ಶನಿವಾರ, ಏಪ್ರಿಲ್ 1, 2023
29 °C

SSLC Exam 2023: ಪರೀಕ್ಷೆ ದಿಕ್ಸೂಚಿ - ವಿಜ್ಞಾನ ಮಾದರಿ ಪ್ರಶ್ನೋತ್ತರ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

SSLC Exam 2023: ಪರೀಕ್ಷೆ ದಿಕ್ಸೂಚಿ - ವಿಜ್ಞಾನ ಮಾದರಿ ಪ್ರಶ್ನೋತ್ತರ

ಮಾದರಿ ಪ್ರಶ್ನೋತ್ತರ

I) →ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಅದರ ಕ್ರಮಾಕ್ಷರದೊಂದಿಗೆ ಪೂರ್ಣ ಉತ್ತರವನ್ನು ಬರೆಯಿರಿ

1) ಬ್ಯೂಟನೋನ್ ನಾಲ್ಕು ಕಾರ್ಬನ್ ಪರಮಾಣು ಹೊಂದಿರುವ ಸಂಯುಕ್ತವಾಗಿದ್ದು, ಇದರಲ್ಲಿನ ಕ್ರಿಯಾಗುಂಪೆಂದರೆ

→(ಎ) ಕಾರ್ಬಾಕ್ಸಿಲಿಕ್ ಆಮ್ಲ (ಬಿ) ಆಲ್ಡಿಹೈಡ್

→(ಸಿ) ಕೀಟೋನ್ (ಡಿ) ಆಲ್ಕೋಹಾಲ್

ಉತ್ತರ:- (ಸಿ)

2) ಆವರ್ತಕ ಕೋಷ್ಟಕದ ಆವರ್ತಗಳಲ್ಲಿ ಎಡದಿಂದ ಬಲಕ್ಕೆ ಹೋದಂತೆ ತೋರುವ ಪ್ರವೃತ್ತಿಗೆ ಸಂಬಂಧಿಸಿದಂತೆ ಇರುವ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ಸರಿಯಲ್ಲ.‌

(ಎ) ಧಾತುಗಳ ಲೋಹೀಯ ಸ್ವಭಾವ ಕಡಿಮೆಯಾಗುತ್ತದೆ

(ಬಿ) ವೇಲೆನ್ಸ್ ಇಲೆಕ್ಟ್ರಾನ್‌ಗಳ ಸಂಖ್ಯೆ ಹೆಚ್ಚಾಗುತ್ತದೆ

(ಸಿ) ಪರಮಾಣುಗಳು ಹೆಚ್ಚು ಸುಲಭವಾಗಿ ತಮ್ಮ ಇಲೆಕ್ಟ್ರಾನ್‌ಗಳನ್ನು ಕಳೆದುಕೊಳ್ಳುತ್ತವೆ

(ಡಿ) ಆಕ್ಸೈಡ್‌ಗಳು ಹೆಚ್ಚು ಆಮ್ಲೀಯವಾಗುತ್ತವೆ

ಉತ್ತರ:- (ಸಿ)

3) ಪರಾಗಕೋಶವು ಈ ಕೆಳಗಿನವುಗಳನ್ನು ಹೊಂದಿದೆ.

(ಎ) ಪುಷ್ಪಪತ್ರಗಳು →(ಬಿ)ಅಂಡಾಣುಗಳು

(ಸಿ) ಶಲಾಕ →→(ಡಿ)ಪರಾಗರೇಣುಗಳು

ಉತ್ತರ:- (ಡಿ)

4) ಸಮರೂಪಿ ಅಂಗಗಳಿಗೆ ಉದಾಹರಣೆಯೆಂದರೆ,______

ಎ) ನಮ್ಮ ತೋಳು ಮತ್ತು ನಾಯಿಯ ಮುಂಗಾಲು

ಬಿ) ನಮ್ಮ ಹಲ್ಲುಗಳು ಮತ್ತು ಆನೆಯ ದಂತಗಳು

ಸಿ) ಆಲೂಗೆಡ್ಡೆ ಮತ್ತು ಹುಲ್ಲಿನ ಉಪಕಾಂಡಗಳು

ಡಿ) ಮೇಲಿನ ಎಲ್ಲವೂ

ಉತ್ತರ:- ಡಿ) ಮೇಲಿನ ಎಲ್ಲವೂ

(ಅನುವಂಶೀಯತೆ ಮತ್ತು ಜೀವವಿಕಾಸ)

5) ನಿಮ್ನ ದರ್ಪಣದಿಂದ ಉಂಟಾದ ಪ್ರತಿಬಿಂಬವು ಮಿಥ್ಯ, ನೇರ ಮತ್ತು ವಸ್ತುವಿಗಿಂತ ದೊಡ್ಡದಾಗಿದೆ. ಹಾಗಾದರೆ ವಸ್ತುವಿನ ಸ್ಥಾನ ಎಲ್ಲಿರಬೇಕು ?

(ಎ) ಪ್ರಧಾನ ಸಂಗಮ ಮತ್ತು ವಕ್ರತಾ ಕೇಂದ್ರಗಳ ನಡುವೆ.

(ಬಿ) ವಕ್ರತಾ ಕೇಂದ್ರದಲ್ಲಿ (ಸಿ) ವಕ್ರತಾ ಕೇಂದ್ರದಿಂದ ದೂರದಲ್ಲಿ

(ಡಿ) ಧ್ರುವ ಮತ್ತು ಪ್ರಧಾನ ಸಂಗಮದ ನಡುವೆ

ಉತ್ತರ:- (ಡಿ)

6) ಮಾನವನ ಕಣ್ಣು ತನ್ನ ಕಣ್ಣಿನ ಮಸೂರದ ಸಂಗಮದೂರವನ್ನು ವಿವಿಧ ದೂರಗಳಲ್ಲಿರುವ ವಸ್ತುಗಳು ಕಾಣುವಂತೆ ಸರಿಹೊಂದಿಸಲು ಕಾರಣ.

(ಎ) ಪ್ರಿಸ್‌ಬಯೊಪಿಯಾ (ಬಿ) ಕಣ್ಣಿನ ಹೊಂದಾಣಿಕೆ

(ಸಿ) ಸಮೀಪದೃಷ್ಟಿ (ಡಿ) ದೂರದೃಷ್ಟಿ

ಉತ್ತರ:- (ಬಿ)

7) ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಈ ಕೆಳಗಿನವುಗಳಲ್ಲಿ ಯಾವ ವಿಧಾನ ಸೂಕ್ತವಾಗಿದೆ?

(ಎ) ಗ್ರೀಸ್ ಹಚ್ಚುವುದು (ಬಿ) ಬಣ್ಣ ಹಚ್ಚುವುದು

(ಸಿ) ಸತುವಿನ ಲೇಪನ ಮಾಡುವುದು (ಡಿ) ಮೇಲಿನ ಎಲ್ಲವೂ

ಉತ್ತರ:- (ಸಿ)

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1) ತೆರೆದ ಪತ್ರರಂಧ್ರವನ್ನು ತೋರಿಸುವ ಚಿತ್ರವನ್ನು ಬರೆದು ಕೆಳಗಿನ ಭಾಗಗಳನ್ನು ಗುರುತಿಸಿ

1) ಕಾವಲು ಕೋಶ 2) ಪತ್ರರಂಧ್ರ 3) ಕ್ಲೋರೋ ಪ್ಲಾಸ್ಟ್

ಉತ್ತರ:-

2) ಶಕ್ತಿಯ ಉತ್ತಮ ಆಕಾರದ ಗುಣಲಕ್ಷಣಗಳನ್ನು ಪಟ್ಟಿ ಮಾಡಿ

ಉತ್ತರ:-→l ಸುಲಭವಾಗಿ ದೊರೆಯಬೇಕು

→→l ಸುಲಭವಾಗಿ ಸಂಗ್ರಹಿಸುವಂತೆ ಇರಬೇಕು

→→l ಮಿತವ್ಯಯಕಾರಿಯಾಗಿರಬೇಕು

→→l ಸುಲಭವಾಗಿ ಸಾಗಿಸಲು ಸಾಧ್ಯವಾಗುವಂತೆ ಇರಬೇಕು

→→l ಅದು ಪ್ರತಿ ಘಟಕ ಪರಿಮಾಣ ಅಥವಾ ದ್ರವ್ಯರಾಶಿಗೆ ಅತಿಹೆಚ್ಚು ಕೆಲಸ ಮಾಡಬೇಕು

3) ವಿಭವಾಂತರದ ಅಂತರರಾಷ್ಟ್ರೀಯ ಏಕಮಾನ ಯಾವುದು? ವಿಭವಾಂತರವನ್ನು ಅಳೆಯಲು ಬಳಸುವ ಸಾಧನವನ್ನು ಹೆಸರಿಸಿ.

ಉತ್ತರ:- l ವಿಭವಾಂತರದ ಅಂತಾರಾಷ್ಟ್ರೀಯ ಏಕಮಾನ :- ವೋಲ್ಟ್

l ವಿಭವಾಂತರವನ್ನು ಅಳೆಯಲು ಬಳಸುವ ಸಾಧನ:- ವೋಲ್ಟ್ ಮೀಟರ್

4) ಮಾನವನ ಹೃದಯದ ಛೇದ ನೋಟವನ್ನು ತೋರಿಸುವ ಚಿತ್ರ ಬರೆದು ಭಾಗವನ್ನು ಹೆಸರಿಸಿ

ಉತ್ತರ:-

5) ವಿದ್ಯುದ್ವಿಭಜನೀಯ ಶುದ್ಧೀಕರಣದ ಕುರಿತು ಬರೆಯಿರಿ

ಉತ್ತರ:- ತಾಮ್ರ, ಸತು, ತವರ, ನಿಕ್ಕಲ್‌, ಬೆಳ್ಳಿ, ಚಿನ್ನ ಇತ್ಯಾದಿಗಳಂಥ ಅನೇಕ ಲೋಹಗಳನ್ನು ವಿದ್ಯುದ್ವಿಭಜನೀಯ ವಿಧಾನದಿಂದ ಶುದ್ಧೀಕರಿಸುವರು. ಈ ವಿಧಾನದಲ್ಲಿ ಅಶುದ್ಧ ಲೋಹವನ್ನು ಧನಾಗ್ರಕ್ಕೆ, ಶುದ್ಧಲೋಹದ ತೆಳು ತಗಡನ್ನು ಋಣಾಗ್ರಕ್ಕೆ ಜೋಡಿಸುವರು. ಲೋಹೀಯ ಲವಣದ ದ್ರಾವಣವನ್ನು ವಿದ್ಯುದ್ವಿಭಜನೀಯವಾಗಿ ಬಳಸುವರು. ವಿದ್ಯುದ್ವಿಭಾಜ್ಯದ ಮೂಲಕ ವಿದ್ಯುತ್ ಅನ್ನು ಹಾಯಿಸಿದಾಗ ಧನಾಗ್ರದ ಅಶುದ್ಧ ಲೋಹವು ವಿದ್ಯುದ್ವಿಭಜನೀಯ ದ್ರಾವಣದಲ್ಲಿ ಕರಗುವುದು. ಅಷ್ಟೇ ಪ್ರಮಾಣದ ಶುದ್ಧ ಲೋಹವು ವಿದ್ಯುದ್ವಿಭಜನೀಯ ದ್ರಾವಣದಿಂದ ಋಣಾಗ್ರದ ಮೇಲೆ ಸಂಗ್ರಹಗೊಳ್ಳುವುದು. ಕರಗುವ ಕಶ್ಮಲಗಳು ದ್ರಾವಣಕ್ಕೆ ಸೇರಿಕೊಂಡರೆ, ಕರಗದೇ ಇರುವ ಕಶ್ಮಲಗಳು ಧನಾಗ್ರದ ಕೆಳಭಾಗದಲ್ಲಿ ಸಂಗ್ರಹಗೊಳ್ಳುತ್ತವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು