ನಗರಗಳ ಕೆಲವು ಹೆಣ್ಣುಮಕ್ಕಳಿಗೆ ಮಿತಿಮೀರಿ ಮದ್ಯಪಾನ ಮಾಡುವುದು ಒಂದು ಫ್ಯಾಷನ್ ಆಗಿದೆ. ಕಂಠಪೂರ್ತಿ ಬಿಯರ್ ಕುಡಿಯುವುದಂತೂ ಬದುಕಿನ ಭಾಗ ಎಂಬಷ್ಟರ ಮಟ್ಟಿಗೆ ಚಟವಾಗಿದೆ. ಪಬ್ ಸಂಸ್ಕೃತಿ ಹೆಚ್ಚುತ್ತಿದ್ದು, ಉಳ್ಳವರ ಮನೆಗಳಲ್ಲಿ ‘ಮಿನಿ ಬಾರ್’ಗಳು ಸೃಷ್ಟಿಯಾಗುತ್ತಿವೆ. ಅತಿಯಾದರೆ ಅಮೃತವೇ ವಿಷವಾಗುವಾಗ, ಇನ್ನು ಕುಡಿತದ ಚಟಕ್ಕೆ ಬಿದ್ದವರನ್ನು ದೈಹಿಕ– ಮಾನಸಿಕ ಸಮಸ್ಯೆಗಳು ಕಾಡದೆ ಬಿಟ್ಟಾವೆಯೇ?

ವೃತ್ತಿಜೀವನದಲ್ಲಿ ಅಪೇಕ್ಷಿತ ಯಶಸ್ಸು ಸಿಗದೇ ಇದ್ದಾಗ, ಕೆಲಸದ ಒತ್ತಡ ಅತಿಯಾದಾಗ, ಸ್ನೇಹಿತರ ಒತ್ತಾಯದಿಂದ ಸಿಗರೇಟು, ಡ್ರಗ್ಸ್ನ ಚಟಕ್ಕೆ ಬಲಿಯಾಗುವಂತೆ ಮದ್ಯವ್ಯಸನಕ್ಕೆ ಒಳಗಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಒತ್ತಡ ನಿವಾರಣೆಯ ಸಾಧನ ಎಂದುಕೊಂಡ ಮದ್ಯವು ಕ್ರಮೇಣ ಒಂದು ಚಟವೇ ಆಗಿ ಮಹಿಳೆಯರನ್ನು ಕಾಡತೊಡಗುವುದು ಒಂದು ಚೋದ್ಯವೇ ಹೌದು. ಆದರೆ ಸ್ವಯಂಸೇವಾ ಸಂಸ್ಥೆಗಳು, ಪುನರ್ಮನನ ಕೇಂದ್ರಗಳ ನೆರವಿನೊಂದಿಗೆ, ದೃಢಚಿತ್ತದಿಂದ ಮದ್ಯವ್ಯಸನ ಮುಕ್ತರಾಗಿ ಹೊಸ ಬದುಕು ಕಟ್ಟಿಕೊಂಡವರೂ ಇದ್ದಾರೆ. ಅಂತಹ ಯಶಸ್ಸಿನ ಕತೆಗಳನ್ನು ಕೆಲವರು ಇಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ:

ಹೆಸರು ನವ್ಯಾ. ಊರು ಕುಣಿಗಲ್. ಸದ್ಯ ಗೃಹಿಣಿ. ಸುಮಾರು ಎಂಟು ವರ್ಷಗಳ ಹಿಂದೆ ಬೆಂಗಳೂರಿನ ಕಾಲೇಜಿನಲ್ಲಿ ಓದುವಾಗ ವಾರಾಂತ್ಯದಲ್ಲಿ ಗೆಳತಿಯರ ಜೊತೆ ಪಬ್ಗೆ ಹೋಗುವುದು ಅಭ್ಯಾಸವಾಯಿತು. ಕೆಲವೇ ಸಿಪ್ನಿಂದ ಆರಂಭವಾದದ್ದು ದಿನಗಳೆದಂತೆ ಬಾಟಲಿಗಟ್ಟಲೆ ಕುಡಿಯುವುದು ರೂಢಿಯಾಯಿತು. ಕುಡಿದಾಗ ಏನೋ ಉಲ್ಲಾಸ, ಸಂತೋಷ ಆಗುತ್ತಿತ್ತು. ಕಾಲೇಜಿನಲ್ಲಿ ಪಾಠ ಕೇಳುವಾಗಲೂ ಸಂಜೆಯ ಗುಂಡಿನ ಪಾರ್ಟಿಯದ್ದೇ ಗುಂಗು. ಇದೊಂದು ವ್ಯಸನ ಎಂಬುದು ಅರಿವಾಗುವಷ್ಟರಲ್ಲಿ ಆರೋಗ್ಯ
ಕೈಕೊಡಲಾರಂಭಿಸಿತು. ಬಿ.ಕಾಂ ಕೊನೆಯ ವರ್ಷದ ಪರೀಕ್ಷೆ ಬರೆಯಲೂ ಆಗಲಿಲ್ಲ. ಕೈಗಳು ಕಂಪಿಸುತ್ತಿದ್ದವು. ಅಪ್ಪ ಕೊಡುತ್ತಿದ್ದ ಹಣ ನೀರಿನಂತೆ
ಖರ್ಚಾಗುತ್ತಿದ್ದುದನ್ನು ಕಂಡು ಪಶ್ಚಾತ್ತಾಪ ಆಗುತ್ತಿತ್ತು.

ಕಾಲೇಜು ಮುಗಿಯುತ್ತಿದ್ದಂತೆ ಮನೆಯಲ್ಲಿ ಮದುವೆ ಮಾತುಕತೆ ನಡೆಯತೊಡಗಿತು. ಅಸಾಧ್ಯ ಹೊಟ್ಟೆನೋವು ಕಾಡಲಾರಂಭಿಸಿತು. ಆಗ ನನ್ನ ಕುಡಿತದ ಅಭ್ಯಾಸದ ಬಗ್ಗೆ ಮನೆಯವರಿಗೆ ಹೇಳಲೇಬೇಕಾಯಿತು. ಅಮ್ಮ ಬಹಳ ಬೇಸರ ಮಾಡಿಕೊಂಡರು. ಇದನ್ನು ನೋಡಿ ನನಗೂ ಮನಸ್ಸು ಕರಗಿತು. ಇನ್ನು ಉಸಿರು ಇರುವವರೆಗೂ ಕುಡಿಯಬಾರದು ಎಂದು ತೀರ್ಮಾನಿಸಿದೆ. ಆರೋಗ್ಯ ಹಾಗೂ ಮನಃಶಾಂತಿಗಾಗಿ ಯೋಗ–ಪ್ರಾಣಾಯಾಮ ಥೆರಪಿ ತೆಗೆದುಕೊಂಡೆ. ಸದ್ಯ ಯಾವುದೇ ಸಮಸ್ಯೆ ಇಲ್ಲದೆ ಆರಾಮವಾಗಿದ್ದೇನೆ.

ಕುಂದಾಪುರ ತಾಲ್ಲೂಕು ಕೆದೂರಿನ ಸುಬ್ಬಮ್ಮನಿಗೆ 68 ವರ್ಷ. ಕುಡಿತದ ಅಭ್ಯಾಸ ಮಾಡಿಕೊಂಡದ್ದು ಗಂಡನ ಜೊತೆ ಮೋಜಿಗಾಗಿ. ‘18 ವರ್ಷದ ವಳಿದ್ದಾಗಲೇ ಸಾರಾಯಿ ಕುಡಿಯಲು ಆರಂಭಿಸಿದೆ. ಸ್ವಲ್ಪಸ್ವಲ್ಪ ಕುಡಿಯಲು ಶುರು ಮಾಡಿದ್ದು ಬರಬರುತ್ತಾ ಕ್ವಾರ್ಟರ್ಗಟ್ಟಲೆಗೆ ಏರಿತು. ಹೊಟ್ಟೆಪಾಡಿಗಾಗಿ ಸೂಲಗಿತ್ತಿ ಕೆಲಸ ಮಾಡುತ್ತಿದ್ದೆ. ಸುಮಾರು 40 ವರ್ಷದ ಹಿಂದೆ ಕುಂದಾಪುರದಲ್ಲಿ ಹೆರಿಗೆ ಆಸ್ಪತ್ರೆ ಇರಲಿಲ್ಲ. ಆಗ ಹಳ್ಳಿಹಳ್ಳಿಗೆ ಹೋಗಿ ಹೆರಿಗೆ ಮಾಡಿಸುತ್ತಿದ್ದೆ. ಲೆಕ್ಕವಿಲ್ಲದಷ್ಟು ಮನೆಗಳಲ್ಲಿ ಬಾಣಂತನವನ್ನೂ ಮಾಡಿದ್ದೇನೆ. ಆಗ ಕೈಗೆ ಬರುತ್ತಿದ್ದ ಹಣದಿಂದ ಸುಮಾರು 35 ವರ್ಷ ತಪ್ಪದೇ ಕುಡಿದೆ’.

‘2013ರಲ್ಲಿ ಕುಂದಾಪುರದಲ್ಲಿ ನಡೆದ ಮದ್ಯವ್ಯಸನ ವರ್ಜನ ಶಿಬಿರದಲ್ಲಿ ಭಾಗವಹಿಸಿದೆ. ಬಳಿಕ ಬೆಳ್ತಂಗಡಿ ತಾಲ್ಲೂಕಿನ ಲಾಯಿಲದಲ್ಲಿರುವ ಕೇಂದ್ರದಲ್ಲಿ ಇಪ್ಪತ್ತು ದಿನ ಇದ್ದೆ. ಕುಡಿತ ಮರೆಯಲು ಭಜನೆ, ಧ್ಯಾನ ಮಾಡಿಸುತ್ತಿ
ದ್ದರು. ಕುಡಿಯುವುದನ್ನು ಸಂಪೂರ್ಣವಾಗಿ ತ್ಯಜಿಸುವ ಪಣ ತೊಟ್ಟೆ. ಕುಡಿತ ಬಿಟ್ಟು 12 ವರ್ಷವಾಯಿತು. ಆರಾಮವಾಗಿದ್ದೇನೆ. ‘ಕಾಂತಾರ’ ಸಿನಿಮಾದಲ್ಲಿ ಸಣ್ಣ ಪಾತ್ರವನ್ನೂ ಮಾಡಿದ್ದೇನೆ. ಈಗ ಕಾಂತಾರ– 2ನಲ್ಲೂ ನನ್ನ ಪಾತ್ರ ಇದೆ. ಬದುಕಿಗಾಗಿ ಸರ್ಕಾರದಿಂದ ಪಿಂಚಣಿ ಹಣ ಬರುತ್ತದೆ’.

ಜಾರ್ಖಂಡ್ ಮೂಲದ ಸ್ವಪ್ನಾ ಕಂಪ್ಯೂಟರ್ ಎಂಜಿನಿಯರ್. ಬೆಂಗಳೂರಿನಲ್ಲಿ ಓದಿ ಅಲ್ಲಿಯೇ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿ. ‘ಆಫೀಸಿನಲ್ಲಿ ಕೆಲಸದ ಒತ್ತಡ ಅತಿಯಾದಾಗ ಫ್ರೆಂಡ್ಸೆಲ್ಲ ಆಗಾಗ ಪಾರ್ಟಿ ಶುರುವಿಟ್ಟುಕೊಂಡರು. ಮನಸ್ಸಿನ ರಿಲ್ಯಾಕ್ಸೇಷನ್ಗಾಗಿ ಸ್ವಲ್ಪ ಕುಡಿಯಲು ಆರಂಭಿಸಿದೆ. ಸಹೋದ್ಯೋಗಿಗಳಲ್ಲಿ ಬಹುತೇಕ ಹೆಣ್ಣುಮಕ್ಕಳು ಸಂಜೆ ಪಬ್ಗೆ ಹೋಗುವುದು ಮಾಮೂಲಿಯಾಯಿತು. ಮದ್ಯಸೇವನೆ ಮಿತಿಮೀರಿತು. ಹೀಗಿರುವಾಗ,
ಒಮ್ಮೆ ನನ್ನ ಕ್ಲೋಸ್ ಫ್ರೆಂಡ್ಸೆಲ್ಲ ಸೇರಿ ಗೆಟ್ ಟುಗೆದರ್ ಮಾಡಿದೆವು.
ಎಷ್ಟೋ ವರ್ಷಗಳ ನಂತರ ಸಿಕ್ಕಿದ ಖುಷಿಗೆ ಭರ್ಜರಿ ಎಣ್ಣೆ ಪಾರ್ಟಿಯೇ ನಡೆಯಿತು’.

‘ರಾತ್ರಿ ಬಹಳ ಹೊತ್ತಾದ್ದರಿಂದ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದೆ. ಕ್ಯಾಬ್ ಡ್ರೈವರ್ ಮನೆ ಲೊಕೇಶನ್ಗೆ ಕರೆದೊಯ್ದಾಗ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಆಗ ಡ್ರೈವರ್ ನನ್ನನ್ನು ಅಕ್ಷರಶಃ ಹೊತ್ತುಕೊಂಡೇ ನನ್ನ ಫ್ಲ್ಯಾಟ್ಗೆ ಕರೆದೊಯ್ದರು. ನನ್ನ ಆಗಿನ ಸ್ಥಿತಿಯನ್ನು ಕಂಡು ಅಪ್ಪ– ಅಮ್ಮ ಗಾಬರಿಯಾದರು. ಸುರಕ್ಷಿತವಾಗಿ ನನ್ನನ್ನು ಮನೆಗೆ ತಲುಪಿಸಿದ್ದಕ್ಕಾಗಿ ಡ್ರೈವರ್ಗೆ ಒಂದು ಸಾವಿರ ರೂಪಾಯಿ ಹೆಚ್ಚಿಗೇ ಕೊಟ್ಟು ಕಳಿಸಿದರು. ಮರುದಿನ ಅಪ್ಪ ಇದೆಲ್ಲವನ್ನೂ ಬಹಳ ನೋವಿನಿಂದ ವಿವರಿಸಿದಾಗ ನನಗೆ ತುಂಬಾ ದುಃಖವಾಯಿತು. ಈ ಕೆಲಸವೂ ಬೇಡ, ಕುಡಿತದ ಅಭ್ಯಾಸವೂ ಬೇಡ ಎಂದು ನಿರ್ಧರಿಸಿದೆ. ಕೆಲಸ ಬಿಟ್ಟೆ. ಬದಲಾವಣೆ ಬಯಸಿ ಶಿಮ್ಲಾಕ್ಕೆ ಹೋದೆ. ಅಲ್ಲಿ ಕೆಲ ತಿಂಗಳಿದ್ದು ವಾಪಸ್ ಬಂದೆ. ಈಗ ಆನ್ಲೈನ್ ಮೂಲಕ ಸಣ್ಣ ಉದ್ಯೋಗ ಮಾಡುತ್ತಿದ್ದೇನೆ. ಮುಂದೆ ಎಂದೂ ಮದ್ಯ ಸೇವಿಸಬಾರದೆಂಬ ನಿರ್ಧಾರಕ್ಕೆ ಬಂದಿದ್ದೇನೆ’.

ಇದೆ ಬಗೆಬಗೆ ಥೆರಪಿ

ಮದ್ಯವ್ಯಸನದಿಂದ ಹೊರಬರಲಾಗದವರು ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿ ನಮ್ಮಲ್ಲಿ ಚಿಕಿತ್ಸೆಗೆ ಬರುತ್ತಾರೆ. ಇಲ್ಲಿ ‘ಸೆಂಟರ್ ಫಾರ್ ಅಡಿಕ್ಷನ್ ಮೆಡಿಸಿನ್’ ಘಟಕದ ಹೊರರೋಗಿಗಳ ವಿಭಾಗದಲ್ಲಿ ವಾರದಲ್ಲಿ ಮೂರು ದಿನ ಚಿಕಿತ್ಸೆ ನೀಡಲಾಗುತ್ತದೆ. ಗಂಭೀರವಾದವರಿಗೆ ಒಳರೋಗಿಗಳಾಗಿ ಚಿಕಿತ್ಸೆ ನೀಡುತ್ತೇವೆ. ಡಿ–ಅಡಿಕ್ಷನ್ ಘಟಕದಲ್ಲಿ ಮಹಿಳೆಯರಿಗಾಗಿಯೇ 10 ಹಾಸಿಗೆಗಳ ವ್ಯವಸ್ಥೆ ಇದೆ. ಇಲ್ಲಿ ಥೆರಪಿ, ಕೌನ್ಸೆಲಿಂಗ್, ಮೋಟಿವೇಷನಲ್ ಥೆರಪಿ, ಬ್ರೀಫ್ ಇಂಟರ್ವೆನ್ಶನ್ ಥೆರಪಿ, ಸಪೋರ್ಟ್ ಗ್ರೂಪ್ ಥೆರಪಿ, ಆಕ್ಯುಪೇಷನಲ್ ಥೆರಪಿಯಂತಹ ಚಿಕಿತ್ಸೆಗಳಿವೆ.

ಮಹಿಳೆಯರು ಮದ್ಯಮುಕ್ತರಾದ ಬಗ್ಗೆ ನಿಮ್ಹಾನ್ಸ್ ಒಂದು ಅಧ್ಯಯನ ನಡೆಸಿತ್ತು. ಡಿ– ಅಡಿಕ್ಟ್ ಆದ ನಂತರ ಎರಡು ವರ್ಷದವರೆಗೆ ಅವರನ್ನು ಅಬ್ಸರ್ವೇಷನ್ನಲ್ಲಿ ಇಟ್ಟು ನೋಡಿದಾಗ, ಸಮೀಕ್ಷೆ ನಡೆಸಿದ ಮಹಿಳೆಯರಲ್ಲಿ
ಶೇ 60–80ರಷ್ಟು ಮಂದಿ ಮುಕ್ತರಾಗಿರುವುದು ಗೊತ್ತಾಗಿದೆ. 2019ರಿಂದ 2023ರವರೆಗೆ ನಿಮ್ಹಾನ್ಸ್ನಲ್ಲಿ 938 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದರು. ಚಿಕಿತ್ಸೆ ಬಳಿಕ ಎಷ್ಟೋ ಮಹಿಳೆಯರನ್ನು ಸಂಪರ್ಕಿಸುವುದೇ ಕಷ್ಟವಾಯಿತು. ಸಂಪರ್ಕಕ್ಕೆ ಬಂದ ಸುಮಾರು ಮಂದಿ ತಮಗೆ ನಿದ್ರಾಹೀನತೆಯ ಸಮಸ್ಯೆ ಇದೆ ಎಂದರು. ಇನ್ನು ಕೆಲವರು ಸಂಪೂರ್ಣವಾಗಿ ಮದ್ಯಮುಕ್ತ ಆಗಿರುವುದಾಗಿ ತಿಳಿಸಿದರು. ಮತ್ತೆ ಕೆಲವರು, ಮದ್ಯ ಕುಡಿಯುವುದು ತಮಗಿಷ್ಟವಾದ್ದರಿಂದ ಪುನಃ ಆರಂಭಿಸಿರುವುದಾಗಿ ಹೇಳಿದ್ದು ಕೂಡ ಇದೆ.

ಡಾ. ಶ್ರೀದೇವಿ, ಸಹಾಯಕ ಪ್ರಾಧ್ಯಾಪಕಿ, ನಿಮ್ಹಾನ್ಸ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.