ಚಳಿಗಾಲ ಗರ್ಭಿಣಿಯರಿಗೆ ವಿಶಿಷ್ಟ ಸವಾಲುಗಳನ್ನು ಒಡ್ಡುತ್ತದೆ. ಪ್ರಸ್ತುತ ಚಳಿ ಹೆಚ್ಚಾಗಿರುವ ಕಾರಣ ಗರ್ಭಿಣಿಯರು ಇನ್ನಷ್ಟು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಏಕೆಂದರೆ ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ, ರಕ್ತಪರಿಚಲನೆ ಮತ್ತು ತಾಪಮಾನ ನಿಯಂತ್ರಣಗಳ ಮೇಲೆ ಪರಿಣಾಮ ಬೀರುತ್ತದೆ. ತಾಯಿ ಮತ್ತು ಭ್ರೂಣದ ಆರೋಗ್ಯ ಎರಡನ್ನೂ ರಕ್ಷಿಸಲು ಚಳಿಗಾಲದಲ್ಲಿ ಸರಿಯಾದ ಕಾಳಜಿ ಅತ್ಯಗತ್ಯವಾಗಿದೆ.

ಚಳಿಗಾಲವು ಹೇಗೆ ಹಾನಿ ಮಾಡಬಹುದು?

ಗರ್ಭಾವಸ್ಥೆಯಲ್ಲಿ, ರೋಗನಿರೋಧಕ ವ್ಯವಸ್ಥೆಯು ನೈಸರ್ಗಿಕವಾಗಿ ಕುಂದುತ್ತದೆ. ಇದು ಮಹಿಳೆಯರನ್ನು ಶೀತ, ಜ್ವರ ಮತ್ತು ಉಸಿರಾಟದ ಕಾಯಿಲೆಗಳಂತಹ ಸೋಂಕುಗಳಿಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಚಳಿ ರಕ್ತನಾಳಗಳನ್ನು ಸಂಕುಚಿತಗೊಳಿಸಬಹುದು. ಇದರಿಂದ ರಕ್ತಪರಿಚಲನೆ ನಿಧಾನವಾಗುತ್ತದೆ. ಅಸ್ವಸ್ಥತೆ, ಕೀಲು ಗಟ್ಟಿತನ ಮತ್ತು ಆಯಾಸವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ನೀರಿನ ಕೊರತೆಯು ಮೂತ್ರ ಸೋಂಕಿಗೆ ಕಾರಣವಾಗಬಹುದು.
.ಮೂತ್ರಕೋಶ ಸಮಸ್ಯೆ– ಹೊಸ ಆವಿಷ್ಕಾರಕ್ಕೆ ಒತ್ತು ನೀಡಿ; ಎನ್.ಆರ್.ನಾರಾಯಣಮೂರ್ತಿ.ಆರೋಗ್ಯ: ಗರ್ಭಿಣಿಯರ ವ್ಯಾಯಾಮಗಳು.
ಗರ್ಭಿಣಿಯರ ಮೇಲಿನ ಪರಿಣಾಮಗಳು:

ಅಕಾಲಿಕ ಜನನ: ಚಳಿಗಾಲದ ಒತ್ತಡವು ಮಗುವಿಗೆ ರಕ್ತ ಹರಿವು ಮತ್ತು ಆಮ್ಲಜನಕವನ್ನು ಕಡಿಮೆ ಮಾಡಬಹುದು. ಆರಂಭಿಕ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ. ಕಡಿಮೆ ಜನನ ತೂಕ (ವಿಶೇಷವಾಗಿ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ) ಗರ್ಭಾವಸ್ಥೆಯಲ್ಲಿ ತೀವ್ರ ಶೀತಕ್ಕೆ ಒಡ್ಡಿಕೊಳ್ಳುವುದು, ಪೋಷಕಾಂಶದ ವಿತರಣೆ ಕಡಿಮೆಯಾಗಬಹುದು ಮತ್ತು ಭ್ರೂಣದ ಬೆಳವಣಿಗೆಯನ್ನು ಮಿತಿಗೊಳಿಸಬಹುದು.

ಉಸಿರಾಟದ ಸೋಂಕುಗಳು: (ಶೀತ, ಜ್ವರ) ದುರ್ಬಲಗೊಂಡ ರೋಗನಿರೋಧಕ ವ್ಯವಸ್ಥೆ, ಗರ್ಭಾವಸ್ಥೆಯಲ್ಲಿ ಹೃದಯ ಮತ್ತು ಶ್ವಾಸಕೋಶಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು. ಶೀತ ಮತ್ತು ಜ್ವರದಂತಹ ಉಸಿರಾಟದ ಸೋಂಕುಗಳ ಅಪಾಯಗಳಿವೆ.

ನೀರಿನ ಕೊರತೆ: ಚಳಿಗಾಲದಲ್ಲಿ ಶೀತ, ಶುಷ್ಕ ಗಾಳಿ ಮತ್ತು ಕಡಿಮೆ ಬಾಯಾರಿಕೆ ಅಸಮರ್ಪಕ ನೀರಿನ ಕುಡಿಯುವಿಕೆಗೆ ಕಾರಣವಾಗಬಹುದು. ಇದು ಅಕಾಲಿಕ ಹೆರಿಗೆ, ಮಲಬದ್ಧತೆ, ಮೂತ್ರನಾಳದ ಸೋಂಕಿನ ಅಪಾಯಗಳನ್ನು ಹೆಚ್ಚಿಸಬಹುದು.

ಒಣ ಮತ್ತು ಚರ್ಮದ ತುರಿಕೆ : ಗರ್ಭಾವಸ್ಥೆಯ ಹಾರ್ಮೋನುಗಳು ಚಳಿ, ಶುಷ್ಕ ಗಾಳಿಯೊಂದಿಗೆ ಸೇರಿ, ಒಣ ಚರ್ಮ ಮತ್ತು ತುರಿಕೆಗೆ ಕಾರಣವಾಗುತ್ತವೆ.

ವಿಟಮಿನ್ ಡಿ ಕೊರತೆ: ಚಳಿಗಾಲದಲ್ಲಿ ಕಡಿಮೆ ಸೂರ್ಯನ ಬೆಳಕು ಎಂದರೆ ದೇಹದಲ್ಲಿ ವಿಟಮಿನ್ ಡಿ (ಮಗುವಿನ ಮೂಳೆಗಳ ಆರೋಗ್ಯಕ್ಕೆ ಮುಖ್ಯ) ಮಟ್ಟ ಕಡಿಮೆಯಾಗುತ್ತದೆ. ನಿಮ್ಮ ದೇಹಕ್ಕೆ ತನ್ನ ಹೆಚ್ಚಿನ ವಿಟಮಿನ್ ಡಿಯನ್ನು ಸಂಶ್ಲೇಷಿಸಲು ಸೂರ್ಯನ ಬೆಳಕಿನ ಒಡ್ಡುವಿಕೆ ಅಗತ್ಯವಿದೆ.

ಚಳಿಗಾಲದಲ್ಲಿ ಸುರಕ್ಷಿತ ಗರ್ಭಾವಸ್ಥೆಗಾಗಿ ಕೆಲವು ಸಲಹೆಗಳು:

ದೇಹದವನ್ನು ಬೆಚ್ಚಗಿಡುವುದು: ಮಂದಾಗಿನ ಬಟ್ಟೆಗಳು ನಿಮ್ಮ ದೇಹಕ್ಕೆ ಶಾಖವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಚಳಿಯಿಂದ ರಕ್ಷಿಸುತ್ತವೆ.

ಪೌಷ್ಟಿಕ, ಬೆಚ್ಚಗಿನ ಆಹಾರವನ್ನು ಸೇವಿಸಿ: ಚಳಿಗಾಲದಲ್ಲಿ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ಗಳಿಂದ ಸಮೃದ್ಧವಾದ ಸಮತೋಲಿತ ಆಹಾರದ ಸೇವನೆ ಅತ್ಯಗತ್ಯ. ಸೂಪ್, ಸ್ಟ್ಯೂಗಳು, ಗಂಜಿ ಮತ್ತು ಗಿಡಮೂಲಿಕೆಗಳ ಚಹಾದಂತಹ ಬೆಚ್ಚಗಿನ, ತಾಜಾವಾಗಿ ಬೇಯಿಸಿದ ಊಟಗಳು ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತವೆ. ಋತುಮಾನದ ಹಣ್ಣು, ತರಕಾರಿ, ಬೀಜ ಮತ್ತು ಕಾಳುಗಳು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ.

ವ್ಯಾಯಾಮ ಮತ್ತು ವಿಶ್ರಾಂತಿ: ಮೃದುವಾದ ಒಳಾಂಗಣ ವ್ಯಾಯಾಮಗಳಲ್ಲಿ ತೊಡಗಿಕೊಳ್ಳಿ ಅಥವಾ ಬೆಚ್ಚಗಿನ ಬಟ್ಟೆಗಳೊಂದಿಗೆ ಸುರಕ್ಷಿತ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸಿ. ಇದು ತೀವ್ರ ಶೀತಕ್ಕೆ ಒಡ್ಡಿಕೊಳ್ಳದೆ ಉತ್ತಮ ರಕ್ತಪರಿಚಲನೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ವಿಶ್ರಾಂತಿ ಮತ್ತು ಗುಣಮಟ್ಟದ ನಿದ್ದೆ ಮುಖ್ಯ, ಏಕೆಂದರೆ ಚಳಿಗಾಲವು ಆಯಾಸ ಮತ್ತು ಸ್ನಾಯು ನೋವನ್ನು ಹೆಚ್ಚಿಸಬಹುದು.

ನಿಯಮಿತ ತಪಾಸಣೆಗಳು: ಹವಾಮಾನ ಪರಿಸ್ಥಿತಿಗಳಿಂದಾಗಿ ದಿನನಿತ್ಯದ ಪ್ರಸವಪೂರ್ವ ಭೇಟಿಗಳನ್ನು ತಪ್ಪಿಸಬಾರದು. ರಕ್ತದೊತ್ತಡ, ತೂಕ, ಭ್ರೂಣದ ಬೆಳೆವಣಿಗೆ ಮತ್ತು ಒಟ್ಟಾರೆ ಆರೋಗ್ಯವನ್ನು ಗರ್ಭಾವಸ್ಥೆಯ ಉದ್ದಕ್ಕೂ ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ.

ಗರ್ಭಾವಸ್ಥೆಯಲ್ಲಿ ನಿಮ್ಮ ದೇಹವು ಬದಲಾವಣೆಗಳು ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ. ಆದರೆ, ಇದಕ್ಕೆ ಮಿತಿಗಳಿವೆ. ಆದ್ದರಿಂದ, ನೀವು ಸರಿಯಾದ ಕಾಳಜಿ ವಹಿಸಬೇಕು ಮತ್ತು ಆರೋಗ್ಯಕರ ಚಳಿಗಾಲದ ಅಭ್ಯಾಸಗಳು ಮತ್ತು ವೃತ್ತಿಪರ ಮಾರ್ಗದರ್ಶನದೊಂದಿಗೆ ನಿಮ್ಮ ದೇಹದ ಕಾರ್ಯಗಳನ್ನು ಬೆಂಬಲಿಸಬೇಕು.

ಲೇಖಕರು: ಡಾ. ಸ್ಮೃತಿ ಡಿ ನಾಯಕ್, ಸಲಹೆಗಾರರು, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಆಸ್ಟರ್ ಆರ್ವಿ ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.