ಪ್ರವಾಸಿ ತಾಣವಾದ ಜೈಲು !

ಜಗತ್ತಿನಲ್ಲಿ ಮಾನವ ನಿರ್ಮಿತ ಅದೆಷ್ಟೋ ವಸ್ತು, ಸ್ಥಳ, ಕಟ್ಟಡಗಳು ನಮಗೆ ಅಚ್ಚರಿ ತರಿಸುತ್ತವೆ. ಕಂಡು–ಕೇಳಿರಿಯದ ಅದೆಷ್ಟೋ ವಿಷಯಗಳು ನಮ್ಮಲ್ಲಿ ಒಂದು ಬಗೆಯ ವಿಸ್ಮಯವನ್ನು ಮೂಡಿಸುತ್ತವೆ. ಹೀಗೆ ಅಚ್ಚರಿ ಮೂಡಿಸುವ ವಿಷಯಗಳಲ್ಲಿ ಸ್ಯಾನ್ ಫ್ರಾನಿಸ್ಕೋದಲ್ಲಿರುವ ಅಲ್ಕಾಟ್ರಾಜ್ ಜೈಲು ಕೂಡ ಒಂದು. 1868ರಲ್ಲಿ ಇದನ್ನು ಮಿಲಿಟರಿ ಜೈಲು ಎಂದು ಅಧಿಕೃತವಾಗಿ ಹೆಸರಿಸಲಾಯಿತು.
ಅಲ್ಕಾಟ್ರಾಜ್ ಎಂಬ ದ್ವೀಪದಲ್ಲಿರುವ ಕಾರಣಕ್ಕೆ ಈ ಜೈಲಿಗೆ ಅಲ್ಕಾಟ್ರಾಜ್ ಎಂಬ ಹೆಸರು ಬಂದಿದೆ. ಇದರ ವಿಶೇಷವೆಂದರೆ ಇಲ್ಲಿ ಒಮ್ಮೆ ಕೂಡಿ ಹಾಕಿದರೆ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲವಂತೆ. ಆದರೆ, ಫ್ರಾಂಕ್ ಮಾರೀಸ್ ಎಂಬ ಕೈದಿ, ತನ್ನ ಸಂಗಡಿಗರೊಂದಿಗೆ ಜೈಲಿನಲ್ಲಿ ಬೊಂಬೆಗಳನ್ನು ಮಾಡಿಟ್ಟು, ಅಲ್ಲಿಂದ ಪರಾರಿಯಾಗುವ ಮೂಲಕ ಅಮೆರಿಕನ್ನರಿಗೆ ದಂಗುಬಡಿಸಿದ್ದನಂತೆ.
ಈ ಕಥೆಯನ್ನೇ ಆಧರಿಸಿ ‘ದಿ ಎಸ್ಕೇಪ್ ಫ್ರಂ ಅಲ್ಕಾಟ್ರಾಜ್’ ಎಂಬ ಸಿನಿಮಾ ಕೂಡ ಬಂದಿದೆ.
ಇಂಥ ಇತಿಹಾಸವಿರುವ ಹಾಗೂ ಕಠಿಣ ಕಾರಾಗೃಹವಾಗಿದ್ದ ಅಲ್ಕಾಟ್ರಾಜ್ ಜೈಲು ಇಂದು ಪ್ರವಾಸಿತಾಣವಾಗಿದೆ. ಸಮುದ್ರದ ನೀಲಿ ನೀರಿನಿಂದ ಕೂಡಿದ ಈ ಪುಟ್ಟ ದ್ವೀಪ ಪ್ರವಾಸಿಗರ ನೆಚ್ಚಿನ ತಾಣವೂ ಹೌದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.