ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೆ ಭುಜ ಹಿಡಿದಂತಾಗುತ್ತಿದೆಯೇ, ಅದು ‘ಫ್ರೋಝನ್‌ ಶೋಲ್ಡರ್’ ಸಮಸ್ಯೆ ಇರಬಹುದು!

Published 20 ಮಾರ್ಚ್ 2024, 11:14 IST
Last Updated 20 ಮಾರ್ಚ್ 2024, 11:14 IST
ಅಕ್ಷರ ಗಾತ್ರ

ಫ್ರೋಝನ್ ಶೋಲ್ಡರ್ (Frozen Shoulder) ಅಥವಾ ಹೆಪ್ಪುಗಟ್ಟಿದ ಭುಜ ಎಂದು ಕರೆಯಲ್ಪಡುವ ಸಮಸ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ನೋವಿನ ಜೊತೆಗೆ ದೈನಂದಿನ ಜೀವನದಲ್ಲಿ ಅಡ್ಡಿಯುಂಟು ಮಾಡುತ್ತದೆ. ಆದ್ದರಿಂದ ಫ್ರೋಝನ್ ಶೋಲ್ಡರ್ ಅಂದರೆ ಏನು ಮತ್ತು ಇದಕ್ಕೆ ಕಾರಣ ಏನು? ಮತ್ತು ಚಿಕಿತ್ಸೆಗೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಕುಳಿತುಕೊಂಡೇ ಕೆಲಸ ಮಾಡುತ್ತಾರೆ, ಹೆಚ್ಚಾಗಿ ಐಟಿ-ಬಿಟಿ ಇತರೆ ಸಿಸ್ಟಮ್‌ ಕೆಲಸ ಇರುವವರು ಬೆಳಗ್ಗೆಯಿಂದ ಸಂಜೆಯವರೆಗೆ ಕುಳಿತಲ್ಲೇ ಇರುವುದರಿಂದ ಬೆನ್ನು ನೋವು, ಕುತ್ತಿಗೆ ನೋವು ಸೇರಿದಂತೆ ಇತರೆ ದೈಹಿಕ ನೋವುಗಳು, ಹಿಡಿದಂತಾಗುವ ಸಮಸ್ಯೆಗಳನ್ನು ನೋಡಿದ್ದೇವೆ. ಇದಷ್ಟೇ ಅಲ್ಲದೆ, ಭುಜಗಳು ಕೂಡ ಗಟ್ಟಿಯಾಗುವ ಸಂಭವವಿದೆ. ಹೌದು, ಈ ಸಮಸ್ಯೆಯನ್ನು ಫ್ರೋಝನ್ ಶೋಲ್ಡರ್ (Frozen Shoulder) ಅಥವಾ ಹೆಪ್ಪುಗಟ್ಟಿದ ಭುಜ ಎಂದೂ ಕರೆಯಲಾಗುತ್ತದೆ. ವೈದ್ಯಕೀಯಭಾಷೆಯಲ್ಲಿ ಕ್ಯಾಪ್ಸುಲೈಟಿಸ್ ಎಂದೂ ಕರೆಯುತ್ತಾರೆ. ಭುಜ ಹಿಡಿದಂತಾಗುವುದರಿಂದ ಆಗುವ ಸಮಸ್ಯೆ ಹಾಗೂ ಪರಿಹಾರಗಳ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.

ಫ್ರೋಝನ್ ಶೋಲ್ಡರ್‌ನ ಹಂತಗಳು: ಕೆಲವರಿಗೆ ಸಂಪೂರ್ಣ ಭುಜ ಹಿಡಿದಂತಾಗುತ್ತದೆ. ಇದರಲ್ಲೂ ಸಾಕಷ್ಟು ಬಗೆಯ ಸಮಸ್ಯೆಗಳಿವೆ.

ಭುಜವು ಗಟ್ಟಿಯಾಗುವುದು: ಹೀಗೆ ಆಗುವುದರಿಂದ ಭುಜದಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳಲಿದೆ. ಭುಜವನ್ನು ಅಲುಗಾಡಿಸುವುದು ಕಷ್ಟವಾಗಲಿದೆ.

ಹೆಪ್ಪುಗಟ್ಟುವುದು: ಇನ್ನೂ ಕೆಲವೊಮ್ಮೆ ಭುಜ ಹೆಪ್ಪುಗಟ್ಟಿದಂತಾಗುತ್ತದೆ, ಈ ವೇಳೆ ನೋವು ಅಷ್ಟಾಗಿ ಕಾಣಿಸದಿದ್ದರು, ಕೈ ಭಾರವೆನಿಸುತ್ತದೆ. ಕೈ ಚಲಿಸುವುದು ಅತಿ ಕಷ್ಟವೆನಿಸುತ್ತದೆ.

ಅತಿಯಾದ ನೋವು: ಕೆಲವೊಮ್ಮೆ ಭುಜವು ಹಿಡಿದಂತಾಗಿ, ಅತಿಯಾದ ನೋವು ಕಾಣಿಸಲಿದೆ. ಕುತ್ತಿಗೆಯಿಂದ ಭುಜದವರೆಗೂ ಈ ನೋವು ಆಗಬಹುದು.

ನೋವು ಕಡಿಮೆಗೊಳಿಸುವುದು ಹೇಗೆ?: ಐಬುಪ್ರೊಫೇನ್ ಅಥವಾ ಅಸೆಟಾಮಿನೋಫೆನ್ ನಂತಹ ಓವರ್-ದಿ-ಕೌಂಟರ್ ನೋವು ನಿವಾರಕಗಳು ಸಹಾಯ ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಔಷಧಗಳು ಅಥವಾ ಕಾರ್ಟಿಕೊಸ್ಟೆರಾಯ್ಡ್ ಚುಚ್ಚುಮದ್ದುಗಳನ್ನು ವೈದ್ಯರು ಶಿಫಾರಸು ಮಾಡಬಹುದು.

ದೈಹಿಕ ಚಿಕಿತ್ಸೆ: ಕೆಲವರಲ್ಲಿ ಭುಜದ ನೋವು ಹಾಗೂ ಗಟ್ಟಿಯಾಗುವುದು ಅತಿಯಾಗಿದ್ದ ಸಂದರ್ಭದಲ್ಲಿ ಚಿಕಿತ್ಸೆ ಅವಶ್ಯಕವೆನಿಸುತ್ತದೆ. ಪದೇ ಪದೇ ಈ ನೋವು ಕಾಣಿಸಿಕೊಳ್ಳುತ್ತಿದರೆ, ವೈದ್ಯರನ್ನು ಭೇಟಿಯಾಗುವುದು ಉತ್ತಮ.

ವ್ಯಾಯಾಮ: ಭುಜದ ನೋವು ನಿವಾರಣೆಗೆ ಭುಜದ ವ್ಯಾಯಾಮ ಅತ್ಯವಶ್ಯಕ. ಪ್ರತಿನಿತ್ಯ ಕೆಲಸದ ಮಧ್ಯದಲ್ಲಿ ಅಥವಾ ಬೆಳಿಗ್ಗೆ-ಸಂಜೆ ಸಮಯದಲ್ಲಿ ಭುಜದಲ್ಲಿ ತಿರುಗಿಸುವ ಅಥವಾ ಮೇಲೆತ್ತುವ ವ್ಯಾಯಾಮ ರೂಢಿಸಿಕೊಳ್ಳಿ. ಇದು ಭುಜದ ಕೀಲುಗಳು ಉತ್ತಮವಾಗಿರುವಂತೆ ಕಾಪಾಡಿಕೊಳ್ಳುತ್ತವೆ.

ಹೀಟ್ ಮತ್ತು ಕೋಲ್ಡ್ ಥೆರಪಿ: ಕೆಲವೊಮ್ಮೆ ಭುಜ ಹಿಡಿದಂತಾಗಿ ಅತಿಯಾಗಿ ನೋವು ಕಂಡು ಬಂದರೆ ಹೀಟ್‌ ಮತ್ತು ಕೋಲ್ಡ್‌ ಥೆರಪಿ ಮಾಡಬಹುದು. ಹೆಚ್ಚು ಫ್ರೋಝ್‌ ಆಗಿರುವ ಜಾಗದಲ್ಲಿ ಶಾಖ ಅಥವಾ ತಣ್ಣನೆಯ ಪ್ಯಾಕ್‌ಗಳನ್ನು ಇಟ್ಟುಕೊಳ್ಳಿ. ಇದರಿಂದ ತಾತ್ಕಾಲಿಕ ನೋವು ನಿವಾರಣೆ ಮತ್ತು ಉರಿಯೂತವನ್ನು ಕಡಿಮೆ ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಸಂಪ್ರದಾಯವಾದಿ ಚಿಕಿತ್ಸೆಗಳು ಪರಿಹಾರವನ್ನು ನೀಡಲು ವಿಫಲವಾದರೆ, ಹೆಪ್ಪುಗಟ್ಟಿದ ಭುಜವನ್ನು ಪರಿಹರಿಸಲು ಶಸ್ತ್ರಚಿಕಿತ್ಸಾ ಅವಶ್ಯಕವಿರಲಿದೆ. ಯಾವುದೇ ಕೆಲಸ ಮಾಡುವವರಿದ್ದರು ಈ ಭುಜದ ನೋವನ್ನು ನಿರ್ಲಕ್ಷಿಸುವುದು ಉತ್ತಮವಲ್ಲ.

–ಡಾ. ವಿನಯ್ ಕುಮಾರಸ್ವಾಮಿ, ಸಲಹೆಗಾರರು - ಮೂಳೆಚಿಕಿತ್ಸೆ, ಫೋರ್ಟಿಸ್ ಆಸ್ಪತ್ರೆ, ರಾಜಾಜಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT