ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಅನ್ಯರ ಭಾವನೆಗಳಿಗೆ ಬೆಲೆ ಕೊಡುವ ಗುಣವನ್ನು ಅಭ್ಯಾಸ ಮಾಡಿಕೊಳ್ಳಿ
Published 3 ಆಗಸ್ಟ್ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿರಂಗದಲ್ಲಿ ಅನವಶ್ಯಕವಾಗಿ ಇತರರ ಕೋಪಕ್ಕೆ ಗುರಿಯಾಗುವುದನ್ನು ನಿಮ್ಮ ಸ್ನೇಹಿತರು ಅಥವಾ ಸಹೋದ್ಯೋಗಿಗಳು ತಪ್ಪಿಸುವರು. ಪೂರ್ವ ನಿಯಾಮಕವಾಗಿ ಕೆಲಸ ಮಾಡುವುದು ಬಹಳ ಮುಖ್ಯವಾಗಿದೆ.
ವೃಷಭ
ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲ್ಯಗಳನ್ನು ಹೊರ ತೆಗೆಯಲು ಶಿಕ್ಷಕಿಯೊಬ್ಬರು ಸಹಾಯ ಮಾಡುವರು. ಅನ್ಯರ ಭಾವನೆಗಳಿಗೆ ಬೆಲೆಯನ್ನು ಕೊಡುವ ಗುಣವನ್ನು ಅಭ್ಯಾಸ ಮಾಡಿಕೊಳ್ಳಿ.
ಮಿಥುನ
ರಫ್ತು ವ್ಯಾಪಾರಗಳಲ್ಲಿ ತಲೆ ತಗ್ಗಿಸುವ ಪರಿಸ್ಥಿತಿ ಬಾರದೇ ಇರುವ ರೀತಿಯಲ್ಲಿ ವ್ಯವಹರಿಸಿ. ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಆಗಬಹುದು. ಸಾಹಿತ್ಯ ವಿದ್ವಾಂಸರು ಅನವಶ್ಯಕ ಮಾತುಗಳಿಂದ ದೂರವಿರುವುದು ಒಳಿತು.
ಕರ್ಕಾಟಕ
ವಿನೂತನ ಕೆಲಸವನ್ನು ಸ್ಟಾರ್ಟ್‌ಅಪ್‌ ರೀತಿಯಲ್ಲಿ ಪ್ರಾರಂಭಿಸಲು ಸ್ನೇಹಿತರು ಒತ್ತಾಯಿಸುತ್ತಾರೆ. ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡಿ. ರಾಜಕೀಯದಲ್ಲಿ ಜಯವನ್ನು ಸಾಧಿಸುವಿರಿ.
ಸಿಂಹ
ಅರ್ಚಕ, ವೈದಿಕ ವೃತ್ತಿಯವರಿಗೆ ಕಾರ್ಯದೊತ್ತಡ ಅಧಿಕವಾಗಿದ್ದರೂ, ಸರಿಸಮಾನವಾದ ಗೌರವಧನಕ್ಕೆ ಕೊರತೆ ಕಾಣುವುದಿಲ್ಲ. ಕೆಲಸಗಳು ಎಷ್ಟೇ ಕಷ್ಟವಾದರೂ, ಸ್ವತಃ ನೀವೇ ಸೋಲನ್ನು ಘೋಷಿಸಿಕೊಳ್ಳಬೇಡಿ.
ಕನ್ಯಾ
ನೂತನ ಗೃಹ ನಿರ್ಮಾಣ ಮಾಡುವ ಆಲೋಚನೆಯು ಕುಟುಂಬದ ಸದಸ್ಯರ ಸಂತಸಕ್ಕೆ ಕಾರಣವಾಗುತ್ತದೆ. ಆದರೆ ಅದಕ್ಕಾಗಿ ವಿವಿಧ ರೀತಿಯ ವೈಯಕ್ತಿಕ ಖರ್ಚುಗಳನ್ನೆಲ್ಲಾ ನಿಲ್ಲಿಸಬೇಕಾದಂತಹ ಪರಿಸ್ಥಿತಿ ಎದುರಿಸುವಿರಿ.
ತುಲಾ
ಕೌಟುಂಬಿಕವಾದ ವಿವಾದಗಳು ರಾಜೀ ಮನೋಭಾವಗಳಿಂದ ಸಮಾಪ್ತಿ ಹೊಂದಿಯಾವು. ದೂರದ ಪ್ರಯಾಣಗಳು ಅನುಕೂಲಕರವಾಗಿರುವುದು. ಮಕ್ಕಳ ತೀರ್ಮಾನ ಬಹುಮಟ್ಟಿಗೆ ಸರಿಯಾಗಿರುವುದು.
ವೃಶ್ಚಿಕ
ದೂರದ ಪ್ರಯಾಣದಲ್ಲಿ ಇದ್ದರೂ ಮಗಳ ಜವಾಬ್ದಾರಿಯುತ ನಡೆಯಿಂದಾಗಿ ಮನೆ ಮತ್ತು ಕುಟುಂಬದ ಚಿಂತೆ ಅಷ್ಟಾಗಿ ಕಾಡುವುದಿಲ್ಲ. ಮಾರುಕಟ್ಟೆಯ ಬದಲಾವಣೆ ಅನುಕೂಲಕ್ಕೆ ತಕ್ಕಂತೆ ಇರುವುದು.
ಧನು
ನಾಯಕರಾಗಿ ನೀವು ನೀಡುವ ಸಲಹೆ ಸೂಚನೆಯಂತೆಯೇ ನಡೆದುಕೊಳ್ಳಲು ಸಹೋದ್ಯೋಗಿಗಳಿಗೆ ತಿಳಿಸಿ. ತೈಲ ಲೇಪನ, ಅಭ್ಯಂಗದಂತಹ ವಿಧಿಯ ಆಚರಣೆಯಿಂದ ಆರೋಗ್ಯ ಉತ್ತಮಗೊಳ್ಳುವುದು.
ಮಕರ
ಒಂದು ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಮಾಡಿದ ತಪ್ಪಿನಿಂದಾಗಿ ನಷ್ಟವನ್ನು ಅನುಭವಿಸಬೇಕಾಗುವುದು. ವದಂತಿಗಳಿಗೆ ಕಿವಿಗೊಡದೆ ನಿಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗಿ.
ಕುಂಭ
ಕೌಟುಂಬಿಕವಾಗಿ ನೆಡೆದುಕೊಂಡು ಬಂದಂತಹ ದೇವತಾ ಅಥವಾ ದೈವ ಕಾರ್ಯವನ್ನು ಹಮ್ಮಿಕೊಳ್ಳುವ ತೀರ್ಮಾನ ಆಗುವುದು. ಮುಕ್ತಾಯ ಹಂತದ ಯೋಜನೆಗಳು ನಿಮ್ಮ ಗಡಿಬಿಡಿಯಿಂದಾಗಿ ವ್ಯತ್ಯಾಸವಾಗಬಹುದು.
ಮೀನ
ನೀವು ಧರ್ಮ-ಕರ್ಮಗಳಲ್ಲಿ ಆಸಕ್ತಿ ತೋರಿದರೆ, ಕಾರ್ಯ ಕ್ಷೇತ್ರ ಹಾಗೂ ಜೀವನದಲ್ಲಿ ಅಭೀಷ್ಟ ಪಡೆಯಬಹುದು. ಹಿಂದೆ ನೀವು ಇತರರಿಗೆ ಕೊಟ್ಟ ಹಣ ಇಂದು ಹಿಂದಿರುಗಿ ಬರುವ ಸೂಚನೆ ಇದೆ. ಹಣದ ದುಂದುವೆಚ್ಚವನ್ನು ನಿಲ್ಲಿಸಿ.