ಹಲ್ಲುಗಳು ಆಹಾರವನ್ನು ಅಗಿಯಲು ಸಹಕಾರಿಯಾಗಿವೆ. ಕೆಲವೊಮ್ಮೆ ಹಲ್ಲುಜ್ಜಿದ ನಂತರ ಅಥವಾ ಮುನ್ನ ವಸಡಿನಲ್ಲಿ ರಕ್ತ ಸ್ರಾವವಾಗುತ್ತದೆ. ಇದಕ್ಕೆ ಕಾರಣವೇನು? ದೇಹದ ಆರೋಗ್ಯಕ್ಕೂ, ವಸಡಿಗೂ ಏನಾದರೂ ಸಂಬಂಧ ಇದೆಯೇ? ಕಾಯಿಲೆಯ ಮುನ್ಸೂಚನೆಯೇ? ಎಂಬುವುದನ್ನು ತಿಳಿಯೋಣ.

ವಸಡಿನಲ್ಲಿ ರಕ್ತಸ್ರಾವವಾಗಲು ಕಾರಣವೇನು?

ವಸಡಿನಲ್ಲಿ ರಕ್ತಸ್ರಾವವಾಗುವುದನ್ನು ‘ಜಿಂಜಿವೈಟಿಸ್’ ಎಂದು ಕರೆಯುತ್ತಾರೆ. ಅಂದರೆ ಹಲ್ಲುಗಳ ಮೇಲೆ ಸಂಗ್ರಹವಾಗುವ ಆಹಾರ ಪದಾರ್ಥಗಳು ವಸಡಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದರಿಂದ ವಸಡಿನಲ್ಲಿ ಊತ ಉಂಟಾಗುತ್ತದೆ. ಇದು ಹಲ್ಲು ಉಜ್ಜುವಾಗ ವಸಡಿನಿಂದ ರಕ್ತಸ್ರಾವವಾಗಲು ಕಾರಣವಾಗಿದೆ. ಇದನ್ನು ನಿರ್ಲಕ್ಷಿಸಿದರೆ ವಸಡಿಗೆ ಹಾನಿಯುಂಟಾಗುವ ಸಾಧ್ಯತೆ ಇದೆ.

ವಸಡಿನಲ್ಲಿ ರಕ್ತಸ್ರಾವವಾಗಲು ಪ್ರಮುಖ ಕಾರಣಗಳು

ಸೂಕ್ತ ಬ್ರಶ್ ಬಳಸದಿರುವುದು.

ಸರಿಯಾದ ಕ್ರಮದಲ್ಲಿ ಬ್ರಶ್ ಮಾಡದಿರುವುದು.

ನಿತ್ಯ ಬ್ರಶ್ ಮಾಡದಿರುವುದು.

ವಿಟಮಿನ್ ಸಿ ಅಥವಾ ವಿಟಮಿನ್ ಕೆ ಅಲಭ್ಯತೆ

ರಕ್ತವನ್ನು ತೆಳುಗೊಳಿಸುವ ಔಷಧಗಳ ಸೇವನೆ

ಹಾರ್ಮೋನ್ಗಳ ಬದಲಾವಣೆಗಳು

ಜಿಂಜಿವೈಟಿಸ್ ಬಗ್ಗೆ ಎಚ್ಚರವಿರಲಿ

ಜಿಂಜಿವೈಟಿಸ್ ಎಂಬುದು ವಸಡಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದರಿಂದ ಬ್ಯಾಕ್ಟೀರಿಯಗಳು ವಸಡಿನಲ್ಲಿರುವ ಅಂಗಾಂಶ ಹಾಗೂ ರಕ್ತನಾಳಗಳನ್ನು ಶಿಥಿಲಗೊಳಿಸುತ್ತವೆ. ಇದರಿಂದ ದವಡೆಯಲ್ಲಿ ವಿಪರೀತ ನೋವು ಉಂಟಾಗುತ್ತದೆ. ಆದ್ದರಿಂದ ಪ್ರತಿದಿನ ಎದ್ದ ತಕ್ಷಣ ಬ್ರಶ್ ಮಾಡುವುದು ಉತ್ತಮವಾಗಿದೆ.

ಮಧುಮೇಹದ ಸೂಚಕ

ವಸಡಿನಲ್ಲಿ ರಕ್ತಸ್ರಾವವಾಗುವುದು ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಯ ಸೂಚಕವೂ ಆಗಿದೆ. ಮಧುಮೇಹವು ವಸಡಿನೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಹೆಚ್ಚಿನ ಪ್ರಮಾಣದ ಸಕ್ಕರೆ ದೇಹವನ್ನು ರೋಗಗಳ ವಿರುದ್ಧ ಹೋರಾಡುವಲ್ಲಿ ಸೋಲಿಸುತ್ತದೆ. ಇದರಿಂದಾಗಿ ವಸಡುಗಳಲ್ಲಿ ಉರಿಯೂತ ಉಂಟಾಗುತ್ತದೆ. ನಂತರ ವಸಡುಗಳು ದುರ್ಬಲವಾಗಿ ರಕ್ತಸ್ರಾವ ಆರಂಭವಾಗಿದೆ.

ಮನೆ ಮದ್ದುಗಳು

ಬಿಸಿ ಮಾಡಿದ ಉಪ್ಪು ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದು.

ಮೌಥ್ ವಾಶ್ ಬಳಸುವುದು.

ಬೇವಿನ ಎಲೆಯ ರಸವನ್ನು ಮೌಥ್ ವಾಶ್ ಆಗಿ ಬಳಸಬಹುದು.

ಲೇಖಕರು: ಡಾ.ಎ.ಎಸ್. ಮಧುರಾ, ಕನ್ಸಲ್ಟೆಂಟ್ ದಂತವೈದ್ಯಕೀಯ ವಿಭಾಗ, ರಾಮಯ್ಯ ಮೆಮೊರಿಯಲ್ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.