ಅಂತರ್ಗತ ಎಂದರೆ ಒಳಗೂಡಿಸಿಕೊಳ್ಳುವಿಕೆ. ಪ್ರಪಂಚ ಕೋವಿಡ್-19 ನಿಂದ ತತ್ತರಿಸುತ್ತಿದೆ. ನಮ್ಮೆಲ್ಲರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ನೌಕರಿಗಳ ಅನಿಶ್ಚಿತತೆ, ಆರ್ಥಿಕ ಸಂಕಷ್ಟ, ದೈಹಿಕ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳನ್ನು ತಂದೊಡ್ಡಿದೆ.

ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು, ಬದಲಾವಣೆಗಳನ್ನು ಸ್ವೀಕರಿಸಲು ಹಾಗೂ ಸಮರ್ಥವಾಗಿ ಎದುರಿಸಲು ಬೇಕು ವೈವಿಧ್ಯತೆಗಳ ಅಂತರ್ಗತ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಆತಂಕ, ಖಿನ್ನತೆ, ಒತ್ತಡಗಳಿಗೆ ಒಳಗಾಗುತ್ತಾನೆ. ಈ ಬದಲಾವಣೆಗಳನ್ನು ಅಂತರ್ಗತ ಮಾಡಿಕೊಂಡಲ್ಲಿ ಅನೇಕ ಅವಕಾಶಗಳು ದಾರಿದೀಪವಾಗಿ ಕಾಣಿಸಬಹುದು. ಇದನ್ನು ನಾವು ವೈವಿಧ್ಯತೆಗಳ ಅಂತರ್ಗತ ಎನ್ನಬಹುದಾಗಿದೆ.

ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಗಳೇನು ?

ನಾವು ಕೆಲಸ ಮಾಡುವ ಸ್ಥಳದಲ್ಲಿರಬಹುದು, ನಮ್ಮ ದೈನಂದಿನ ಜೀವನದ ದಿನಚರಿಯಲ್ಲಿರಬಹುದು. ಮಕ್ಕಳ ವಿಧ್ಯಾಭ್ಯಾಸವಿರಬಹುದು, ನಾವು ಸೇವಿಸುವ ಆಹಾರವಿರಬಹುದು, ನಾವು ಧರಿಸುವ ಬಟ್ಟೆ–ಬರೆಗಳಿರಬಹುದು, ಜೀವನಶೈಲಿ ಎಲ್ಲದರಲ್ಲೂ ಕೋವಿಡ್ ಬದಲಾವಣೆಗಳನ್ನು ತಂದಿದೆ. ಈ ಎಲ್ಲಾ ಬದಲಾವಣೆಗಳನ್ನು ನಮ್ಮಲ್ಲಿ ಒಳಗೂಡಿಸಿಕೊಳ್ಳಬೇಕಾದ ಸವಾಲನ್ನು ಕೋವಿಡ್ ಸಂಕಷ್ಟವು ಒಡ್ಡಿದೆ. ಈ ಬದಲಾವಣೆಗಳನ್ನು, ವೈವಿಧ್ಯತೆಗಳನ್ನು ಸಕಾರಾತ್ಮಕವಾಗಿ ಅಂತರ್ಗತ ಮಾಡಿಕೊಂಡಾಗ ಮಾತ್ರ ಮುಂದಿನ ಬದುಕು ಆಶಾದಾಯಕವಾಗುತ್ತದೆ.

ಬದಲಾವಣೆಗಳನ್ನು ಅಂತರ್ಗತ ಮಾಡಿಕೊಳ್ಳುವ ವಿಧಾನಗಳು?

* ನಮ್ಮಂತೆಯೇ ಪರರು ಎಂಬ ಭಾವದೊಂದಿಗೆ ಸಹೃದಯತೆಯನ್ನು ಬೆಳೆಸಿಕೊಳ್ಳಬೇಕು.
* ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈ ತೊಳೆದುಕೊಳ್ಳುವುದು ಈ ಎಲ್ಲಾ ಅಭ್ಯಾಸಗಳು ನಮ್ಮನ್ನು ನಾವು ಆರೋಗ್ಯವಾಗಿರಲು ಹಾಗೂ ನಮ್ಮ ಅವಲಂಭಿತರನ್ನು ಸುರಕ್ಷಿತವಾಗಿಡಲು ಎಂಬುದನ್ನು ಮನಗೊಳ್ಳಬೇಕು.
* ನೌಕರಿಗಳ ಅನಿಶ್ಚಿತತೆ ಕಾಡುತ್ತಿದ್ದ್ರೆ ಬದಲಿ ನೌಕರಿಯನ್ನು ಸ್ವೀಕರಿಸಲು ಮನಸ್ಸು ಮಾಡಬೇಕು.
* ಮನೆಯಲ್ಲೇ ಕುಳಿತು ಕೆಲಸ ಮಾಡುವ ಪರಿಸ್ಥಿತಿ ಬಂದರೆ ಅದಕ್ಕೆ ನಮ್ಮ ಮನಸ್ಸನ್ನು ತಯಾರಿ ಮಾಡಿಕೊಳ್ಳಬೇಕು.
* ಆರ್ಥಿಕ ಸಂಕಷ್ಟಗಳು ಎದುರಾದರೆ ಪರ್ಯಾಯ ಸಂಪಾದನೆಯ ಮಾರ್ಗಗಳನ್ನು ಹುಡುಕಬೇಕು.
* ಮಕ್ಕಳ ವಿದ್ಯಾಭ್ಯಾಸದಲ್ಲಿ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಅಳವಡಿಸಿಕೊಳ್ಳಬೇಕು.
* ಬದಲಾವಣೆಯನ್ನು ತಂದೊಡ್ಡುತ್ತಿರುವ ತಂತ್ರಜ್ಞಾನಕ್ಕೆ ಮೈಮನಗಳು ಹೊಂದಿಕೊಳ್ಳುವಂತೆ ತಯಾರಿ ನಡೆಸಿಕೊಳ್ಳಬೇಕು.
* ಪ್ರಪಂಚವೇ ಸ್ತಬ್ಧವಾಯಿತು ಎಂಬ ಭಾವವನ್ನು ಬಿಟ್ಟು ಹೊಸತನಕ್ಕೆ ನಮ್ಮನ್ನು ಅಳವಡಿಸಿಕೊಳ್ಳಲು ಮನಸ್ಸು ಮಾಡಬೇಕು.
* ಯಾರು ಹೊಸತನಕ್ಕೆ ರೂಪಾಂತರಗೊಳ್ಳುತ್ತಾರೆ ಅವರಷ್ಟೇ ಪ್ರಪಂಚದಲ್ಲಿ ಬದುಕುಳಿಯಲು ಸಾಧ್ಯ ಎಂಬುದನ್ನು ಮನಗೊಳ್ಳಬೇಕು.
* ಬದಲಾವಣೆ ಜಗದ ನಿಯಮ, ಜೀವನಕ್ಕಿಂತ ಜೀವನಶೈಲಿ ದುಬಾರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ಸತ್ಯವನ್ನು ಅರ್ಥಮಾಡಿಕೊಂಡಲ್ಲಿ ಆಶಾದಾಯಕ ಬದುಕು ಸಾಧ್ಯ.

(ಲೇಖಕರು ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು, ಹಿರಿಯ ದಂತ ವೈದ್ಯರು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.