ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖನಿದ್ರೆಗೆ ಸರಳ ಸೂತ್ರಗಳು

Published 9 ಮೇ 2023, 6:03 IST
Last Updated 9 ಮೇ 2023, 6:03 IST
ಅಕ್ಷರ ಗಾತ್ರ

ನಿದ್ರೆ ಬಾರದಿರಲು ಹಲವಾರು ಕಾರಣಗಳಿರಬಹುದು. ಆದರೆ, ನಿಶ್ಚಿತ ಸಮಯಕ್ಕೆ ಮಲಗುವ ಮತ್ತು ಏಳುವ ಪದ್ಧತಿಯನ್ನು ರೂಢಿಸಿಕೊಂಡರೆ, ತನ್ನಿಂದ ತಾನೆ ನಿದ್ರೆ ಹತ್ತುತ್ತದೆ. ಸುಖನಿದ್ರೆಗೆ ಇಲ್ಲಿವೆ ಕೆಲವೊಂದು ಸರಳ ಉಪಾಯಗಳು:

* ನಿಶ್ಚಿತ ಸಮಯದಲ್ಲಿ ಮಲಗುವ ಮತ್ತು ಏಳುವ ಪದ್ಧತಿಯನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು.

* ಅಧಿಕ ಬೆಳಕು ನಿದ್ರೆಯ ಶತ್ರು. ಹೀಗಾಗಿ ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮುನ್ನ ಕೊಣೆಯ ಬೆಳಕಿನ ಪ್ರಮಾಣವನ್ನು ಕಡಿಮೆ ಮಾಡಿ, ಮಂದ ಬೆಳಕಿಗೆ ದೃಷ್ಟಿಯನ್ನು ಹೊಂದಿಸಿಕೊಳ್ಳಬೇಕು.

* ಮಲಗುವ ಸಮಯಕ್ಕೆ ಮೊದಲು ಟಿ.ವಿ, ಕಂಪ್ಯೂಟರ್, ಮೊಬೈಲ್ ಪರದೆಗಳಂತಹ ಬೆಳಕನ್ನು ಸೂಸುವ ಆಕರಗಳಿಂದ ದೂರವಿರಬೇಕು. ಇದರ ಬದಲಿಗೆ ನಿದ್ರೆಯ ವೇಳೆಗೆ ಮುನ್ನ ಮನಸ್ಸಿಗೆ ಆಪ್ತವಾದ ಪುಸ್ತಕವನ್ನು ಓದುವುದು ಒಳಿತು.

* ನಿದ್ರೆಯ ಸಮಯದಲ್ಲಿ ಸಾಮಾನ್ಯ ಆಹಾರಸೇವನೆ ಸೂಕ್ತ. ರಾತ್ರಿಯ ವೇಳೆ ಭೂರಿಭೋಜನ, ಮದ್ಯಪಾನ, ಧೂಮಪಾನ, ಕಾಫಿ-ಟೀಗಳಿಂದ ದೂರವಿರಬೇಕು.

* ನಿತ್ಯ ಶರೀರಕ್ಕೆ ಸಹ್ಯವಾಗುವಷ್ಟು ವ್ಯಾಯಾಮ, ವೇಗದ ನಡಿಗೆ, ತೋಟದ ಕೆಲಸದಂತಹ ಚಟುವಟಿಕೆಗಳಿಗೆ ಸಮಯವನ್ನು ಹೊಂದಿಸಿಕೊಳ್ಳಬೇಕು.

* ನಿದ್ರೆಯ ಕೋಣೆ ತಂಪಾಗಿ, ಸಾಧ್ಯವಾದಷ್ಟೂ ನಿಶ್ಶಬ್ದವಾಗಿ, ಮಂದಬೆಳಕಿನಿಂದಿರುವುದು ಅಗತ್ಯ.

* ನಿದ್ರೆಗೆ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಿ, ಧ್ಯಾನ ಮಾಡುವುದರಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ. ಹಗಲುವೇಳೆಯಲ್ಲಿ ಮಲಗುವ ಅಭ್ಯಾಸ ಕೂಡ ರಾತ್ರಿ ನಿದ್ರೆ ಬಾರದಿರುವುದಕ್ಕೆ ಪ್ರಮುಖ ಕಾರಣ. ಹಾಗಾಗಿ ಹಗಲಿನ ವೇಳೆಯಲ್ಲಿ ನಿದ್ರೆ ಮಾಡುವುದನ್ನು ತಪ್ಪಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT