ಹೊಟ್ಟೆಪಾಡಿಗಾಗಿ ಊರೂರು ಅಲೆದಾಡುವುದು ಹಲವರಿಗೆ ಅನಿವಾರ್ಯ. ಅವರ ಪೈಕಿ ಜೋಗಿ ಸಮುದಾಯದವರು ಪ್ರಮುಖರು. ಅವರು ಊರಿಂದ ಊರಿಗೆ ಕಾಲ್ನಡಿಗೆಯಲ್ಲಿಯೇ ಹೋಗಿ ಭಿಕ್ಷಾಟನೆ ಮಾಡುತ್ತಾರೆ. ಈ ರೀತಿ ಸಾಗುತ್ತಿದ್ದ ವೃದ್ಧ ಜೋಗಿಯೊಬ್ಬ ಭಾನುವಾರ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನ ಮೊಗಲಹಳ್ಳಿ ಬಳಿ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ. -ಪ್ರಜಾವಾಣಿ ಚಿತ್ರ