ದಿಢೀರ್ ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ತೋತಾಪುರಿ ಮಾವಿನಕಾಯಿ 2 ಕಪ್, ಅಚ್ಚ ಖಾರದ ಪುಡಿ 4 ಚಮಚ, ಸಕ್ಕರೆ 1 ಚಮಚ, ಎಣ್ಣೆ 1/4 ಕಪ್, ಸಾಸಿವೆ 1 ಚಮಚ, ಇಂಗು 1/2 ಚಮಚ, ರುಚಿಗೆ ತಕ್ಕಷ್ಟು ಪುಡಿ ಉಪ್ಪು.

ಮಾಡುವ ವಿಧಾನ: ಸಣ್ಣಗೆ ಹೆಚ್ಚಿದ ಮಾವಿನಕಾಯಿಯನ್ನು ಅಗಲವಾದ ಬೇಸಿನ್ನಲ್ಲಿ ಹಾಕಿ ಖಾರದ ಪುಡಿ, ಉಪ್ಪು, ಇಂಗು, ಸಕ್ಕರೆ ಬೆರೆಸಿ ಒಂದು ಬದಿಗಿಡಿ. ಎಣ್ಣೆಯಲ್ಲಿ ಸಾಸಿವೆ ಸಿಡಿಸಿ ಮಾವಿನಕಾಯಿ ಮಿಶ್ರಣವನ್ನು ಸೇರಿಸಿ, ಸಣ್ಣ ಉರಿಯಲ್ಲಿ ಚೆನ್ನಾಗಿ ಹೊಂದಿಕೊಳ್ಳುವಂತೆ ಕೈಯಾಡಿ, ಉರಿ ಆರಿಸಿ. ಎಣ್ಣೆ, ಉಪ್ಪು ಮುಂದಿದ್ದರೆ ಉಪ್ಪಿನಕಾಯಿಯನ್ನು ಹೆಚ್ಚು ದಿನ ಬಾಳುತ್ತದೆ.

ಅವಕಾಯಿ

ಬೇಕಾಗುವ ಸಾಮಗ್ರಿ: ಮಧ್ಯಮ ಗಾತ್ರಕ್ಕೆ ಹೆಚ್ಚಿದ ಹುಳಿ ಮಾವಿನಕಾಯಿ ಹೋಳುಗಳು 3 ಕಪ್, ಎಣ್ಣೆ 2 ಕಪ್, ಅಚ್ಚ ಮೆಣಸಿನ ಪುಡಿ 1 ಕಪ್, ಕಲ್ಲುಪ್ಪು 3/4 ಕಪ್, ಸಾಸಿವೆ 4 ಚಮಚ ಮೆಂತ್ಯ 1 ಚಮಚ, ಅರಿಶಿನ 1 ಚಮಚ, ಇಂಗು 2 ಚಮಚ.

ಮಾಡುವ ವಿಧಾನ: ಅಗಲದ ಪಾತ್ರೆಯಲ್ಲಿ ಮಾವಿನ ಹೋಳುಗಳನ್ನು ಹರಡಿ ಅದರ ಮೇಲೆ 1/4 ಕಪ್ ಎಣ್ಣೆ ಹಾಕಿ ಕಲೆಸಿ ಬದಿಗಿಡಿ. ಸಾಸಿವೆ ಮತ್ತು ಮೆಂತ್ಯೆ ಡ್ರೈ ರೋಸ್ಟ್ ಮಾಡಿ ಪುಡಿ ಮಾಡಿಕೊಳ್ಳಿ. ಮತ್ತೊಂದು ಮಿಕ್ಸಿಂಗ್ ಬೌಲ್ ನಲ್ಲಿ ಮೆಣಸಿನಪುಡಿ, ಪುಡಿಮಾಡಿದ ಕಲ್ಲುಪ್ಪು ಸಾಸಿವೆ, ಮೆಂತ್ಯೆ ಪುಡಿ, ಅರಿಸಿನ, ಇಂಗು ಇವೆಲ್ಲ ಹಾಕಿ ಉಳಿದ ಎಣ್ಣೆ ಸೇರಿಸಿ ಮಿಶ್ರಣ ಮಾಡಿ, ಮಾವಿನ ಹೋಳುಗಳ ಜತೆ ಸೇರಿಸಿ ಖಾರ ಎಲ್ಲ ಕಡೆ ಹರಡುವಂತೆ ಮಿಶ್ರಣ ಮಾಡಿ ಒಂದು ಜಾಡಿಯಲ್ಲಿ ಶೇಖರಿಸಿಟ್ಟುಕೊಳ್ಳಿ.

ಮಿಕ್ಸೆಡ್ ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿ: ಹೆಚ್ಚಿದ ಕ್ಯಾರೆಟ್, ಹಾಗಲಕಾಯಿ, ಶುಂಠಿ, ಮಧ್ಯಮ ಖಾರದ ಹಸಿಮೆಣಸಿನಕಾಯಿ ತಲಾ 1/2 ಕಪ್, ಎಣ್ಣೆ 1 ಕಪ್, ಅಚ್ಚ ಮೆಣಸಿನ ಪುಡಿ 1/2 ಕಪ್, ಕಲ್ಲುಪ್ಪು 1/2 ಕಪ್, ಸಾಸಿವೆ 2 ಚಮಚ, ಮೆಂತ್ಯ 1 ಚಮಚ, ಜೀರಿಗೆ 1 ಚಮಚ, ಇಂಗು 2 ಚಮಚ.

ಮಾಡುವ ವಿಧಾನ: ಮೊದಲಿಗೆ ಸಾಸಿವೆ, ಜೀರಿಗೆ, ಮೆಂತ್ಯ ಹುರಿದು ಪುಡಿಮಾಡಿಕೊಳ್ಳಿ. ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸಿಡಿಸಿ ಹೆಚ್ಚಿದ ಹೋಳುಗಳನ್ನು ಐದು ನಿಮಿಷ ಬಾಡಿಸಿ.

ನಂತರ ಅರೆದ ಮಸಾಲೆ ಪುಡಿ ಅಚ್ಚಮೆಣಸಿನಪುಡಿ, ಉಪ್ಪು ಸೇರಿಸಿ ಮಗುಚುತ್ತಿರಿ. ಮಿಶ್ರಣ ಚೆನ್ನಾಗಿ ಬೆರೆತು ಎಣ್ಣೆ ಬಿಡುವಾಗ ಬಂದಾಗ ಉರಿ ಆರಿಸಿ, ತಣಿಸಿ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಕೊಳ್ಳಿ.

ನಿಂಬೆಕಾಯಿ

ಬೇಕಾಗುವ ಸಾಮಗ್ರಿ: ನಿಂಬೆ ಹೋಳುಗಳು 2 ಕಪ್, ಅಚ್ಚ ಮೆಣಸಿನ ಪುಡಿ 3/4 ಕಪ್, ಕಲ್ಲುಪ್ಪು 1/2 ಕಪ್, ಸಾಸಿವೆ 4, ಚಮಚ ಮೆಂತ್ಯ 1 ಚಮಚ, ಇಂಗು 2 ಚಮಚ, ಎಣ್ಣೆ ಎರಡು ಚಮಚ.

ಮಾಡುವ ವಿಧಾನ: ಹೆಚ್ಚಿದ ನಿಂಬೆ ಹೋಳುಗಳಿಗೆ ಉಪ್ಪು ಸೇರಿಸಿ ಮಿಶ್ರಣ ಮಾಡಿ, ಒಂದು ಜಾಡಿಯಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ಊರಲು ಬಿಡಿ. ನಂತರ ಸ್ವಲ್ಪ ಮೆತ್ತಗಾದ ನಿಂಬೆ ಹೋಳುಗಳಿಗೆ ಪುಡಿ ಮಾಡಿದ ಸಾಸಿವೆ, ಮೆಂತ್ಯ, ಅಚ್ಚ ಮೆಣಸಿನಪುಡಿ, ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ,

ಮಾಕಳಿ ಬೇರಿನ ಉಪ್ಪಿನ ಕಾಯಿ

ಬೇಕಾಗುವ ಸಾಮಗ್ರಿ: ಮಾಕಳಿ ಬೇರು 10-12, ನಿಂಬೆ ಹಣ್ಣು 3, ಸಾಸಿವೆ 2 ಚಮಚ ಮೆಂತ್ಯ 2 ಚಮಚ, ಅಚ್ಚ ಮೆಣಸಿನಪುಡಿ 1/4 ಕಪ್, 1/4 ಉಪ್ಪು,

ಮಾಡುವ ವಿಧಾನ: ಮಾಕಳಿ ಬೇರಿನ ಸಿಪ್ಪೆ ತೆಗೆದು ನಡುವಿನ ಬೇರು/ಕಡ್ಡಿ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. (ಇದರ ಅಳತೆ ಅಂದಾಜು 1 ಕಪ್) ನಂತರ ನೀರಿನಲ್ಲಿ ಚೆನ್ನಾಗಿ ತೊಳೆದು ಒಂದು ಬಟ್ಟೆಯಿಂದ ಒರೆಸಿಕೊಳ್ಳಿ. ನಿಂಬೆಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಂದು ಅಗಲದ ಪಾತ್ರೆಯಲ್ಲಿ ಹೆಚ್ಚಿದ ಪದಾರ್ಥಗಳು ಮತ್ತು ಉಪ್ಪು ಸೇರಿಸಿ ಕಲೆಸಿಡಿ. ಸಾಸಿವೆ ಮತ್ತು ಮೆಂತ್ಯವನ್ನು ಡ್ರೈ ರೋಸ್ಟ್ ಮಾಡಿ ಪುಡಿಮಾಡಿಕೊಳ್ಳಿ. ಕಲಸಿದ ಹೋಳುಗಳಿಗೆ ಸಾಸಿವೆ, ಮೆಂತ್ಯ ಪುಡಿ, ಮೆಣಸಿನಪುಡಿ, ಸೇರಿಸಿ ಎಲ್ಲ ಹೋಳುಗಳಿಗೆ ಹರಡುವಂತೆ ಮಿಶ್ರಣ ಮಾಡಿ, ಜಾಡಿಗೆ ವರ್ಗಾಯಿಸಿ ಮುಚ್ಚಳ ಮುಚ್ಚಿಡಿ. ಮೂರು ದಿನಗಳ ನಂತರ ಉಪ್ಪಿನಕಾಯಿ ಚೆನ್ನಾಗಿ ಹೊಂದಿಕೊಂಡು ಬಳಸಲು ಯೋಗ್ಯವಾಗಿರುತ್ತದೆ.

ಹೇರಳೆಕಾಯಿ

ಬೇಕಾಗುವ ಸಾಮಗ್ರಿ: ಹೆಚ್ಚಿದ ಹೇರಳೆ ಕಾಯಿ ಹೋಳುಗಳು 2 ಕಪ್, ಅಚ್ಚ ಮೆಣಸಿನ ಪುಡಿ 3/4 ಕಪ್, ಕಲ್ಲುಪ್ಪು 1/2 ಕಪ್, ಸಾಸಿವೆ 4 ಚಮಚ ಮೆಂತ್ಯ 1 ಚಮಚ, ಇಂಗು 2 ಚಮಚ.

ಮಾಡುವ ವಿಧಾನ: ಹೇರಳೆಕಾಯಿಗೆ ಉಪ್ಪು ಸೇರಿಸಿ ಒಂದು ಜಾಡಿಯಲ್ಲಿ ಎಂಟು ದಿನಗಳ ಕಾಲ ನೆನೆಯಲು ಬಿಡಿ. ಉಪ್ಪು ಹೀರಿದ ಕಾಯಿ ಸ್ವಲ್ಪ ಮೆತ್ತಗಾದಾಗ ಪುಡಿ ಮಾಡಿದ ಸಾಸಿವೆ, ಮೆಂತ್ಯ, ಅಚ್ಚ ಮೆಣಸಿನಪುಡಿ, ಉಪ್ಪು,ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.