ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ ಸೋರಿಯಾಸಿಸ್ ಬಹಳ ಮುಖ್ಯವಾದದ್ದು. ಈ ರೋಗವು ಚರ್ಮವನ್ನು ವಿರೂಪಗೊಳಿಸುತ್ತವೆ, ರೋಗಿ ಖಿನ್ನತೆಗೂ ಒಳಗಾಗುತ್ತಾನೆ. ಸೋರಿಯಾಸಿಸ್ ಅಂಟುರೋಗ ಅಥವಾ ಅನುವಂಶಿಕವಾಗಿ ಬರುವ ರೋಗವಲ್ಲ. ಈ ರೋಗವು ಶೇಕಡ ೨-೩% ಜನಸಂಖ್ಯೆಯಲ್ಲಿ ಕಂಡು ಬಂದಿದ್ದು ೨೦ ವರ್ಷಪ್ರಾಯದವರಲ್ಲಿ ಕಂಡುಬರುತ್ತದೆ.

ಸೋರಿಯಾಸಿಸ್ ರೋಗದಲ್ಲಿ ಹಲವು ಪ್ರಕಾರಗಳಿದ್ದು, ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಈ ರೋಗದಲ್ಲಿ ಚರ್ಮ ಕಣಗಳ ಉತ್ಪತ್ತಿ ವೇಗವು ಹೆಚ್ಚಾಗಿ ಚರ್ಮವು ಕೆಂಪಾಗಿ, ಒಣಗಿದಂತಾಗಿ ಅತಿಯಾದ ತುರಿಕೆಯೊಂದಿಗೆ ಚರ್ಮದ ಮೇಲ್ಭಾಗದಲ್ಲಿ ಹೊಟ್ಟಿನಂತಹ ಪದರ ಉಂಟಾಗುತ್ತದೆ. ಕೆಲವೊಮ್ಮೆ ಅತಿಯಾಗಿ ಕೆರೆದುಕೊಂಡಾಗ ರಕ್ತ ಬರುವ ಸಾಧ್ಯತೆ ಇದೆ. ಚಿಕಿತ್ಸೆ ಪಡೆಯದೆ ಇದ್ದಲ್ಲಿ ಬಹಳ ಸಮಯದ ನಂತರ ಉಗುರುಗಳನ್ನು ಹಾನಿಮಾಡಿ ಸೋರಿಯಾಟಿಕ್ ಆರ್ಥರೈಟಿಸ್ ಗೆ ಒಳಪಡಿಸುತ್ತದೆ.

ಕಾರಣ:- ಸೋರಿಯಾಸಿಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣ ತಿಳಿದುಬಂದಿಲ್ಲ. ಆದರು ಹಲವಾರು ಕಾರಣಗಳಿಂದ ರೋಗ ಲಕ್ಷಣವು ಉಲ್ಬಣಿಸುತ್ತದೆ. ಆಹಾರ ಪದ್ಧತಿ ಹಾಗೂ ಸೇವಿಸುವ ಕ್ರಮ ಈ ರೋಗದಲ್ಲಿ ಪ್ರಾಮುಖ್ಯತೆ ವಹಿಸುತ್ತದೆ. ಅತಿಯಾದ ಮಾಂಸಾಹಾರ ಸೇವನೆ, ನಂಜಿನ ಪದಾರ್ಥಗಳಾದ ಬದನೆಕಾಯಿ, ಮೂಲಂಗಿ, ಮೀನು, ಮೊಟ್ಟೆ, ಹುಳಿ, ಹುರುಳಿ ಕಾಳು, ಕಫ ವೃದ್ಧಿಸುವ ಪದಾರ್ಥಗಳಾದ ಮೊಸರು, ಉದ್ದು, ವಿರುದ್ಧ ಆಹಾರ - ಉದಾ- ಮೊಸರಿನೊಟ್ಟಿಗೆ ಮೀನಿನ ಸೇವನೆ, ಜಿಡ್ಡಿನ ಪದಾರ್ಥ, ಮಾನಸಿಕ ಒತ್ತಡ, ದೇಹವನ್ನು ಅತಿಯಾಗಿ ಬಿಸಿಲಿಗೆ ಒಡ್ಡುವುದು ಪ್ರಮುಖ ಕಾರಣಗಳು.

ಆಹಾರ ಪದಾರ್ಥಗಳಾದ ಗೋಧಿ, ಹೆಸರುಕಾಳು. ಅರಿಶಿಣ, ಪಡವಲೆಕಾಯಿ, ಬೇವು, ಒಂದೆಲಗ, ಬೆಳ್ಳುಳ್ಳಿ ಸೇವನೆ, ಸಮಯಕ್ಕೆ ತಕ್ಕ ಹಿತಕರ ಆಹಾರ ಸೇವನೆ, ನಿತ್ಯ ಆಭ್ಯಂಜನ ಹಾಗೂ ನಿತ್ಯ ಸ್ನಾನದಿಂದ ಈ ಚರ್ಮರೋಗವನ್ನು ತಡೆಗಟ್ಟಬಹುದು. ದೀರ್ಘಕಾಲಿಕವಾಗಿ ಮತ್ತೆ ಮತ್ತೆ ಕಾಡುವ ಈ ರೋಗಕ್ಕೆ ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದ್ದು, ರೋಗದ ಪ್ರಾರಂಭಿಕ ಅವಸ್ಥೆಯಲ್ಲೆ ಚಿಕಿತ್ಸೆ ಪಡೆಯುವುದು ಉತ್ತಮ. ಆಯುರ್ವೇದದಲ್ಲಿ ಯಾವುದೇ ಅಡ್ಡಪರಿಣಾಮವಿಲ್ಲದೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದ್ದು ವಿಶೇಷವಾಗಿ ಪಂಚಕರ್ಮ ಚಿಕಿತ್ಸೆ, ವ್ಯಾಧಿನಿರೋಧಕ ಶಕ್ತಿಯನ್ನು ವೃದ್ಧಿಸುವ ರಸಾಯನ ಚಿಕಿತ್ಸೆ ಹಾಗೂ ಪಥ್ಯ ಆಹಾರಗಳ ಸೇವನೆಯೊಂದಿಗೆ ರೋಗಿಯು ಉತ್ತಮ ಚಿಕಿತ್ಸಾ ಫಲವನ್ನು ಪಡೆಯುವುದಲ್ಲದೆ ರೋಗದ ಪುನರುತ್ಪತ್ತಿಯನ್ನು ತಡೆಗಟ್ಟಬಹುದು.

(ಮೊಬೈಲ್ : ೯೯೬೪೦೨೨೬೫೪, ೦೮೦-೨೩೪೯೯೯೯೧)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.