ಗುರುವಾರ , ಡಿಸೆಂಬರ್ 8, 2022
18 °C
ಭಾಗ - ಎರಡು

ನಯನಗಳ ನಾಜೂಕು

ಎನ್‌. ಎಸ್‌. ಓಂಕಾರ್‌ Updated:

ಅಕ್ಷರ ಗಾತ್ರ : | |

Prajavani

ಕ್ರಮ 4: ಓರೆಚಲನೆ

1.→ಬಲಹಸ್ತವನ್ನು ಎಡಮಂಡಿಯ ಮೇಲೆ ಇರಿಸಿಕೊಳ್ಳಿ. ಬಲಹೆಬ್ಬೆಟ್ಟನ್ನು ಚಾಚಿ. ಮಿಕ್ಕ ಬೆರಳುಗಳನ್ನು ಮಡಿಚಿ.

2. ಎಡಹಸ್ತದಿಂದ ಗಂಟಲ ಭಾಗವನ್ನು ಮೃದುವಾಗಿ ಹಿಡಿಯಿರಿ. ಸ್ಪರ್ಶಸಂವೇದನಾ ಗ್ರಹಿಕೆಯಿಂದ ಕುತ್ತಿಗೆಯು ಚಲಿಸದಂತೆ ಗಮನಿಸಿ.

3.→ಬಲಹೆಬ್ಬೆಟ್ಟನ್ನು ತದೇಕಚಿತ್ತದಿಂದ ರೆಪ್ಪೆಗಳನ್ನು ಅಲುಗಾಡಿಸದೇ ದೃಷ್ಟಿಸುತ್ತಾ ಹಸ್ತವನ್ನು ನಿಧಾನವಾಗಿ ಓರೆದಿಕ್ಕಿನಲ್ಲಿ ಚಲಿಸಿ.

4. ಹೆಬ್ಬೆಟ್ಟಿನ ತುದಿ ಕಾಣುವವರೆಗೂ ಬಲಗೈಯನ್ನು ಮೇಲಕ್ಕೆ ಚಲಿಸಿ.

5. ಉಸಿರನ್ನು ಬಿಡುತ್ತಾ ಬಲಹಸ್ತವನ್ನು ನಿಧಾನವಾಗಿ, ಅದೇ ಪಥದಲ್ಲಿ ಕೆಳಕ್ಕೆ ಚಲಿಸಿ.

6. ಈ ಕ್ರಮವನ್ನು ಸುಮಾರು 10-15 ಬಾರಿ ಪುನರಾವರ್ತಿಸಿ.

7. ಮತ್ತೊಂದು ಕಡೆ ಪುನರಾವರ್ತಿಸಿ.

8. ಕಣ್ಣುಗಳನ್ನು ಮುಚ್ಚಿ, ಕೈಗಳನ್ನು ವಿರಮಿಸಿ.

ಕ್ರಮ 5: ಹಸ್ತಕವಚ

1. ಕಣ್ಣುಗಳನ್ನು ಮುಚ್ಚಿ; ಹಸ್ತದ ಬುಡಗಳಿಂದ ಕಣ್ಣುಗಳನ್ನು ಮೃದುವಾಗಿ ಮುಚ್ಚಿ; ಕಣ್ಣುಗಳನ್ನು ಒತ್ತಬೇಡಿ.

2. ಕಣ್ಣಿನ ಮೇಲೆ ಬೆಳಕು ಬೀಳದಿದ್ದಷ್ಟೂ ಕತ್ತಲೆಯ ಗಾಢ ಹೆಚ್ಚುತ್ತದೆ.

3. ಭುಜಗಳು ಮತ್ತು ಮೊಣಕೈಗಳ ಮೇಲೆ ಒತ್ತಡ ಇರಬಾರದು.

4. ಸುಮಾರು 2-3 ನಿಮಿಷಗಳ ಕಾಲ ಈ ಸ್ಥಿತಿಯಲ್ಲಿರಿ.

5. ಕತ್ತಲಿದ್ದಷ್ಟೂ ಕಣ್ಣುಗಳಿಗೆ ವಿಶ್ರಾಂತಿ ದೊರೆಯುತ್ತದೆ.

6. ಕಣ್ಣುಗಳನ್ನು ತೆರೆಯಿರಿ, ಕೈಗಳನ್ನು ವಿರಮಿಸಿ.

ಕ್ರಮ 6 : ನಕ್ಷತ್ರವೀಕ್ಷಣೆ

ಮಾನವನ ಕಣ್ಣುಗಳು ಮೂಲಭೂತವಾಗಿ ದೂರವೀಕ್ಷಣೆಗೆ ಇರುವಂತಹುದು. ದೂರದ ವಸ್ತುಗಳನ್ನು ವೀಕ್ಷಿಸಿದಾಗ ಕಣ್ಣುಗಳು ಸಹಜವಾಗಿಯೇ ಒತ್ತಡರಹಿತವಾಗುತ್ತದೆ. ದೂರವೀಕ್ಷಣೆಯ ಉತ್ತಮ ವಿಧಾನವೆಂದರೆ ನಕ್ಷತ್ರವೀಕ್ಷಣೆ.

1. ಕತ್ತಲಾದ ನಂತರ ಕತ್ತನ್ನು ಸ್ವಲ್ಪ ಮೇಲಕ್ಕೆತ್ತಿ ಅಕಾಶದಲ್ಲಿರುವ ನಕ್ಷತ್ರವೊಂದರಲ್ಲಿ ದೃಷ್ಟಿಯನ್ನು ಇರಿಸಿ.

2. ಆ ನಕ್ಷತ್ರವನ್ನು ಸುಮಾರು 2 ನಿಮಿಷಗಳ ಕಾಲ ಎವೆಯಿಕ್ಕದೆ ದೃಷ್ಟಿಸಿ ನೋಡಿ.

3. ನಂತರ ಕತ್ತನ್ನು ವಿರಮಿಸಿ ಕಣ್ಣುಗಳನ್ನು ಮುಚ್ಚಿ.

4. ಈ ಕ್ರಮವನ್ನು 2-3 ಬಾರಿ ಪುನರಾವರ್ತಿಸಿ.

ಕ್ರಮ 7: ತ್ರಾಟಕ

1. ಸಾಧ್ಯವಾದಷ್ಟು ಗಾಳಿ ಬೀಸದ ಕೋಣೆಯಲ್ಲಿ ಒಂದು ನಂದಾದೀಪವನ್ನು ಇಟ್ಟುಕೊಳ್ಳಿ.

2. ದೀಪವನ್ನು ಸುಮಾರು 6 ಅಡಿಗಳಷ್ಟು ದೂರ ಕತ್ತಿಗೆ ಶ್ರಮವಾಗದಂತೆ ಇಟ್ಟುಕೊಳ್ಳಿ.

3. ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಅಸ್ಥಿ-ಸ್ನಾಯು ವ್ಯವಸ್ಥೆಯ ಸಮಗ್ರ ಅರಿವಿರಲಿ.

4. ಹಸ್ತಗಳನ್ನು ಮೇಲ್ಮುಖವಾಗಿರಿಸಿ ಮಂಡಿಗಳ ಮೇಲೆ ವಿರಮಿಸಿ.

5. ಜ್ಯೋತಿಯನ್ನು ನೇರವಾಗಿ ದೃಷ್ಟಿಸಿ ನೋಡಿ.

6. ಕಣ್ಣುಗಳನ್ನು ಹೆಚ್ಚಾಗಿ ಮಿಟುಕಿಸಬೇಡಿ.

7. ಆರಂಭಿಕ ಹಂತದಲ್ಲಿ ಸುಮಾರು 1-2 ನಿಮಿಷಗಳ ಕಾಲ ದೃಷ್ಟಿಸಿ ನೋಡಿ

8. ನಂತರ ಕಣ್ಣುಗಳನ್ನು ಮೃದುವಾಗಿ ಮುಚ್ಚಿ ಒಂದು ನಿಮಿಷದಷ್ಟು ಕಾಲ ವಿರಮಿಸಿ; ಪುನರಾವರ್ತಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು