ಕೈಗಳು ಸ್ವಚ್ಛವಾಗಿದ್ದರೆ ರೋಗ ಹರಡುವುದು ಕಡಿಮೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅಕ್ಟೋಬರ್ 15ರಂದು ಜಾಗತಿಕ ಕೈ ತೊಳೆಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶೇಷವಾಗಿ ಶಾಲೆಗಳಲ್ಲಿ ಮಕ್ಕಳು ಎಲ್ಲರೂ ಜತೆಯಾಗಿಯೇ ಆಟ ಆಡುವಾಗ ಕೈಗಳ ನೈರ್ಮಲ್ಯ ಗಮನಾರ್ಹ ಸಂಗತಿ. ಶಾಲೆಗಳಲ್ಲಿ ರೋಗಾಣುಗಳು ಹರಡದಂತೆ ತಡೆಯಲು ಕೈಗಳ ಸ್ವಚ್ಛತೆ ಬಹುಮುಖ್ಯ.

ರೋಗಾಣುಗಳಿಗೆ ಶಾಲೆಯೆಂದರೆ ಇಷ್ಟವೇಕೆ?

ಮಕ್ಕಳು ಯಾವುದೇ ತಾರತಮ್ಯವಿಲ್ಲದೇ ಸ್ವಚ್ಛ ಮನಸ್ಸಿನಿಂದ ಬೆರೆಯುತ್ತಾರೆ. ಆಟ, ಪಾಠಗಳಲ್ಲಿ ತೊಡಗಿಕೊಳ್ಳುತ್ತಾರೆ. ಒಂದು ಮಗು ಸೀನಿದರೆ ಅಥವಾ ಕೆಮ್ಮಿದರೆ ಅದರಿಂದ ಇನ್ನೊಂದು ಮಗುವಿಗೆ ವೈರಾಣುಗಳು ಹರಡುವ ಸಾಧ್ಯತೆ ಇರುತ್ತದೆ. ಶೀತ, ಸೋಂಕುಗಳು ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುವ ವೈರಾಣು ಸಮಸ್ಯೆಗಳು ಮಗುವಿನಿಂದ ಮಗುವಿಗೆ ಹರಡುತ್ತದೆ. ಬಹುತೇಕ ಈ ಆರೋಗ್ಯ ಸಮಸ್ಯೆಗಳಿಗೆ ನೈರ್ಮಲ್ಯ ನಿಯಮವನ್ನು ಪಾಲಿಸದೇ ಇರುವುದು ಕಾರಣ.

ಮಕ್ಕಳ ದೇಹ ತುಂಬಾನೇ ಸೂಕ್ಷ್ಮವಾಗಿದ್ದು, ಆರೋಗ್ಯ ಸಮಸ್ಯೆ ಬಹುಬೇಗ ಕಾಡುತ್ತದೆ. ಮಕ್ಕಳ ಕೈಗಳು ನಿರ್ಮಲವಾಗಿದ್ದರೆ ಸೋಂಕಿನ ಅಪಾಯ ಕಡಿಮೆಯಾಗಿರುತ್ತದೆ. ಮುಖ್ಯವಾಗಿ ತಿನ್ನುವ ಮೊದಲು, ಶೌಚಾಲಯ ಬಳಸಿದ ನಂತರ, ಸೀನುವಿಕೆ ಮತ್ತು ಕೆಮ್ಮಿದ ಬಳಿಕ ಕೈಗಳನ್ನು ಸ್ವಚ್ಛಗೊಳಿಸುವ ಅಭ್ಯಾಸಗಳನ್ನು ಕಡ್ಡಾಯವಾಗಿ ರೂಢಿಸಿಕೊಳ್ಳುವಂತೆ ತಿಳಿಸಬೇಕು.

ಹೀಗೆ ಮಾಡಲಿ

l ಮೊದಲು ಕೈಗಳನ್ನು ಸಂಪೂರ್ಣವಾಗಿ ಸೋಪಿನಿಂದ ಉಜ್ಜಿಕೊಳ್ಳಿ.

l ಕೈಗಳಲ್ಲಿರುವ ಸೂಕ್ಷ್ಮಾಣುಗಳನ್ನು ತೊಡೆದುಹಾಕಲು 20 ಸೆಕೆಂಡುಗಳ ಕಾಲ ಸೋಪಿನಿಂದ ತೊಳೆಯಿರಿ.

l ಕೈಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಸ್ವಚ್ಛವಾದ ಟವೆಲ್ನಿಂದ ಒರೆಸಿಕೊಳ್ಳಿ.

l ಗಾಳಿಯಲ್ಲಿ ಒಣಗಲು ಬಿಡಿ.

l ಒಂದು ವೇಳೆ ಸೋಪ್ ಲಭ್ಯವಿಲ್ಲದಿದ್ದರೆ ಕನಿಷ್ಠ ಶೇ 60ರಷ್ಟು ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಜರ್ಗಳನ್ನು ಬಳಸಬಹುದು.

ಕೈ ನೈರ್ಮಲ್ಯ ಉತ್ತೇಜಿಸಿ

ಶಾಲೆಯ ಆವರಣದಲ್ಲಿ ಸಾಬೂನು ಮತ್ತು ಸ್ಯಾನಿಟೈಜರ್ ಲಭ್ಯವಿರುವಂತೆ ಮಾಡಿ. ಶಾಲಾ ಆವರಣದ ಸುತ್ತಲೂ ಕೈ ನೈರ್ಮಲ್ಯದ ಕುರಿತ ಅರಿವು ಫಲಕಗಳನ್ನು ಪ್ರದರ್ಶಿಸಿ.

ವಿದ್ಯಾರ್ಥಿಗಳಿಗೆ ಆರೋಗ್ಯಕರ ಕಲಿಕೆಯ ವಾತಾವರಣವನ್ನು ಸೃಷ್ಟಿಸಬಹುದು. ಮಕ್ಕಳು ಒಟ್ಟಾಗಿ ಬೆರೆತು ಆಡುವುದರಿಂದಲೂ ಉಂಟಾಗುವ ಸಮಸ್ಯೆಗಳಿಂದ ಪಾರಾಗಲು ಕೈ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.