ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ರಕ್ಷಕರ ಗೌರವಾರ್ಥ 40 ಲಕ್ಷ ಕಸ್ಟಮೈಸ್ಡ್ ಪ್ಯಾಕ್ ತಯಾರಿಸಿದ 'ಡೆಟಾಲ್‌'

Last Updated 9 ಜೂನ್ 2021, 14:15 IST
ಅಕ್ಷರ ಗಾತ್ರ

ಬೆಂಗಳೂರು: #DettolSalutes ಎಂಬ ಅಭಿಯಾನವನ್ನು ಡೆಟಾಲ್ ಕಂಪನಿಯು ಪ್ರಾರಂಭಿಸಿದೆ. ಆ ಹಿನ್ನೆಲೆಯಲ್ಲಿ ಕೋವಿಡ್ ರಕ್ಷಕರ ಗೌರವಾರ್ಥ ಚಿತ್ರ ಸಹಿತ ಇರುವ 40 ಲಕ್ಷ ಕಸ್ಟಮೈಸ್ಡ್ ಪ್ಯಾಕ್ ತಯಾರಿಸಿದೆ.

ಭಾರತದಾದ್ಯಂತ 100 ಕೋವಿಡ್‌ ರಕ್ಷಕರ ಯಶೋಗಾಥೆಗಳನ್ನು ಡೆಟಾಲ್‌ ಕಂಪನಿಯು ಸಂಗ್ರಹಿಸಿದೆ. ಕೋವಿಡ್ ರಕ್ಷಕರ ಗೌರವಾರ್ಥ ಲಿಕ್ವಿಡ್ ಹ್ಯಾಂಡ್‌ವಾಶ್ ಪ್ಯಾಕ್‌ಗಳಲ್ಲಿ ಸಂಗ್ರಹಿಸಿರುವ ಯಶೋಗಾಥೆಗಳನ್ನು ಇರಿಸಿ ಜನರಿಗೆ ತಲುಪಿಸಿದೆ.

ಇವುಗಳನ್ನು ಹೆಚ್ಚು ಜನರಿಗೆ ತಲುಪಿಸಲು ಡೆಟಾಲ್ ವೆಬ್‌ಸೈಟ್ ಅನ್ನು ಸಹ ಪ್ರಾರಂಭಿಸಿದೆ. ಕಸ್ಟಮೈಸ್ಡ್ ವರ್ಚುವಲ್ ಪ್ಯಾಕ್‌ಗಳನ್ನು ತಯಾರಿಸುವ ಮೂಲಕ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಡೆಟಾಲ್‌ ಕಂಪನಿಯು ತಯಾರಿಸಿರುವ ಈ ನೂರು ಯಶೋಗಾಥೆಗಳಲ್ಲಿ ಬೆಂಗಳೂರಿನ 32 ವರ್ಷದ ಮನ್ಸೂರ್ ಚೆಟ್ಲು ಅವರದ್ದೂ ಒಂದಾಗಿದೆ. ಕೋವಿಡ್‌ ಎರಡನೇ ಅಲೆಯು ರಾಜ್ಯವನ್ನು ವ್ಯಾಪಿಸುತ್ತಿದ್ದಂತೆ, ಮನ್ಸೂರ್‌ ಚೆಟ್ಲು ಅವರು ಉಚಿತ ಆಹಾರ ಪ್ಯಾಕೆಟ್‌ಗಳು, ಆಮ್ಲಜನಕ ಸಿಲಿಂಡರ್‌ಗಳನ್ನು ಕೋವಿಡ್‌ ಸಂತ್ರಸ್ತರಿಗೆ ವಿತರಿಸಿದ್ದಾರೆ. ಜೊತೆಗೆ ಈ ಸಿಲಿಂಡರ್‌ಗಳನ್ನು ಹೇಗೆ ಬಳಸಬೇಕೆಂದು ಜನರಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ.

ಬಿಬಿಎಂಪಿ ಸಹಯೋಗದೊಂದಿಗೆ ಕೋವಿಡ್ ಟ್ರಿಯಾಜ್ ತೆರೆಯಲು ಸಹಾಯ ಮಾಡಿದ್ದಾರೆ. ವೃತ್ತಿಯಲ್ಲಿ ಉಪ ಗುತ್ತಿಗೆದಾರರಾದ ಮನ್ಸೂರ್ ಅವರು ಮಾರ್ಚ್ 2021 ರಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದರು. ಆದರೆ, ಅವರು ತಮ್ಮ ಸಾಮಾಜಿಕ ಕಾರ್ಯವನ್ನು ನಿಲ್ಲಿಸಲಿಲ್ಲ. ದಿನಕ್ಕೆ ಸುಮಾರು 18 ಗಂಟೆಗಳ ಕಾಲ ಕಾರ್ಯನಿರ್ವಹಿಸಿರುವ ಮನ್ಸೂರ್, ಕೋವಿಡ್‌ನಿಂದ ಬಳಲುತ್ತಿದ್ದ ಸುಮಾರು 1,000 ಕ್ಕೂ ಹೆಚ್ಚು ಜನರಿಗೆ ಸಹಾಯ ಮಾಡಿದ್ದಾರೆ. .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT