ದೈನಂದಿನ ಜೀವನದಲ್ಲಿ ಸಂಕಷ್ಟದ ಸನ್ನಿವೇಶ ಎದುರಾದಾಗ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಕಾಯಿಲೆಗಳು ಬಂದಾಗ ಬದುಕೇ ಮುಗಿಯಿತು ಎಂದು ವ್ಯಥೆಪಡುತ್ತಾರೆ. ಸೋಲುಗಳು, ಸಮಸ್ಯೆಗಳು ಮತ್ತು ನಿರಾಸೆಗಳು ಕಾಡುತ್ತಿದ್ದರೆ ಹತಾಶೆಗೆ ಒಳಗಾಗುತ್ತಾರೆ. ಒಂದು ಪ್ರಯತ್ನದಲ್ಲಿ ವಿಫಲವಾದರೆ ಮರು ಪ್ರಯತ್ನಿಸಲು ಹಿಂಜರಿಯುತ್ತಾರೆ. ಜೀವನದಲ್ಲಿ ಎದುರಾಗುವ ಜಟಿಲತೆಗಳಿಂದ ಹೊರಬರಲು ನನಗೆ ಎಂದಿಗೂ ಸಾಧ್ಯವಿಲ್ಲ, ನನ್ನಲ್ಲಿ ಆ ಸಾಮರ್ಥ್ಯವಿಲ್ಲ ಎಂದು ಬದುಕಿನ ಬಗ್ಗೆ ಬೇಸರಪಟ್ಟು ಭರವಸೆಯನ್ನು ಕಳೆದುಕೊಳ್ಳುತ್ತಾರೆ. ಈ ರೀತಿಯ ಭರವಸೆರಹಿತ ಬದುಕಿಗೆ ಮೂಲ ಕಾರಣ ಆಶಾವಾದದ ಕೊರತೆ.

ಯಾವುದೇ ಸನ್ನಿವೇಶದಲ್ಲೂ ಉತ್ತಮ ಫಲಿತಾಂಶವನ್ನು ನಿರೀಕ್ಷಿಸುವ ಮಾನಸಿಕ ಮನೋಭಾವವನ್ನು ‘ಆಶಾವಾದ’ ಎಂದು ಕರೆಯುತ್ತೇವೆ. ಕಷ್ಟಗಳ ನಡುವೆಯೂ ಭರವಸೆ–ವಿಶ್ವಾಸಗಳನ್ನು ಇದು ಕಾಪಾಡುತ್ತದೆ. ಬದುಕಿನಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತದೆ ಎಂದು ಸಕಾರಾತ್ಮಕವಾಗಿ ನಂಬುವ, ನಿರೀಕ್ಷಿಸುವ ಮತ್ತು ಆಶಿಸುವ ಮನೋಪ್ರವೃತ್ತಿಯಿದು. ಆಶಾವಾದಿಗಳು ಯಾವುದೇ ಸನ್ನಿವೇಶಗಳನ್ನು ‘ಉತ್ತಮ ಅವಕಾಶಗಳು’ ಎಂಬ ದೃಷ್ಟಿಕೋನದಲ್ಲಿ ಸ್ವೀಕರಿಸುತ್ತಾರೆ. ಜಗತ್ತು ನನ್ನ ಪರವಾಗಿದೆ – ಎಂದು ಇಂಥವರು ಎಂದು ಭಾವಿಸುತ್ತಾರೆ. ತಮ್ಮ ಸುತ್ತಲೂ ಉತ್ತಮ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಇವರು ಯಾವುದೇ ಸನ್ನಿವೇಶಕ್ಕೂ ಬಲಿಪಶುವಾಗುವುದಿಲ್ಲ; ತನಗಾದ ನಷ್ಟಕ್ಕೆ ಇತರರನ್ನು ದೂಷಿಸುವುದಿಲ್ಲ.

ಮಾರ್ಗಗಳು

ಆಶಾವಾದ ಪ್ರಮುಖವಾಗಿ ನಾಲ್ಕು ವಿಶೇಷ ವರ್ತನೆಗಳನ್ನು ಒಳಗೊಂಡಿರುತ್ತದೆ. ಈ ವರ್ತನೆಗಳನ್ನು ವ್ಯಕ್ತಿಯು ಪ್ರತಿನಿತ್ಯಅರಿವಿನ ಸ್ಥಿತಿಯಲ್ಲಿ ನಿರಂತರವಾಗಿ ಪುನರಾವರ್ತಿಸಿ, ಅಭ್ಯಾಸಿಸಿ, ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿಯು ಆಶಾವಾದಿಯಾಗುತ್ತಾನೆ. ಇದನ್ನು ‘ಕಲಿತ ಆಶಾವಾದ’ ಎಂದು ಸಕಾರಾತ್ಮಕ ಮನೋವಿಜ್ಞಾನದ ಪಿತಾಮಹ ಮಾರ್ಟಿನ್ ಸೆಲಿಗ್ಮನ್ ಪ್ರತಿಪಾದಿಸುತ್ತಾರೆ.

ಮೊದಲನೆಯದಾಗಿ, ವ್ಯಕ್ತಿಯು ಆಶಾವಾದಿಯಾಗಬೇಕಾದರೆ ಪ್ರತಿಯೊಂದು ಸನ್ನಿವೇಶದಲ್ಲಿ ಯಾವುದಾದರೂ ಒಂದು ಉತ್ತಮವಾದ ವಿಚಾರವಿದೆ ಎಂಬುದನ್ನು ಹುಡುಕಲು ಪ್ರಯತ್ನಿಸಬೇಕು. ಸನ್ನಿವೇಶಗಳಲ್ಲಿ ದೋಷಗಳು ಕಂಡುಬಂದರೂ ಅಥವಾ ಸರಿಯಿಲ್ಲ ಎಂಬ ಭಾವನೆ ಉಂಟಾದರೂ ಅದರಲ್ಲಿ ಒಳಿತನ್ನು ಹುಡುಕುವ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳಸಿಕೊಳ್ಳಬೇಕು.

ಎರಡನೆಯದಾಗಿ ಆಶಾವಾದಿಯಾಗಲು ಬಯಸುವ ವ್ಯಕ್ತಿಯು ತನಗೆ ಎದುರಾಗುವಂತಹ ಕಷ್ಟಗಳು, ತೊಂದರೆಗಳು, ಸೋಲುಗಳು ಅಥವಾ ಬೇಸರವನ್ನುಂಟುಮಾಡುವಂತಹ ಅನೇಕ ಘಟನೆಗಳನ್ನು ನೋಡಿ ಮಾನಸಿಕವಾಗಿ ಕುಗ್ಗಬಾರದು; ನಕಾರಾತ್ಮಕ ಭಾವನೆಗಳಲ್ಲಿ ಕೊಚ್ಚಿಹೋಗಬಾರದು. ಪ್ರತಿಯೊಂದು ಕಠಿಣ ಸಂದರ್ಭ ಮತ್ತು ಸವಾಲುಗಳು ಬದುಕಿನಲ್ಲಿ ಉತ್ತಮ ಪಾಠವನ್ನು ಕಲಿಸುತ್ತವೆ ಎಂದು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಬೇಕು. ಜೀವನದಲ್ಲಿ ಎದುರಾಗುವಂತಹ ಸಮಸ್ಯೆಗಳು, ಸವಾಲುಗಳು ಹಾಗೂ ತೊಂದರೆಗಳು ಇನ್ನೂ ಉತ್ತಮವಾಗಿ ಬೆಳೆಯಲು ಹಾಗೂ ನಿರ್ಧಾರಗಳು ಗಟ್ಟಿಗೊಳ್ಳಲು ಪ್ರೇರಕವಾಗುತ್ತದೆ ಎಂದು ಸ್ವೀಕರಿಸಬೇಕು.

ಮೂರನೆಯದಾಗಿ, ಆಶಾವಾದಿಯಾಗಲು ವ್ಯಕ್ತಿಯು ಜೀವನದಲ್ಲಿ ಯಾವುದೇ ಸಮಸ್ಯೆಗಳು ಎದುರಾದಾಗ ಆ ಸಮಸ್ಯೆಗಳ ಬಗೆಗೆ ಅತಿಯಾಗಿ ಚಿಂತಿಸುತ್ತಾ ತಟಸ್ಥವಾಗಬಾರದು; ಬದಲಾಗಿ ಸಮಸ್ಯೆಗಳನ್ನು ಬಗೆಹರಿಸಲು ಜಗತ್ತಿನಲ್ಲಿ ಎಲ್ಲ ಸಾಧ್ಯತೆಗಳು ಇವೆ – ಎಂಬ ನಂಬಿಕೆಯೊಂದಿಗೆ ಪರಿಹಾರ ಮಾರ್ಗಗಳನ್ನು ಹುಡುಕುವ ಕಡೆಗೆ ಆಲೋಚನೆ ಮಾಡಬೇಕು. ಸಮಸ್ಯೆಗಳ ಬಗೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸದೆ ವಿಶ್ಲೇಷಣಾತ್ಮಕವಾಗಿ, ಬೌದ್ಧಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಆಲೋಚಿಸಿ ಪ್ರತಿಕ್ರಿಯಿಸಬೇಕು.

ನಾಲ್ಕನೆಯದಾಗಿ, ಆಶಾವಾದಿಯಾಗುವ ವ್ಯಕ್ತಿ ನಿರಂತರವಾಗಿ ತನ್ನ ಗುರಿಗಳು ಮತ್ತು ಜೀವನದಲ್ಲಿ ಸಾಧಿಸಬೇಕಾದಂತಹ ವಿಚಾರಗಳ ಬಗ್ಗೆ ಆಲೋಚಿಸಬೇಕು; ಅದಕ್ಕೆ ತಕ್ಕ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಜೀವನದಲ್ಲಿ ನಡೆದು ಹೋದ ಘಟನೆಗಳನ್ನು ಚಿಂತಿಸಿ ಕೊರಗಬಾರದು. ತನಗೆ ದೊರೆತಿರುವ ಸಮಯ ಮತ್ತು ತನ್ನಲ್ಲಿರುವ ಸಾಮರ್ಥ್ಯಗಳನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಕಡೆಗೆ ಮನಸ್ಸನ್ನು ಕೇಂದ್ರಿಕರಿಸಬೇಕು.

ಆರೋಗ್ಯ

ಆಶಾವಾದ ಮತ್ತು ಆರೋಗ್ಯ ಪರಸ್ಪರ ಪೂರಕವಾದ ಸಂಬಂಧವನ್ನು ಹೊಂದಿದೆ. ಆಶಾವಾದ ಮನಃಸ್ಥಿತಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಶಾವಾದವು ಖಿನ್ನತೆಯನ್ನು ಕಡಿಮೆಮಾಡುತ್ತದೆ ಮತ್ತು ಹಾರ್ಮೋನಗಳ ಸಮತೋಲನವನ್ನು ಸ್ಥಿರಗೊಳಿಸುತ್ತದೆ. ಆಶಾವಾದವನ್ನು ಹೊಂದಿರುವ ವ್ಯಕ್ತಿ ಒತ್ತಡದ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸುತ್ತಾನೆ. ಆದಕಾರಣ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ; ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಆಶಾವಾದಿಗಳು ಸಕಾರಾತ್ಮಕ ಆಲೋಚನೆ ಹೊಂದಿರುವುದರಿಂದ ದೈಹಿಕ ಕಾಯಿಲೆಗಳು ಬಂದಾಗ ನಿರಾಶಾವಾದಿಗಳಿಗಿಂತ ಆಶಾವಾದಿಗಳು ಬೇಗನೆ ಗುಣಮುಖರಾಗುತ್ತಾರೆ. ಆಶಾವಾದಿತನ ಅನಾರೋಗ್ಯದ ವಿರುದ್ಧ ಹೋರಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಯಶಸ್ಸು

ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಪಡೆಯಲು ಆಶಾವಾದವು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆಶಾವಾದಿಗಳು ಅಡೆತಡೆಗಳು, ಸವಾಲುಗಳು ಮತ್ತು ಟೀಕೆಗಳ ನಡುವೆಯೂ ಗುರಿಗಳತ್ತ ಕೆಲಸಮಾಡುವ ಮನೋಭಾವವನ್ನು ಹೊಂದಿರುವುದರಿಂದ ಇವರಲ್ಲಿ ಯಶಸ್ಸನ್ನು ಸಾಧಿಸುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ. ಆಶಾವಾದದ ಪರಿಣಾಮವಾಗಿ ಜಗತ್ತಿನಲ್ಲಿ ಹಲವಾರು ಸಾಧಕರು ಕ್ರೀಡೆ, ಸಿನಿಮಾ, ವಾಣಿಜ್ಯ ಮತ್ತು ವ್ಯಾಪಾರ, ಕೈಗಾರಿಕೋದ್ಯಮ, ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ, ಸಂಶೋಧನೆ – ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಯಶಸ್ಸನ್ನು ಪಡೆದಿರುವುದನ್ನು ಕಾಣಬಹುದು.

ಆತ್ಮಗೌರವ

ಆಶಾವಾದಿಗಳು ತಮ್ಮನ್ನು ತಾವು ಇರುವಂತೆಯೇ ಪ್ರೀತಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆ. ಇವರು ಆಡಂಬರದ ಜೀವನವನ್ನು ಬಯಸುವುದಕ್ಕಿಂತ ಆತ್ಮಗೌರವದ ಜೀವನವನ್ನು ಹೆಚ್ಚಾಗಿ ಬಯಸುತ್ತಾರೆ. ತಮ್ಮಲ್ಲಿರುವ ಸಾಮರ್ಥ್ಯಗಳನ್ನು ಮೆಚ್ಚುತ್ತಾರೆ. ತಮ್ಮನ್ನು ತಾವು ಗೌರವಿಸಿಕೊಳ್ಳುವುದರೊಂದಿಗೆ ಇತರರನ್ನು ಗೌರವಿಸುತ್ತಾರೆ.

ಸಂತೃಪ್ತ ಜೀವನ

ಆಶಾವಾದಿಗಳು ಹರ್ಷಚಿತ್ತವಾಗಿರುವ ಮತ್ತು ಸಕಾರಾತ್ಮಕ ಚಿಂತನೆಯಿರುವ ಜನರೊಂದಿಗೆ ಹೆಚ್ಚಾಗಿ ಇರುವುದರಿಂದ ಇವರ ಜೀವನ ಚೈತನ್ಯದಿಂದ ಕೂಡಿರುತ್ತದೆ. ಆಶಾವಾದಿ ಜನರು ಬದುಕಿನ ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಸಾರ್ಥಕಗೊಳಿಸಿಕೊಳ್ಳುತ್ತಾರೆ ಜೊತೆಗೆ ಜೀವನ ಪ್ರೀತಿಯನ್ನು ಬೆಳಸಿಕೊಳ್ಳುತ್ತಾರೆ. ಜೀವನದಲ್ಲಿ ಬದಲಾಯಿಸಲಾಗದದ್ದನ್ನು ಯಥಾವತ್ತಾಗಿ ಸ್ವೀಕರಿಸುತ್ತಾರೆ ಪರಿಣಾಮವಾಗಿ ಜೀವನದಲ್ಲಿ ಸಂತೃಪ್ತಿಯನ್ನು ಹೊಂದಿರುತ್ತಾರೆ.

ಪರೋಪಕಾರತೆ

ಒಳ್ಳೆಯ ಕಾರ್ಯಗಳು ಜಗತ್ತಿನಲ್ಲಿ ಉತ್ತಮ ಪರಿಣಾಮಗಳನ್ನು ಉಂಟುಮಾಡುತ್ತವೆ ಎನ್ನುವ ದೃಢನಂಬಿಕೆಯನ್ನು ಹೊಂದಿರುವುದರಿಂದ ಆಶಾವಾದಿಗಳಲ್ಲಿ ಪರಹಿತ ಚಿಂತನೆ ಮತ್ತು ದಾನಶೀಲತೆ ಗುಣಗಳು ಹೆಚ್ಚಾಗಿ ಕಂಡುಬರುತ್ತವೆ. ಆಶಾವಾದಿಗಳು ಅಗತ್ಯವಿರುವ ಜನರಿಗೆ ಸಹಾಯ ಮತ್ತು ಸೇವೆ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ.

ಕೃತಜ್ಞತಾಭಾವ

ಆಶಾವಾದಿಗಳು ತಮ್ಮ ಜೀವನದ ಪ್ರತಿಯೊಂದು ವಿಷಯಗಳಿಗೂ ಕೃತಜ್ಞರಾಗಿರುತ್ತಾರೆ. ತಂದೆ ತಾಯಿ, ಪರಿಸರ, ಕುಟುಂಬ, ವೃತ್ತಿ, ಸಾಕುಪ್ರಾಣಿಗಳು, ಸ್ನೇಹಿತರು, ಸಂಬಂಧಿಕರು – ಹೀಗೆ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಬಲ್ಲವರಾಗಿರುತ್ತಾರೆ. ಜೀವನದಲ್ಲಿ ತಮಗೆ ದೊರೆತಿರುವ ಸಹಾಯಗಳಿಗೆ ಸದಾ ಕೃತಜ್ಞತಾಭಾವವನ್ನು ಹೊಂದಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.