ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆಗಾಲ: ಚಿಣ್ಣರ ಉಡುಪು ಹೀಗಿರಲಿ

Published 28 ಜೂನ್ 2024, 19:30 IST
Last Updated 28 ಜೂನ್ 2024, 19:30 IST
ಅಕ್ಷರ ಗಾತ್ರ

ಮಳೆಗಾಲದಲ್ಲಿ ಎಂಥ ಉಡುಪು ತೊಟ್ಟರೆ ಸುರಕ್ಷಿತವಾಗಿರಬಹುದು. ಅದರಲ್ಲಿಯೂ ಮಕ್ಕಳಿಗೆ ಎಂಥ ದಿರಿಸು ಇದ್ದರೆ ಅವರ ಆರೋಗ್ಯಕ್ಕೆ  ತೊಂದರೆಯಾಗುವುದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಮಳೆಗಾಲದಲ್ಲಿ ಬರುವ ಸಾಮಾನ್ಯ ಶೀತ, ನೆಗಡಿ, ಕೆಮ್ಮು ಸಮಸ್ಯೆಗಳನ್ನು ತಡೆಗಟ್ಟಬಹುದು. 

ಮಳೆಯಲ್ಲಿ ನೆನೆಯುವುದಕ್ಕೆ ಯಾರಿಗೆ ತಾನೇ ಇಷ್ಟವಿಲ್ಲ. ಪುಟಿದೇಳುವ ಮಕ್ಕಳು ಚಿಟಪಟ ಮಳೆಯಲ್ಲಿ ಹೆಜ್ಜೆಹಾಕುತ್ತ, ಕುಣಿಯುತ್ತ ನೆನೆಯಲು ಇಷ್ಟಪಡುತ್ತಾರೆ.

ಗಾಳಿ, ಮಳೆಗೆ ಬೇಗನೆ ಶೀತವಾಗುವ ಪರಿಸ್ಥಿತಿ ಇದ್ದರೆ ಆದಷ್ಟು ಬೆಚ್ಚಗಿನ ಉಡುಪುಗಳಿಗೆ ಆದ್ಯತೆ ಕೊಡಿ. ಶಾಲೆಗೆ ಹೋಗುವ ಮಕ್ಕಳಾದರೆ ಸಮವಸ್ತ್ರದೊಂದಿಗೆ ರೇನ್‌ಕೋಟ್‌ ಜತೆ ಇರಲಿ. ಗಾಢ ಬಣ್ಣದ, ಚಿತ್ತಾರಗಳಿರುವ ರೇನ್‌ಕೋಟ್‌ಗಳಾದರೆ ಮಕ್ಕಳು ಇಷ್ಟಪಟ್ಟು ಧರಿಸುತ್ತಾರೆ.

ಪುಸ್ತಕ ಹಾಗೂ ಅಧ್ಯಯನ ಸಾಮಗ್ರಿ ನೆನೆಯದಂತಿರಲು ವಾಟರ್‌ಪ್ರೂಫ್‌ ಬ್ಯಾಗ್‌ಗಳನ್ನು ನೀಡಿ. 

ಮಕ್ಕಳಿಗೆ ಸಾಧ್ಯವಾದಷ್ಟು ಗಾಢ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿ. ಒಂದೊಮ್ಮೆ ರಸ್ತೆಯ ಕೆಸರು ತಾಕಿದರೂ ಎದ್ದು ಕಾಣದಂತೆ ಮರೆಮಾಚುತ್ತದೆ.  ಸಿಂಥೆಟಿಕ್ ಮತ್ತು ಉಣ್ಣೆಯ ಮಾದರಿಯ ಬಟ್ಟೆಗಳನ್ನು ಹೆಚ್ಚಾಗಿ ಬಳಸಿ ಇದು ಮಕ್ಕಳನ್ನು ಬೆಚ್ಚಗಿಡುತ್ತದೆ.

ಅಡಿಯಿಂದ ಮುಡಿಯವರೆಗೆ ಮಕ್ಕಳನ್ನು ಬೆಚ್ಚಗಿಡಲು ಪ್ರಯತ್ನಿಸಿ. ಸಾಧ್ಯವಾದಷ್ಟು ನೀರು ಹೀರುವ  ಹತ್ತಿ ಬಟ್ಟೆಗಳನ್ನು ಬಳಸಬೇಡಿ.

ಮಕ್ಕಳ ಪಾದಗಳಿಗೆ ಉಣ್ಣೆಯ ಸಾಕ್ಸ್‌ಗಳನ್ನು ಹಾಕಿ.  ವಾಟರ್‌ ಪ್ರೂಫ್‌ ಬೂಟ್‌ಗಳ ಬಳಕೆ ಹೆಚ್ಚಿರಲಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT