ದೇಹಕ್ಕೆ ಶಕ್ತಿ ತುಂಬಲು, ರೋಗಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಪೋಷಕಾಂಶಭರಿತ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಮೊದಲನೆಯದಾಗಿ, ಶಕ್ತಿಪೂರಕ ಆಹಾರಗಳಾದ ಇವುಗಳಲ್ಲಿ ಧಾನ್ಯಗಳು, ಎಣ್ಣೆ, ಕೊಬ್ಬಿನಂಶ ಇರುತ್ತವೆ. ದೈಹಿಕ ಚಟುವಟಿಕೆ ಮತ್ತು ದೇಹದ ಕಾರ್ಯಗಳಿಗೆ ಅಗತ್ಯವಾದ ಇಂಧನವನ್ನು ಇವು ಒದಗಿಸುತ್ತವೆ.

ಎರಡನೆಯದಾಗಿ, ದೇಹದ ಆರೋಗ್ಯಕ್ಕೆ ಪೂರಕವಾದ ಹೆಚ್ಚು ಪ್ರೋಟೀನ್ಭರಿತ ಆಹಾರಗಳಾದ ಬೇಳೆಕಾಳುಗಳು, ಹಾಲು, ಮೊಟ್ಟೆ, ಮಾಂಸ, ಮೀನು ಮತ್ತು ಒಣಹಣ್ಣುಗಳು ಸೇರಿವೆ. ಇವು ದೇಹದ ಅಂಗಾಂಶಗಳು, ಸ್ನಾಯುಗಳು ಮತ್ತು ಜೀವಕೋಶಗಳ ಬೆಳವಣಿಗೆಗೆ ಸಹಾಯಕವಾಗುತ್ತವೆ.

ಮೂರನೆಯದು, ರಕ್ಷಣಾತ್ಮಕ ಆಹಾರಗಳು. ಇವುಗಳಲ್ಲಿ ಹಣ್ಣುಗಳು, ತರಕಾರಿಗಳು ಸೇರಿವೆ. ಇವು ವಿಟಮಿನ್, ಖನಿಜಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ಗಳಿಂದ ತುಂಬಿದ್ದು, ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತವೆ.

ಸಮತೋಲಿತ ಆಹಾರಕ್ರಮ ಪಾಲನೆ

ಅನೇಕರು ಊಟದಲ್ಲಿ ಏನಿರಬೇಕು ಮತ್ತು ಏನಿರಬಾರದು ಎಂಬ ಗೊಂದಲವನ್ನು ಹೊಂದಿರುತ್ತಾರೆ. ಆದರೆ ತಜ್ಞರು ಹೇಳುವಂತೆ, ಆಹಾರ ಸೇವನೆಯಲ್ಲಿ ಸರಳ ವಿಧಾನವನ್ನು ಅನುಸರಿಸಬೇಕು. ಸೇವಿಸುವ ಒಂದು ಹೊತ್ತಿನ ಆಹಾರದಲ್ಲಿನ ಅರ್ಧ ಭಾಗವು (ಶೇ 50) ವಿವಿಧ ಬಗೆಯ ಹಣ್ಣುಗಳು ಮತ್ತು ತರಕಾರಿಯಿಂದ ಕೂಡಿರಬೇಕು. ಊಟದ ಕಾಲು ಭಾಗವು (ಶೇ 20) ಅಕ್ಕಿ, ರಾಗಿ ಅಥವಾ ಓಟ್ಸ್ನಂತಹ ಧಾನ್ಯಗಳಿಂದ ಕೂಡಿರಬೇಕು. ಊಟದ ಉಳಿದ ಕಾಲು ಭಾಗದಲ್ಲಿ (ಶೇ 20) ಮೊಟ್ಟೆ, ಬೇಳೆಕಾಳುಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ಕಡಿಮೆ ಕೊಬ್ಬಿನ ಮಾಂಸದಂತಹ ಪ್ರೋಟೀನ್ಭರಿತ ಆಹಾರವನ್ನು ಒಳಗೊಂಡಿರಬೇಕು. ಆದರೆ, ಒಣಹಣ್ಣುಗಳು ಮತ್ತು ಬೀಜಗಳಲ್ಲಿ ಕೊಬ್ಬಿನಾಂಶವಿದ್ದು, ದೈನಂದಿನ ಕ್ಯಾಲೊರಿಯು ಶೇ 10ಕ್ಕಷ್ಟೇ ಸೀಮಿತವಾಗಿ ಇರಬೇಕು.

ಸಮತೋಲಿತ ಆಹಾರ ಕ್ರಮವನ್ನು ಅನುಸರಿಸುವುದರ ಜೊತೆಗೆ ‘ಪ್ರತಿದಿನ ಕನಿಷ್ಠ 8ರಿಂದ 10 ಲೋಟ ನೀರು ಕುಡಿಯಿರಿ. ಅದರ ಜೊತೆಗೆ ಮಜ್ಜಿಗೆ, ಎಳನೀರು, ತಾಜಾ ಹಣ್ಣಿನ ರಸ, ರಾಗಿ ಮಾಲ್ಟ್ ಮತ್ತು ಸೂಪ್ನಂತಹ ದ್ರವಾಹಾರವನ್ನು ಸೇವಿಸಿ. ಮತ್ತೊಂದೆಡೆ, ಉಪ್ಪು, ಸಕ್ಕರೆ ಮತ್ತು ಕೊಬ್ಬು ಹೆಚ್ಚಿರುವ ಕಾರ್ಬೊನೇಟೆಡ್ ಪಾನೀಯಗಳು, ಮದ್ಯ ಮತ್ತು ಸಂಸ್ಕರಿಸಿದ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಹಸಿವನ್ನು ನಿಯಂತ್ರಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಡೆಗಟ್ಟಲು ಆಗಾಗ್ಗೆ ನಿಯಮಿತ ಆಹಾರ ಸೇವಿಸುವುದು ಉತ್ತಮ.

ಲೇಖಕಿ: ಆಹಾರ ತಜ್ಞೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.