ಮುಂಡಗೋಡ ತಾಲ್ಲೂಕಿನ ಕಾತೂರ ಅರಣ್ಯ ವ್ಯಾಪ್ತಿಯ ಹೆದ್ದಾರಿಯಲ್ಲಿ ಇತ್ತೀಚೆಗೆ ಒಂಟಿಸಲಗವೊಂದು ಹಗಲಿನಲ್ಲಿಯೇ ಸಂಚರಿಸಿ, ವಾಹನ ಸವಾರರಲ್ಲಿ ಭಯವನ್ನುಂಟು ಮಾಡಿತು. ಪಾಳಾ–ಕಾತೂರ ಹೆದ್ದಾರಿ ಮಧ್ಯದ ತಿರುವಿನಲ್ಲಿ ಕಾಡಾನೆಯು ರಸ್ತೆ ದಾಟುತ್ತಿರುವ ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.