ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೌಜನ್ಯ, ಸರಳತೆಯಿಂದ ಹುದ್ದೆಗೆ ಮೆರುಗು
Published 3 ಜನವರಿ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜವಾಬ್ದಾರಿಯನ್ನು ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ. ಪ್ರಭಾವಿ ವ್ಯಕ್ತಿಗಳ ಜತೆಗಿನ ಒಡನಾಟ ಮತ್ತು ಓಡಾಟ ಹೆಚ್ಚಿನ ಸ್ಥಾನಮಾನ ತಂದು ಕೊಡಲಿದೆ.
ವೃಷಭ
ಈ ದಿನ ಎಂಥ ಅನಿವಾರ್ಯ ಪರಿಸ್ಥಿತಿಗೂ ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ. ನಿಮ್ಮ ಕೆಲಸಕ್ಕೆ ಸೋಮಾರಿತನ ಅಥವಾ ಸಮಯದ ಅಭಾವ ಎದುರಾಗುತ್ತದೆ.
ಮಿಥುನ
ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕಾಗುವುದು. ಧೈರ್ಯಮಾಡಿ ಕಾರ್ಯೋನ್ಮುಖರಾದರೆ ಅಭಿವೃದ್ಧಿ ಹೊಂದುವಿರಿ. ಪ್ರಯತ್ನಕ್ಕಿಂತ ಮಿಗಿಲಾದ ಧನಾದಾಯ ಇರಲಿದೆ.
ಕರ್ಕಾಟಕ
ಸಂತೋಷಕ್ಕೆ ನಿಮ್ಮ ಹತ್ತಿರದವರಿಂದ ತಡೆ ಉಂಟಾಗಬಹುದು. ಹೊಸ ಜನರ ಸಂಪರ್ಕವನ್ನು ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿರಿ. ಶ್ರೀರಾಮನಾಮ ಭಜನೆಯಿಂದ ಕಾರ್ಯಗಳ ಅಭಿವೃದ್ಧಿಯಾಗುವುದು.
ಸಿಂಹ
ದುರಭ್ಯಾಸಗಳಿಗೆ ಒಳಗಾಗದಂತೆ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಿ. ಉಳಿತಾಯದ ಹಣದ ಹೊಂದಾಣಿಕೆಯಿಂದ ಸಾಲ ಮಾಡುವ ಪರಿಸ್ಥಿತಿ ದೂರಾಗುವುದು. ವ್ಯವಹಾರದಲ್ಲಿ ಪೈಪೋಟಿ ಹೆಚ್ಚಲಿದೆ.
ಕನ್ಯಾ
ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಂದ ಮಾನಸಿಕ ಅಸಮಾಧಾನ ಕಾಡಲಿದೆ. ಒಳಾಂಗಣ ವಿನ್ಯಾಸಕಾರರಿಗೆ ಬೇಡಿಕೆ ಇರುವುದು. ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಹೆಚ್ಚಿನ ಬಂಡವಾಳ ಹೂಡಬಹುದು.
ತುಲಾ
ಪರಿಶ್ರಮವಿಲ್ಲದೇ ಕೆಲಸ ದೊರೆತಿದ್ದಕ್ಕೆ ಸಂತಸವಿದ್ದು ಹೊಸ ಸಂಸ್ಥೆಯಲ್ಲಿನ ಕೆಲಸಗಳು ಸುಲಭ ಮತ್ತು ಸಂತೋಷಮಯ ಎನಿಸುವುದು. ಕೆಲವೊಂದು ಬದಲಾವಣೆಯನ್ನು ರೂಢಿಸಿಕೊಳ್ಳಬೇಕಾಗುವುದು.
ವೃಶ್ಚಿಕ
ಕಷ್ಟ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸಕಾಲಕ್ಕೆ ಸ್ನೇಹಿತರಿಂದ ಹಣದ ಸಹಾಯ ಸಿಗಲಿದೆ. ಸರ್ಕಾರದ ಕಂಟ್ರಾಕ್ಟ್ ಕೆಲಸ ದೊರೆತು ಸಂತೋಷವಾಗುವುದು. ಫಲಿತಾಂಶವು ಬರಲಿದೆ.
ಧನು
ಇನ್ನೊಬ್ಬರ ಮಾತುಗಳನ್ನು ಆಲಿಸಿಕೊಂಡು ವಿಚಾರಗಳನ್ನು ತೀರ್ಮಾನಿಸುವುದಕ್ಕಿಂತ ಸ್ವತಃ ಪರೀಕ್ಷೆ ನಡೆಸಿ ತೀರ್ಮಾನಕ್ಕೆ ಬರುವುದು ಸರಿಯಾದ ಮಾರ್ಗವೆನಿಸುತ್ತದೆ. ಸೌಜನ್ಯ, ಸರಳತೆಯಿಂದ ಹುದ್ದೆಗೆ ಮೆರುಗು.
ಮಕರ
ಕೇವಲ ವ್ಯಾವಹಾರಿಕವಾಗಿ ಅಲ್ಲದೆ ಪಾರಮಾರ್ಥಿಕ ದೃಷ್ಟಿಯಲ್ಲಿಯೂ ವಿಷಯಗಳನ್ನು ಯೋಚನೆ ಮಾಡುವುದು ಉತ್ತಮ. ವೃತ್ತಿಗೆ ಹೊರತಾದ ಕೆಲಸ ಮಾಡುವುದರಲ್ಲಿ ಆಸಕ್ತಿ ಹೆಚ್ಚಲಿದೆ. ಹಣಕಾಸಿನಲ್ಲಿ ಹಿಡಿತವಿರಲಿ
ಕುಂಭ
ಗುರಿ ಸಾಧನೆಯತ್ತ ಆಸಕ್ತಿಯಿಂದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಹೆಚ್ಚಿನ ಪ್ರಯತ್ನಗಳಿಂದ ಉತ್ತಮ ಉದ್ಯೋಗವನ್ನು ಗಳಿಸಿಕೊಳ್ಳಬಹುದು. ಕಿರು ಪ್ರವಾಸದ ಮಾತು ಬರಲಿದೆ.
ಮೀನ
ಲೆಕ್ಕಚಾರದ ಜವಾಬ್ದಾರಿಯನ್ನು ಹೊತ್ತಿರುವವರು ಈ ದಿನ ಹೆಚ್ಚಿನ ಗಮನದಿಂದ ಕೆಲಸ ನಿರ್ವಹಿಸಿ. ಇಲ್ಲವಾದಲ್ಲಿ ಸಮಸ್ಯೆಗೆ ಸಿಲುಕುವಂತಾಗುವುದು. ಕಬ್ಬಿಣದ ವ್ಯವಹಾರದ ನಿರ್ವಹಣೆಗೆ ಸಾಲ ಮಾಡಬೇಕಾಗುವುದು.