ಉಫ್... ಮಳೆಗಾಲ ಬಂತು ಎಂದು ನಿಟ್ಟುಸಿರು ಬಿಡುವುದು ಸಾಮಾನ್ಯ. ಆದರೆ ಮಳೆಗಾಲ ಬಂದೊಡನೆ ಕಾಳಜಿ ಮಾಡಬೇಕಾಗಿರುವ ಅಗತ್ಯದ ಕೆಲಸಗಳ ಸಾಲು ಹೆಚ್ಚುತ್ತದೆ. ಮನೆ ರಿಪೇರಿ, ಗಾಡಿ ಸರ್ವಿಸಿಂಗ್ ಇವಕ್ಕೆಲ್ಲ ಗಮನ ನೀಡುತ್ತೇವೆ. ಆದರೆ ನಮ್ಮ ದೇಹ? ಕೂದಲು, ಚರ್ಮ? ಈ ಬಗ್ಗೆ ಒಂದು ಸಣ್ಣ ನಿರ್ಲಕ್ಷ್ಯವೇ ಇರುತ್ತದೆ.

ಬೇಸಿಗೆಯಲ್ಲಿ ಕೇವಲ ಬೆವರಿನ ಸಮಸ್ಯೆ ಇರುತ್ತದೆ. ಮಳೆಗಾಲದಲ್ಲಿ ತಾಪಮಾನ ಮತ್ತು ವಾತಾವರಣದಲ್ಲಿಯ ಅತಿಯಾದ ಮಾಯಿಶ್ಚರೈಸರ್‌ನಿಂದಾಗಿ ಹಲವಾರು ಸಮಸ್ಯೆಗಳು ತಲೆದೋರುತ್ತವೆ.

ತಲೆಯದ್ದೇ ಒಂದು ಸಮಸ್ಯೆ. ಮಳೆಯಲ್ಲಿ ನೆನೆದರಂತೂ ಕೂದಲು ಜಿಗುಟಾಗಿ, ಕೆರೆತ, ಹೊಟ್ಟು ಎಲ್ಲವೂ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಸಹಜವಾಗಿ ಕೂದಲು ಒಣಗಿಸಲಾಗದು. ಗಾಳಿಯಲ್ಲಿಯೂ ತೇವಾಂಶ ಇರುವುದರಿಂದ ಸಹಜವಾಗಿಯೇ ಕೂದಲಿನಲ್ಲಿ ನೀರು ಇಳಿಯುತ್ತದೆ. ಇದರ ಪರಿಣಾಮ ಕೂದಲು ಜಿಡ್ಡಾಗುತ್ತವೆ.

ಇದಲ್ಲದೆ, ಮಳೆಗಾಲವೆಂದು ನೀರು ಶುದ್ಧೀಕರಿಸಲು ಕ್ಲೋರಿನ್ ಮುಂತಾದ ರಾಸಾಯನಿಕಗಳನ್ನು ಸುರಿಯಲಾಗಿರುತ್ತದೆ. ಅವು ಬ್ಯಾಕ್ಟೇರಿಯಾಗಳನ್ನು ಕೊಲ್ಲುವುದೇನೋ ನಿಜ. ಆದರೆ ನಮ್ಮ ಕೂದಲಿನ ಬುಡವನ್ನು ನಿಶ್ಯಕ್ತಗೊಳಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಕ್ಲೋರಿನ್‌ನಿಂದಾಗಿ ಚರ್ಮ ಒಣಗುತ್ತದೆ. ಕೆರೆತ ಉಂಟಾಗುತ್ತದೆ. ಕೆಲವೊಮ್ಮೆ ಕೂದಲು ತುಂಡರಿಸಬಹುದು.

ಮಳೆಯಲ್ಲಿ ಸಿಲುಕಿಕೊಂಡು ತಲೆ ತೊಯ್ದು ಹೋದರೆ, ಮನೆಗೆ ಹೋದೊಡನೆ ತಲೆಸ್ನಾನ ಮಾಡುವುದು ಒಳಿತು. ಮಳೆನೀರಿನೊಂದಿಗೆ ವಾತಾವರಣದಲ್ಲಿರುವ ಮಾಲಿನ್ಯವೂ ಸೇರಿ, ಕೂದಲಿಗೆ ಹಾನಿಯಾಗುತ್ತವೆ. ಕೂದಲುದುರುವುದು, ತುಂಡರಿಸುವುದು, ಗಂಟುಗಂಟಾಗುವುದು ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ.

ಮಳೆಗಾಲ ಕಳೆಯುವವರೆಗೂ ಹೊಟ್ಟು ನಿವಾರಣೆಯ ಅಂಶವುಳ್ಳು ಶಾಂಪೂವನ್ನು ನಿಗದಿತವಾಗಿ ಬಳಸುವುದು ಒಳಿತು.
ಮಳೆಗಾಲದಲ್ಲಿ ಕೂದಲನ್ನು ನೇರಗೊಳಿಸುವುದು, ಇಲ್ಲವೇ ಗುಂಗುರುಗೊಳಿಸುವುದು ಹಾಗೂ ಬಣ್ಣ ಹಾಕುವುದು ಮುಂತಾದ ಚಿಕಿತ್ಸೆಗಳನ್ನು ಮುಂದೂಡಿದರೆ ಒಳಿತು.

ಈ ಚಿಕಿತ್ಸೆಗಳನ್ನು ಮಳೆಗಾಲದಲ್ಲಿ ಮಾಡಿಸುವುದರಿಂದ ಕೂದಲು ಒಣಗಿಸುವ ಸಮಸ್ಯೆಯೂ ಇರುತ್ತದೆ. ಜೊತೆಗೆ ಉಷ್ಣ ಕಾರಕಗಳನ್ನು ಬಳಸಿ ಚಿಕಿತ್ಸೆ ನೀಡುವುದರಿಂದ ಕೂದಲು ಹಾನಿಗೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಚಿಕಿತ್ಸೆಯಿಂದಾಗಿ ಕೂದಲು ಸೀಳುವುದು, ತುಂಡರಿಸುವುದು, ಬಲಹೀನವಾಗುವುದು. ದಟ್ಟ ಕೂದಲಿನ ಸಾಂದ್ರತೆ ಕಡಿಮೆಯಾಗಬಹುದು.

ಇದೇ ಕಾರಣದಿಂದಾಗಿ ಮಳೆಗಾಲದಲ್ಲಿ ಕೂದಲು ಕಾಂತಿಹೀನವಾಗಿ, ಬಲಹೀನವಾಗಿ, ಸೀಳುಗಳಿಂದ ಕೂಡಿದಂತೆ ಕಾಣುತ್ತವೆ. ಸಾಲದ್ದಕ್ಕೆ ತಲೆ ಹೊಟ್ಟಿನ ಸಮಸ್ಯೆ, ಕೆರೆತದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳ ಬಗ್ಗೆ ಮುಂದಿನ ವಾರ ಚರ್ಚಿಸಲಾಗುವುದು.

(ಮಾಹಿತಿಗೆ: 7676757575)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.