ನವದೆಹಲಿ: ‘ಮನುಷ್ಯನ ಆಯಸ್ಸಿನಲ್ಲಿ 50 ವರ್ಷ ಎಂಬುದು ಒಂದು ಗಡಿ. ಒಮ್ಮೆ ಇದನ್ನು ದಾಟಿದರೆ ರಕ್ತನಾಳಗಳು ಹಿಂದಿಗಿಂತಲೂ ಬೇಗನೆ ವಯಸ್ಸು ಹೆಚ್ಚಿಸುತ್ತದೆ ಮತ್ತು ದೇಹವನ್ನು ದುರ್ಬಲಗೊಳಿಸುತ್ತಾ ಸಾಗುತ್ತದೆ’ ಎಂದು ಐದು ದಶಕಗಳ ಕಾಲ ಮನುಷ್ಯನ ಅಂಗಾಂಶಗಳ ಮಾದರಿಯನ್ನು ಅಧ್ಯಯನ ನಡೆಸಿದ ಸಂಸ್ಥೆಯೊಂದು ಹೇಳಿದೆ.

ಜರ್ನಲ್ ಸೆಲ್ ಎಂಬ ವಿಜ್ಞಾನ ಸಂಬಂಧಿತ ನಿಯತಕಾಲಿಕೆಯಲ್ಲಿ ಈ ಮಾಹಿತಿ ಪ್ರಕಟಗೊಂಡಿದೆ. ಮನುಷ್ಯದ ದೇಹದ ಪ್ರೊಟೀನ್ಗಳನ್ನು ವಿಶ್ಲೇಷಿಸಿರುವ ಚೈನೀಸ್ ಅಕಾಡೆಮಿಯ ವಿಜ್ಞಾನಿಗಳು ವಯಸ್ಸಾಗುವ ಪ್ರಕ್ರಿಯೆಗೆ ಉತ್ತರ ಕಂಡುಕೊಂಡಿದ್ದಾರೆ.

ನೇಚರ್ ನಿಯತಕಾಲಿಕೆಯಲ್ಲಿ ಕಳೆದ ವರ್ಷ ಪ್ರಕಟಗೊಂಡಿದ್ದ ಲೇಖನದಲ್ಲಿ 44ರಿಂದ 60ರ ವಯೋಮಾನದಲ್ಲಿ ದೇಹದಲ್ಲಾಗುವ ಗಮನಾರ್ಹ ಬದಲಾವಣೆ ಕುರಿತು ಹೇಳಲಾಗಿತ್ತು. ಈ ವಯೋಮಾನದಲ್ಲಿ ಹೃದಯ ಮತ್ತು ರೋಗನಿರೋಧಕ ಶಕ್ತಿಯ ಮೇಲೂ ಉಂಟಾಗುವ ಪರಿಣಾಮಗಳನ್ನು ಲೇಖನದಲ್ಲಿ ಉಲ್ಲೇಖಿಸಲಾಗಿತ್ತು.

ಸೆಲ್ ನಡೆಸಿದ ಅಧ್ಯಯನದಲ್ಲಿ 50ರ ವಯೋಮಾನದವರೆಗೆ 13 ಜನರ ದೇಹದ ವಿವಿಧ ಅಂಗಗಳ ಸುಮಾರು 500 ಮಾದರಿಗಳನ್ನು ಅಧ್ಯಯನಕ್ಕೆ ಪಡೆಯಲಾಗಿತ್ತು. ಇದರಲ್ಲಿ ಹೃದಯ, ರೋಗನಿರೋಧಕ ಹೆಚ್ಚಿಸುವ ಅಂಗ ಮತ್ತು ಜೀರ್ಣಾಂಗದ ಜೀವಕೋಶಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದಕ್ಕಾಗಿ ಪ್ರೊಟೀನ್ ಅನ್ನು ಆಳವಾಗಿ ವಿಶ್ಲೇಷಿಸುವ ಪ್ರೊಟೊಮಿಕ್ಸ್ ಮೂಲಕ ವಿಜ್ಞಾನಿಗಳು ಅಧ್ಯಯನ ನಡೆಸಿದರು.

ರಕ್ತನಾಳಗಳೂ ಜೀವಕೋಶಗಳೇ ಆಗಿದ್ದು, ಅವುಗಳು ಮನುಷ್ಯನನ್ನು ಆತನ 50 ವರ್ಷದ ನಂತರದಲ್ಲಿ ಬೇಗನೆ ವಯಸ್ಸಾಗುವಂತೆ ಮಾಡುತ್ತದೆ. ಅಲ್ಲಿಂದ ಮುಂದೆ ದೇಹವನ್ನು ದುರ್ಬಲಗೊಳಿಸುತ್ತಾ ಸಾಗುತ್ತದೆ. ಈ ವಯೋಮಾನದ ಗಡಿಯ ನಂತರ ದೇಹದಲ್ಲಿನ ಪ್ರೊಟೀನ್ಗಳು ತಮ್ಮ ಸ್ವರೂಪವನ್ನು ಬದಲಿಸಿಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹೃದಯದಿಂದ ರಕ್ತವನ್ನು ಅಪಧಮನಿಗಳಿಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮಹಾಪಧಮನಿಗೆ ವಯಸ್ಸಾಗಿದ್ದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು ಹಂತಹಂತವಾಗಿ ದೇಹದಲ್ಲಿನ ಇತರ ರಕ್ತನಾಳಗಳಿಗೂ ವಯಸ್ಸಾಗುವಂತೆ ಮಾಡುತ್ತದೆ. ಅಲ್ಲಿಂದ ಮುಂದೆ ಅಂಗಾಂಗಗಳೂ ತಮ್ಮ ಕೆಲಸಗಳನ್ನು ಕಡಿಮೆ ಮಾಡಲಾರಂಭಿಸುತ್ತವೆ ಎಂದಿದ್ದಾರೆ.

‘ಈ ಅಧ್ಯಯನಕ್ಕಾಗಿ ಪ್ರೊಟೀನ್ ಆಧಾರಿತ ವಯಸ್ಸಾಗುವ ಜೈವಿಕ ಗಡಿಯಾರವನ್ನು ವಿಜ್ಞಾನಿಗಳು ಅಳವಡಿಸಿದ್ದರು. ಅದರ ಮೂಲಕ ವಯಸ್ಸಾಗುತ್ತಾ ಅಂಗಾಂಗಗಳ ಮೇಲಾಗುವ ಪರಿಣಾಮಗಳು ಮತ್ತು ಅನಾರೋಗ್ಯದ ಅಪಾಯಗಳನ್ನು ಪತ್ತೆ ಮಾಡಲಾಗಿತ್ತು’ ಎಂದು ಲೇಖನದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.