ಸೋಮವಾರ, ಮಾರ್ಚ್ 20, 2023
30 °C

ಮಾನ್ಸೂನ್‌ನಲ್ಲಿ ಹೈಡ್ರೇಟ್ ಆಗಿರಲು ಸಹಾಯ ಮಾಡುವ 7 ರುಚಿಯಾದ ಪಾನೀಯಗಳು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಗಾರು ಅಂತ ಅಂದುಕೊಂಡಾಗಲೆಲ್ಲ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವುದು ಮುಖ್ಯ ಎನ್ನುವುದನ್ನು ನಾವು ಗಮನಿಸುವುದೇ ಇಲ್ಲ. ವಾತಾವರಣದಲ್ಲಿನ ಅತಿಯಾದ ತೇವಾಂಶ ಮತ್ತು ನಮ್ಮ ಹಣೆಯ ಮೇಲಿನ ಬೆವರಿನ ಹನಿಗಳಿಂದ ನಮ್ಮ ದೇಹದಲ್ಲೂ ಸಾಕಷ್ಟು ನೀರು ಇದೆ ಎಂದು ಭಾವಿಸುತ್ತೇವೆ. ಇದು ಸುಳ್ಳು ಎಂದರೆ ನೀವಿದನ್ನು ನಂಬಲೇಬೇಕು. ಹೆಚ್ಚಾಗಿ ಬೀಳುವ ಮಳೆಯು ತನ್ನೊಂದಿಗೆ ಸಂತೋಷದ ಭಾವನೆಯನ್ನು ತರುತ್ತದೆಯಾದರೂ, ಆಗ ದೇಹವು ನಿಜವಾಗಿಯೂ ತೀವ್ರವಾಗಿ ನಿರ್ಜಲೀಕರಣಗೊಂಡಿರುತ್ತದೆ. ಹೀಗಾಗಿ ಮಳೆಗಾಲದಲ್ಲಿಯೂ ಬೇಸಿಗೆಯಂತೆ ದಿನವಿಡೀ ನಿರಂತರವಾಗಿ ನೀರು ಕುಡಿಯುವುದು ಬಹಳ ಮುಖ್ಯವಾಗಿರುತ್ತದೆ.

ಒಂದು ವೇಳೆ ನೀರು ಕುಡಿಯಲು ಸಾಧ್ಯವಾಗದಿದ್ದರೆ ಮಳೆಗಾಲದಲ್ಲಿ ಕೆಲವು ಪಾನೀಯಗಳನ್ನು ಸೇವಿಸುವುದರಿಂದ ಹೈಡ್ರೇಟ್ ಆಗಿರಲು ನೆರವಾಗುತ್ತದೆ. ಈ ಪಾನೀಯಗಳನ್ನು ಸೇವಿಸುವುದರಿಂದ ಇದು ಕಾಲೋಚಿತ ಜ್ವರವನ್ನು ನಿವಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಲ್ಲಿವೆ ಒಂದಷ್ಟು ಪಾನೀಯಗಳು....

1. ಚಿಕನ್ ನಿಂಬು ಧನಿಯಾ ಸೂಪ್ (ಚಿಕನ್ ನಿಂಬೆ ಕೊತ್ತಂಬರಿ ಸೂಪ್)

ರುಚಿಕರವಾದ ಗಿಡಮೂಲಿಕೆಗಳು ಮತ್ತು ಸುವಾಸನೆಗಳ ಆಕರ್ಷಣೀಯ ಮಿಶ್ರಣದಿಂದ ಸಮೃದ್ಧವಾಗಿರುವ ಈ ಸೂಪ್ ನಿಮ್ಮನ್ನು ಹೈಡ್ರೇಟ್ ಆಗಿರಿಸಲು ಉತ್ತಮವಾಗಿದೆ.

2. ಜೇನು-ನಿಂಬು-ಶುಂಟಿ ಟೀ

ನೀರಿನ ಅಂಶದಿಂದ ಕೂಡಿರುವ ಚಹಾಗಳು ಕೂಡ ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ತೃಪ್ತಿಕರವಾದ ಪಾನೀಯಕ್ಕಾಗಿ ಜೇನು, ನಿಂಬು, ಶುಂಟಿಯನ್ನು ಬೆರೆಸಿದ ಟೀಯನ್ನು ಪ್ರಯತ್ನಿಸಿ.

3. ಬಾದಾಮ್ ಕ ಕಹ್ವಾ (ಬಾದಾಮಿ ಗ್ರೀನ್ ಟೀ)

ಕಹ್ವಾದ (ಕಹ್ವಾ ಎಂಬುದು ಸಾಂಪ್ರದಾಯಿಕ ಹಸಿರು ಚಹಾ. ಇದನ್ನು ಮಸಾಲೆಗಳು, ಕೇಸರಿ, ಬಾದಾಮಿ ಸೇರಿಸಿ ತಯಾರಿಸಲಾಗುತ್ತದೆ) ಅನೇಕ ಪಾಕವಿಧಾನಗಳಿವೆ, ಆದರೆ ಬಾದಾಮ್ ಕಹ್ವಾ ನೀವೇ ತಯಾರಿಸಬಹುದಾದ ಅತ್ಯಂತ ಹಿತವಾದ ಮತ್ತು ರುಚಿಕರವಾದ ಪಾನೀಯವಾಗಿದೆ.

4. ಫಾಲ್ಸಾದ ಶರಬತ್

ಫಾಲ್ಸಾ ಹಣ್ಣುಗಳು ಮುಂಗಾರು ಮತ್ತು ಬೇಸಿಗೆಯ ನೆಚ್ಚಿನ ಹಣ್ಣುಗಳಾಗಿವೆ ಮತ್ತು ಇದರಿಂದ ತಯಾರಿಸಿದ ಶರಬತ್ ಸೇವಿಸುವುದರಿಂದ ನಿಮ್ಮ ದೇಹವನ್ನು ಒಳಗಿನಿಂದ ಪೋಷಿಸುತ್ತದೆ ಮತ್ತು ಚರ್ಮವನ್ನು ಆರೋಗ್ಯವಾಗಿರಿಸುತ್ತದೆ.

5. ಮಸಾಲಾ ಟೀ

ಮಳೆಯಿಲ್ಲದೆ ಹೇಗೆ ಮುಂಗಾರು ಪೂರ್ಣವಾಗುವುದಿಲ್ಲವೋ ಹಾಗೆ ಮಸಾಲ ಟೀ ಇಲ್ಲದೆ ದೇಹವನ್ನು ಹೈಡ್ರೇಟ್ ಮಾಡುವುದು ಕೂಡ ಅಪೂರ್ಣ. ಈ ಮಿಶ್ರಣದಲ್ಲಿರುವ ಮಸಾಲೆ ಪದಾರ್ಥಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

6. ಪ್ಲಮ್ ಸ್ಕ್ವ್ಯಾಷ್

ಪ್ಲಮ್ (ಅಥವಾ ಆಲೂ ಬುಖಾರಾ) ಹಣ್ಣು ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು ನೆರವಾಗುತ್ತದೆ. ಅಲ್ಲದೆ ರುಚಿಕರವಾಗಿರುತ್ತದೆ.

7. ಹಾಟ್ ನ್ಯೂಡಲ್ ಸೂಪ್

ಜಿಟಿ ಜಿಟಿ ಮಳೆಯ ಸಂಜೆಯಲ್ಲಿ ಬಿಸಿ ಬಿಸಿ ನ್ಯೂಡಲ್ ಸೂಪ್‌ಗಿಂತ ಹೆಚ್ಚು ರುಚಿಕರವಾದದ್ದು ಏನೂ ಇಲ್ಲ. ಹೀಗಾಗಿಯೇ ಇದು ಕೂಡ ದೇವಹವನ್ನು ಹೈಡ್ರೇಟ್ ಆಗಿರಲು ನೆರವಾಗುತ್ತದೆ.

ಈ ಪಾನೀಯಗಳ ಹೊರತಾಗಿಯೂ ದೇಹವನ್ನು ಹೈಡ್ರೇಟ್ ಆಗಿಡಲು ದಿನವಿಡೀ ನಿಯಮಿತವಾಗಿ ನೀರು ಕುಡಿಯುವುದು ಅತ್ಯಗತ್ಯವಾಗಿರುತ್ತದೆ. ಈ ಮುಂಗಾರಿನ ವೇಳೆ ಹೈಡ್ರೇಟ್ ಆಗಿರಿ ಮತ್ತು ರೋಗಗಳಿಂದ ದೂರವಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು