ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World No Tobacco Day: ತಂಬಾಕು ಪರಿಸರಕ್ಕೆ ಹಾನಿಕರ – ಏಕೆ?

Last Updated 31 ಮೇ 2022, 0:30 IST
ಅಕ್ಷರ ಗಾತ್ರ

ಪ್ರಪಂಚದಲ್ಲಿ 11 ಲಕ್ಷ ಜನರು ತಂಬಾಕನ್ನು ಬಳಸುವುದನ್ನು ಕಾಣಬಹುದಾಗಿದೆ. ನಮ್ಮ ದೇಶದಲ್ಲಿ ದಿನಕ್ಕೆ 5,500 ಹದಿಹರೆಯದ ಮಕ್ಕಳು ತಂಬಾಕು ಸೇವನೆಯನ್ನು ಒಂದಲ್ಲಾ ಒಂದು ರೂಪದಲ್ಲಿ ಉಪಯೋಗ ಮಾಡುವುದನ್ನು ಕಲಿಯುತ್ತಿದ್ದಾರೆ. ಇದರಲ್ಲಿ ಶೇ 50 ಮಕ್ಕಳು ತಂಬಾಕು ಸಂಬಂಧಿತ ಕಾಯಿಲೆಗಳಿಂದ ಭವಿಷ್ಯದಲ್ಲಿ ಅಸುನೀಗಲಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 49 ಲಕ್ಷ ಜನ ಒಂದು ವರ್ಷಕ್ಕೆ ತಂಬಾಕು ಸಂಬಂಧಿತ ಕಾಯಿಲೆಗಳಿಂದ ಅಸುನೀಗುತ್ತಿದ್ದಾರೆ.

ತಂಬಾಕುವನ್ನು ನಮ್ಮ ದೇಶದಲ್ಲಿ ಅನೇಕ ರೀತಿಯಲ್ಲಿ ಬಳಸುವುದನ್ನು ಕಾಣುತ್ತೇವೆ. ಬೀಡಿ, ಸಿಗರೇಟು, ಹುಕ್ಕಾ ಹೊಗೆಯನ್ನು ಹೊರಹಾಕಬಲ್ಲದ್ದಾಗಿದ್ದು ಪಾನ್ ಮಸಾಲ, ಗುಟ್ಕಾ, ಮಾವ, ಕೈನಿ, ಮಿಶ್ರಿಯಂತಹ ರೂಪದಲ್ಲೂ ಸಹ ಬಳಸುವುದನ್ನು ಕಾಣುತ್ತೇವೆ. ಇದರಲ್ಲಿನ ನಿಕೋಟಿನ್ ಅಂಶವು ಕ್ಯಾನ್ಸರ್ ಕಾರಕವಾಗಿದ್ದು ವ್ಯಕ್ತಿಯನ್ನು ವ್ಯಸನಿಯನ್ನಾಗಿ ಸಹ ಮಾಡುತ್ತದೆ. ದೇಹವನ್ನು ನೇರವಾಗಿ ಹಾನಿಗೆ ಒಳಪಡಿಸುವುದಲ್ಲದೆ ವಾತಾವರಣವನ್ನು ಸಹ ಕಲುಷಿತ ಮಾಡಬಹುದಾಗಿದೆ. ತಂಬಾಕು ಬೆಳೆಯುವುದರಿಂದ ಭೂಮಿಯಲ್ಲಿನ ಸಾರವು ಕೂಡ ಕಡಿಮೆಯಾಗಬಹುದಾಗಿದ್ದು ಈ ಬೆಳೆಯನ್ನು ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆಯಿದ್ದು ನೀರನ್ನು ಸಹ ಕಲುಷಿತ ಮಾಡಬಹುದಾಗಿದೆ. ತಂಬಾಕುವಿನಿಂದ ಹೊರಹೊಮ್ಮುವ ಹೊಗೆ ಹಾಗೂ ಅದರ ಉತ್ಪಾದನೆಯ ಕ್ರಿಯೆಯಲ್ಲಿ 84 ಮೆಗಾಟನ್ ಇಂಗಾಲ ಡೈ ಆಕ್ಸೈಡ್‌ ಉತ್ಪಾದನೆಯಿಂದ ಪರಿಸರ ವ್ಯವಸ್ಥೆಯನ್ನು ಹಾಳುಮಾಡಬಹುದಾಗಿದೆ.

ತಂಬಾಕು ಬೆಳೆಯುವುದು ಹಾಗೂ ಉಪಯೋಗ ಎರಡೂ ಸಹ ಸಮಾಜಕ್ಕೆ ಹಾನಿಕರವಾಗಿ ಪರಿಣಮಿಸಬಲ್ಲದ್ದಾಗಿದೆ. ಕಾನೂನಿನ ರೀತಿಯಲ್ಲಿ ಅನೇಕ ಸುಧಾರಣೆಗಳನ್ನು ತಂದರೂ ಸಹ ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಂಡುಬರುತ್ತಿಲ್ಲ. ಸಾಮಾಜಿಕ ಸ್ಥಳಗಳಲ್ಲಿ, ಶೈಕ್ಷಣಿಕ ಸಂಸ್ಥೆಯ ಬಳಿ, ತಂಬಾಕು ಮಾರಾಟ ಹಾಗೂ ಉಪಯೋಗವನ್ನು ಸರ್ಕಾರ ನಿಷೇಧಿಸಿದೆ. ತಂಬಾಕು ಸಂಬಂಧಿತ ಜಾಹೀರಾತುಗಳನ್ನು ಸಹ ನಿಷೇಧಿಸಿದೆ. ತಂಬಾಕು ಉತ್ಪನ್ನಗಳ ಮೇಲೆ ಇದರ ಉಪಯೋಗದಿಂದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೋಡಬಹುದಾಗಿದೆ. ಸಾಮಾಜಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಿದೆ ಎಂಬ ಫಲಕಗಳನ್ನು ಕಡ್ಡಾಯ ಮಾಡಿರುವುದಲ್ಲದೆ ಜುಲ್ಮಾನೆಯನ್ನು ಸಹ ವಿಧಿಸಲಾಗುತ್ತದೆ.

ತಂಬಾಕು ಸೇವನೆಯಿಂದ ಹಾಗೂ ಬೆಳೆಯುವುದರಿಂದ ಸಮಾಜಕ್ಕೆ ಒಳಿತಿಗಿಂತ ಹಾನಿಕಾರಕ ಎಂಬುದನ್ನು ಮನಗೊಳ್ಳಬೇಕಾಗಿದೆ. ಈಗಾಗಲೇ ತಂಬಾಕುವಿನ ಚಟಕ್ಕೆ ಬಿದ್ದಿರುವವರು ತಂಬಾಕುವನ್ನು ತ್ಯಜಿಸುವುದರಿಂದಾಗುವ ಉಪಯೋಗಗಳನ್ನು ಮನಗೊಳ್ಳಬೇಕಾಗಿದೆ.

ತಂಬಾಕು ಸೇವನೆಯನ್ನು ತ್ಯಜಿಸಿದ 20 ನಿಮಿಷಗಳಲ್ಲಿ ರಕ್ತದೊತ್ತಡ ಹಾಗೂ ಹೃದಯ ಬಡಿತ ಸಾಧಾರಣ ಸ್ಥಿತಿಗೆ ಬರುತ್ತದೆ.

ತಂಬಾಕು ತ್ಯಜಿಸಿದ 12 ಗಂಟೆಗಳಲ್ಲಿ ರಕ್ತದಲ್ಲಿನ ಕಾರ್ಬನ್ ಮಾನಾಕೈಡ್ ಅಂಶವು ಕಡಿಮೆಯಾಗಬಹುದಾಗಿದೆ. ತಂಬಾಕು ತ್ಯಜಿಸಿದ 2 ವಾರದಿಂದ ಮೂರು ತಿಂಗಳ ಒಳಗಾಗಿ ಶರೀರದ ರಕ್ತ ಸಂಚಲನೆ ವೃದ್ಧಿಸಿ ಶ್ವಾಸಕೋಶದ ಕಾರ್ಯವೈಖರಿ ಹೆಚ್ಚಾಗಬಹುದಾಗಿದೆ. ತಂಬಾಕು ತ್ಯಜಿಸಿದ 1-9 ತಿಂಗಳಲ್ಲಿ ಕೆಮ್ಮು, ಉಸಿರಾಟದ ತೊಂದರೆ, ದಮ್ಮು, ಶ್ವಾಸಕೋಶದ ಸೋಂಕು ಕಡಿಮೆಯಾಗಬಹುದಾಗಿದೆ.

ತಂಬಾಕು ತ್ಯಜಿಸಿದ ಒಂದು ವರ್ಷದಲ್ಲಿ ಹೃದಯ ಸಂಬಂಧಿ ರೋಗಗಳಿಗೆ ಬಲಿಯಾಗುವ ಹಾಗೂ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ತಂಬಾಕು ತ್ಯಜಿಸಿದ 5 ವರ್ಷಗಳಲ್ಲಿ ಬಾಯಿ, ಅನನ್ನಾಳದ ಕ್ಯಾನ್ಸರ್‌ಗೆ ಬಲಿಯಾಗುವುದನ್ನು ಶೇ 50 ಕಡಿಮೆಯಾಗಬಹುದಾಗಿದೆ. ತಂಬಾಕು ತ್ಯಜಿಸಿದ 15 ವರ್ಷಗಳಲ್ಲಿ ನಿಮ್ಮ ಶ್ವಾಸಕೋಶವು ಸಾಮಾನ್ಯ ಮನುಷ್ಯನ ಅಂದರೆ ತಂಬಾಕು ಸೇವನೆಯ ಚಟವಿಲ್ಲದ ಹೃದಯ ಹಾಗೂ ಶ್ವಾಸಕೋಶದಂತೆ ಆರೋಗ್ಯಕರವಾಗಿರಬಹುದಾಗಿದೆ.

ಇದಲ್ಲದೆ ಧೂಮಪಾನದಿಂದ ದೂರ ಉಳಿದರೆ ರಕ್ತ ಹೆಪ್ಪುಗಟ್ಟಿ ಹೃದಯಘಾತವಾಗುವ ಸಂಭವ, ಸಂತಾನಹೀನತೆ, ಬಾಯಿಯ ಹಾಗೂ ಚರ್ಮ ಸಮಸ್ಯೆಗಳಿಂದ ಸಹ ದೂರ ಉಳಿಯಬಹುದಾಗಿದೆ.

– ಲೇಖಕರು ಓರಲ್ ಮೆಡಿಸನ್ ಹಾಗೂ ರೆಡಿಯಾಲಜಿ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT