೊಬ್ಬರಿಎಣ್ಣೆ, ಸಾಸಿವೆ, ಉಪ್ಪು.

ತಯಾರಿಸುವ ವಿಧಾನ: ಬೆಳ್ಳುಳ್ಳಿ, ಶುಂಠಿ, ಬ್ಯಾಡಗಿಮೆಣಸಿನಕಾಯಿ ಮತ್ತು ಹಸಿಮೆಣಸಿನಕಾಯಿಯನ್ನು ತರಿಯಾಗಿ ರುಬ್ಬಿಟ್ಟುಕೊಳ್ಳಿ. ಕುಕ್ಕರ್ಗೆ ಕೊಬ್ಬರಿಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಕರಿಬೇವು, ಈರುಳ್ಳಿ ಹಾಕಿ. ಸ್ವಲ್ಪ ಫ್ರೈ ಮಾಡಿದ ಮೇಲೆ ರುಬ್ಬಿದ ಪೇಸ್ಟ್, ತೊಳೆದ ಮಾಂಸ, ಪುದೀನಾ, ಉಪ್ಪು, ಅರಸಿನ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಮೆಣಸಿನಕಾಯಿ ಪುಡಿ, ಪೆಪ್ಪರ್ ಪುಡಿ, ಗರಂಮಸಾಲೆ ಪುಡಿ, ಗಸಗಸೆ ಮತ್ತು ಸ್ವಲ್ಪ ನೀರು ಹಾಕಿ ಮುಚ್ಚಳ ಮುಚ್ಚಿ ಮುಕ್ಕಾಲು ಭಾಗದಷ್ಟು ಬೇಯಿಸಿ. ಬಳಿಕ ಮುಚ್ಚಳ ತೆಗೆದು ದನಿಯಾ ಪುಡಿ ಹಾಕಿ ಚೆನ್ನಾಗಿ ಬೇಯಿಸಿ. ಕೊನೆಗೆ ನಿಂಬೆರಸ ಹಾಕಿ ಕೊತ್ತಂಬರಿ ಸೊಪ್ಪು ಉದುರಿಸಿ.

ಕ್ಯಾಪ್ಸಿಕಂ ಡ್ರೈ...

ಬೇಕಾಗುವ ಸಾಮಗ್ರಿ: ಪೋರ್ಕ್ 1/2 ಕೆ.ಜಿ., ಈರುಳ್ಳಿ 1, ಬೆಳ್ಳುಳ್ಳಿ 1 ಉಂಡೆ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನಾ ಸ್ವಲ್ಪ, ಹಸಿಮೆಣಸಿನಕಾಯಿ 5, ಕ್ಯಾಪ್ಸಿಕಂ 1, ಕರಿಬೇವು 1 ಕಡ್ಡಿ, ಮೆಣಸಿನಕಾಯಿ ಪುಡಿ, ಪೋರ್ಕ್ ಮಸಾಲೆ ತಲಾ 1 ಚಮಚ, ಪೆಪ್ಪರ್ ಪುಡಿ ಸ್ವಲ್ಪ, ಸೋಯಾ ಸಾಸ್, ಚಿಲ್ಲಿ ಸಾಸ್, ವಿನೆಗರ್, ಎಣ್ಣೆ, ಅರಸಿನ ಪುಡಿ, ಸಾಸಿವೆ, ಉಪ್ಪು.

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಹಂದಿಮಾಂಸಕ್ಕೆ ಅರಸಿನ ಪುಡಿ, ಮೆಣಸಿನಕಾಯಿ ಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ.

ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ, ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಉಪ್ಪು, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹುರಿದುಕೊಂಡ ಮೇಲೆ ಬೆಂದ ಪೋರ್ಕ್, ಪೆಪ್ಪರ್ ಪುಡಿ, ಪೋರ್ಕ್ ಮಸಾಲೆ, ಸೋಯಾ ಸಾಸ್, ಚಿಲ್ಲಿ ಸಾಸ್, ವಿನೆಗರ್ ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ. ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಹಾಕಿ ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬೇಯಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.