ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ಏನಿದು ಟೊಮ್ಯಾಟೊ ಫ್ಲೂ: ಮಕ್ಕಳ ಕಾಡುವ ಕಾಯಿಲೆ ಬಗ್ಗೆ ಇರಲಿ ಎಚ್ಚರ

Last Updated 15 ಮೇ 2022, 11:23 IST
ಅಕ್ಷರ ಗಾತ್ರ

ಕೋವಿಡ್-19ನ ಮೂರು ಅಲೆಗಳಿಂದ ತತ್ತರಿಸಿರುವ ಜನರನ್ನು ಮತ್ತೊಂದು ವೈರಾಣುವಿನ ಸೋಂಕು ಅಲುಗಾಡಿಸುವ ಮುನ್ಸೂಚನೆ ಸಿಗುತ್ತಿದೆ. ಕೇರಳಾದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ‘ಟೊಮ್ಯಾಟೊ ಫ್ಲೂ’ ಸೋಂಕು ಇತರೆ ರಾಜ್ಯಗಳಿಗೂ ಹರಡಬಹುದಾಗಿದ್ದು, ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಈ ಸೋಂಕಿನ ರೋಗ ಲಕ್ಷಣಗಳೇನು ?

– ತೀವ್ರತರವಾದ ಜ್ವರ, ಮೈಕೈ ನೋವು, ಸುಸ್ತು, ಮೂಳೆಯ ಕೀಲುಗಳಲ್ಲಿ ಊತ, ವಾಂತಿ, ಹೊಟ್ಟೆನೋವು, ಕೆಮ್ಮು, ಸೀನು, ಮೂಗು ಸೋರುವುದು ಮುಂತಾದವು.

– ಚರ್ಮದ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಳ್ಳಬಹುದಾಗಿದ್ದು, ಟೊಮ್ಯಾಟೊ ಹಣ್ಣಿನಂತೆ ಕೆಂಪಾಗಿರುವುದರಿಂದ ಇದಕ್ಕೆ ‘ಟೊಮ್ಯಾಟೊ ಫ್ಲೂ’ ಎಂದು ಕರೆಯಲಾಗುತ್ತದೆ.

– ಇದು ಐದು ವರ್ಷದ ಕೆಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

– ಚರ್ಮದ ದದ್ದುಗಳು ನೀರು ತುಂಬಿದ ಗುಳ್ಳೆಗಳಾಗಿ ಪರಿಣಮಿಸಬಹುದಾಗಿದ್ದು, ತುರಿಕೆಯಿಂದ ಕೂಡಿರುತ್ತದೆ.

– ಇದರ ಬಹುಪಾಲು ರೋಗಲಕ್ಷಣಗಳು ಚಿಕುನ್‌ ಗುನ್ಯಾ ಸೋಂಕನ್ನು ಹೋಲುತ್ತದೆ ಎಂದು ಹೇಳಬಹುದು.

– ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದಾಗಿದ್ದು ಎಚ್ಚರಿಕೆ ವಹಿಸುವುದು ಸೂಕ್ತ.

ಈ ಸೋಂಕಿನ ಚಿಕಿತ್ಸೆಗಳೇನು ?

– ಈ ಸೋಂಕಿನಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗುವುದರಿಂದ ಶರೀರದಲ್ಲಿನ ನೀರಿನಾಂಶವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗುತ್ತದೆ.

– ಈ ರೋಗಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ರೋಗ ಲಕ್ಷಣಗಳಿಗೆ ಅನುಗುಣವಾಗಿ ಜ್ವರ, ಕೆಮ್ಮು, ಮೈಕೈ ನೋವಿಗೆ ಚಿಕಿತ್ಸೆ ನೀಡಲಾಗುತ್ತದೆ.

ಸಾಮಾನ್ಯ ಜನರು ಏನು ಮಾಡಬಹುದು?

– ಸ್ವಚ್ಛತೆಯನ್ನು ಕಾಪಾಡುವುದು ಮುಖ್ಯವಾಗುತ್ತದೆ. ಗುಳ್ಳೆಗಳು ತುರಿಕೆಯಿಂದ ಕೂಡಿರುತ್ತದ. ಹಾಗೆಂದು, ಅವುಗಳನ್ನು ಕೆರೆಯುವುದರಿಂದ ರೋಗವು ಉಲ್ಭಣಿಸಿ ಪರಿಸ್ಥಿತಿ ಹದಗೆಡುತ್ತದೆ... ಎಚ್ಚರ.

– ರೋಗಿಯ ಶುಶ್ರೂಷೆಯಲ್ಲಿರುವ ವ್ಯಕ್ತಿಗಳು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ.

– ಬೇಸಿಗೆಯ ಸಮಯವಾಗಿರುವುದರಿಂದ ಶರೀರದ ನೀರಿನಾಂಶವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ.

– ಹೆಚ್ಚಿನ ಪ್ರಮಾಣದ ನೀರು ಹಾಗೂ ನೀರಿನಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ.

– ವೈರಾಣುವಿನ ಸೋಂಕುಗಳಲ್ಲಿ ವಿಶ್ರಾಂತಿ ಅತಿ ಮುಖ್ಯವಾಗುತ್ತದೆ. ಜ್ವರದ ಮುನ್ಸೂಚನೆ ಮಗುವಿನಲ್ಲಿ ಕಂಡೊಡನೆ ವೈದ್ಯರ ಸಮಾಲೋಚನೆಯನ್ನು ಪಡೆಯಬೇಕು.

ವೈದ್ಯರ ಸಮಾಲೋಚನೆ ಯಾವಾಗ ಅಗತ್ಯವಿರುತ್ತದೆ?

– ಹೊರದೇಶಗಳಿಗೆ ಪ್ರಯಾಣ ಬೆಳೆಸುವ ಮುನ್ನ ವೈದ್ಯರನ್ನು ಸಮಾಲೋಚಿಸಿ ಅವಶ್ಯಕವಿರುವ ಲಸಿಕೆಗಳನ್ನು ಪಡೆಯಿರಿ.

– ಮೇಲ್ಕಂಡ ರೋಗ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ.

– ಲೇಖಕರು ಓರಲ್ ಮೆಡಿಸನ್ ಹಾಗೂ ರೆಡಿಯಾಲಜಿ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT