ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್, ಕಪ್ಪು ಶಿಲೀಂಧ್ರ ಮತ್ತು ಆಂಫೊಟೆರಿಸಿನ್–ಬಿ:ಇಲ್ಲಿದೆ ತಿಳಿಯಬೇಕಾದ ಮಾಹಿತಿ

Last Updated 14 ಮೇ 2021, 13:14 IST
ಅಕ್ಷರ ಗಾತ್ರ

ಬೆಂಗಳೂರು: ದೇಶವು ಕೊರೊನಾ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಕಪ್ಪು ಶಿಲೀಂಧ್ರ (ಮ್ಯೂಕೋಮೈಕೋಸಿಸ್ ಅಥವಾ ಬ್ಲ್ಯಾಕ್‌ ಫಂಗಸ್) ಎಂಬ ಮಾರಣಾಂತಿಕ ಫಂಗಲ್ ಇನ್ಫೆಕ್ಷನ್ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ಮುಂಬೈ ಒಂದರಲ್ಲೇ ಕೋವಿಡ್‌ನಿಂದ ಗುಣಮುಖರಾದ 111ಕ್ಕೂ ಹೆಚ್ಚು ಮಂದಿ ಕಪ್ಪು ಶಿಲೀಂಧ್ರ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ, ಈ ಸೋಂಕಿನ ಚಿಕಿತ್ಸೆಯಲ್ಲಿ ಬಳಸುವ ಆಂಫೋಟೆರಿಸಿನ್- ಬಿ ಚುಚ್ಚುಮದ್ದು ದೇಶದಲ್ಲಿ ಅಷ್ಟಾಗಿ ಲಭ್ಯವಿಲ್ಲ.

‘ಇದ್ದಕ್ಕಿದ್ದಂತೆ, ಬೇಡಿಕೆಯ ಪ್ರಮಾಣವು ದ್ವಿಗುಣಗೊಂಡಿದೆ. ಆದರೆ, ಔಷಧಿಯನ್ನು ಉತ್ಪಾದಿಸುವ ಕಂಪನಿಗಳು ನಮ್ಮಲ್ಲಿ ಯಾವುದೇ ಸ್ಟಾಕ್ ಇಲ್ಲ ಎಂದು ಹೇಳುತ್ತಿವೆ’ ಎಂದು ಮೆಡಿಹೌಕ್ಸ್ ಫಾರ್ಮಾ ಪಿ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಭಟ್ ದಿ ಹಿಂದೂಗೆ ತಿಳಿಸಿದ್ದಾರೆ.

ಆಂಫೊಟೆರಿಸಿನ್ ಬಿ ಎಂದರೇನು?

ಆಂಫೊಟೆರಿಸಿನ್ ಬಿ ಒಂದು ಆ್ಯಂಟಿ–ಫಂಗಲ್ ಔಷಧಿಯಾಗಿದ್ದು, ಇದನ್ನು ಗಂಭೀರ ಅಥವಾ ಮಾರಣಾಂತಿಕ ಫಂಗಲ್ ಇನ್ಫೆಕ್ಷನ್ ಇರುವವರ ಚಿಕಿತ್ಸೆಗೆ ಬಳಸಲಾಗುತ್ತದೆ. ಸೋಂಕಿಗೆ ಕಾರಣವಾದ ಶಿಲೀಂಧ್ರಗಳ ಬೆಳವಣಿಗೆಯನ್ನು ನಿಧಾನಗೊಳಿಸುವ ನಿಟ್ಟಿನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ಇದು ಕೆಲವು ಗಂಭೀರ ಅಡ್ಡಪರಿಣಾಮಗಳನ್ನು ಹೊಂದಿರುವುದರಿಂದ, ಸಾಮಾನ್ಯ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಕಡಿಮೆ ಪ್ರಮಾಣದ ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ಬಳಸಬಾರದು.

ಕೋವಿಡ್ -19 ರೋಗಿಗಳ ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಯಲ್ಲಿ ಆಂಫೊಟೆರಿಸಿನ್ ಬಿ ಅನ್ನು ಹೇಗೆ ಬಳಸಲಾಗುತ್ತದೆ?

ಈಗ ‘ಕಪ್ಪು ಶಿಲೀಂಧ್ರ’ ಎಂದು ಕರೆಯಲ್ಪಡುವ ಮ್ಯೂಕೋಮೈಕೋಸಿಸ್‌ನಿಂದ ಬಳಲುತ್ತಿರುವ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಆಂಫೊಟೆರಿಸಿನ್ ಬಿ ಅನ್ನು ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಮ್ಯೂಕೋಮೈಕೋಸಿಸ್‌ನಿಂದ ಬಳಲುತ್ತಿರುವ ರೋಗಿಯ ರಕ್ತನಾಳಕ್ಕೆ ಚುಚ್ಚಲಾಗುತ್ತದೆ. ರೋಗಿಯ ತೂಕವನ್ನು ಅವಲಂಬಿಸಿ ದಿನಕ್ಕೆ ನಾಲ್ಕರಿಂದ ಆರು ಭಾರಿ ಚುಚ್ಚುಮದ್ದು ನೀಡಲಾಗುತ್ತದೆ. ಕೆಲವು ರೋಗಿಗಳಿಗೆ 21 ದಿನಗಳವರೆಗೆ ಚಿಕಿತ್ಸೆ ಮುಂದುವರಿಯುತ್ತದೆ.

ಕೋವಿಡ್ ಪಾಸಿಟಿವ್ ರೋಗಿಗಳು ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗುತ್ತಿರುವುದರಿಂದ, ಆಂಫೊಟೆರಿಸಿನ್ ಬಿ ಚುಚ್ಚುಮದ್ದಿನ ಬೇಡಿಕೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ.

ಸಾಮಾನ್ಯವಾಗಿ, ಈ ಚುಚ್ಚುಮದ್ದಿನ ಎಲ್ಲ ಬ್ರಾಂಡ್‌ಗಳಲ್ಲಿ 50 ಮಿ. ಗ್ರಾಂ ಬಾಟಲಿಗೆ ₹ 7,800 ದರವಿದೆ. ಆದರೆ, ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಇದನ್ನು ₹ 14,000ಗಳಿಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT