ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ನಿಮ್ಮ ಪ್ರಾಮಾಣಿಕತೆಯ ಫಲವಾಗಿ ಉದ್ಯೋಗದಲ್ಲಿ ಸ್ಥಾನಮಾನ ಸಿಗಲಿದೆ
Published 5 ಫೆಬ್ರುವರಿ 2024, 23:44 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಸಾಂಸಾರಿಕ ಮತ್ತು ವ್ಯಾಪಾರ ವ್ಯವಹಾರದ ವಿಚಾರಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳಿರಿ. ಖಾದ್ಯ ವಸ್ತುಗಳ ಮಾರಾಟದ ಉದ್ಯೋಗದವರು ನೆಮ್ಮದಿ ಕಾಣಬಹುದು. ವಾಣಿಜ್ಯ ಉದ್ಯಮಿಗಳಿಗೆ ವಿಶೇಷ ದಿನ
ವೃಷಭ
ಹಿತಶತ್ರುಗಳ ದ್ವೇಷ ಅಸೂಯೆಯಿಂದ ಬರುತಿದ್ದ ಮನದ ಕ್ಲೇಶ ದೂರಾಗುತ್ತದೆ. ವಿಶ್ರಾಂತಿಯಿಲ್ಲದ ಕಾರ್ಯದೊತ್ತಡದಿಂದ ಅನಾರೋಗ್ಯ ಉಂಟಾಗಬಹುದು. ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ. ಏಳಿಗೆ ಹೊಂದುವಿರಿ.
ಮಿಥುನ
ವೃತ್ತಿಯಲ್ಲಿನ ಬದಲಾವಣೆ ಮಾಡುವ ಬಗ್ಗೆ ಹೆಂಡತಿಯೊಡನೆ ಮತ್ತು ಸ್ನೇಹಿತರೊಡನೆ ಚರ್ಚಿಸಿ ತೀರ್ಮಾನಿಸುವುದು ಒಳ್ಳೆಯದು. ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಅಥವಾ ರಿಪೇರಿಗಳಿಂದ ಆದಾಯ ಹೆಚ್ಚುವುದು.
ಕರ್ಕಾಟಕ
ನಿಮ್ಮ ಪ್ರಾಮಾಣಿಕತೆಯ ಫಲವಾಗಿ ಉದ್ಯೋಗದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ. ಸಣ್ಣ ನೋವಿಗಾಗಿ ವೈದ್ಯರನ್ನು ಭೇಟಿ ಮಾಡಿದ ನಿಮಗೆ ತಪಾಸಣೆಯಿಂದ ಬಂದ ಫಲಿತಾಂಶ ಆತಂಕವನ್ನು ಸೃಷ್ಟಿ ಮಾಡಲಿದೆ.
ಸಿಂಹ
ಧೈರ್ಯಂ ಸರ್ವತ್ರ ಸಾಧನಂ ಎನ್ನುವ ವಾಕ್ಯದಂತೆ ಹೆದರದೆ ಧೈರ್ಯದಿಂದ ಮುನ್ನುಗ್ಗಿ. ವ್ಯವಹಾರಸ್ಥರು ನೂತನ ಕೆಲಸ ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಒಪ್ಪಿಗೆ ನೀಡಲು ಈ ದಿನ ಸೂಕ್ತವಲ್ಲ.
ಕನ್ಯಾ
ಹೊಸ ಆಕಾಂಕ್ಷೆಗಳನ್ನು ಹಾಗೂ ಜೀವನದ ಗುರಿಗಳನ್ನು ಅರಿತುಕೊಂಡು ಮುಂದುವರಿಯುವಿರಿ. ನಿಮ್ಮ ಆದ್ಯತೆ ನಿಮ್ಮ ವೃತ್ತಿಪರ ಕೆಲಸಗಳ ಬಗೆಗೆ ಮಾತ್ರ ಇರಲಿ. ಕೆಲಸಗಳು ಪೂರ್ವ ಯೋಜನೆಯಂತೆ ನಡೆಯುವುದು ಕಷ್ಟಕರ.
ತುಲಾ
ತಂದೆಯೊಡನೆ ಕೂಡಿ ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ವಿಶೇಷ ಪಾತ್ರ ವಹಿಸುವ ಅವಕಾಶ ಈ ದಿನ ನಿಮ್ಮದಾಗಲಿದೆ. ವ್ಯವಹಾರದಲ್ಲಿ ಸಹೋದರನನ್ನು ಸೇರಿಸಿಕೊಂಡು ನೂತನ ಘಟಕಗಳನ್ನು ಆರಂಭಿಸಬಹುದು.‌
ವೃಶ್ಚಿಕ
ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲಗಳನ್ನು ಹೊರ ತೆಗೆಯಲು ಹೊಸದನ್ನು ಕಲಿಯಲು ಮುಂದಾಗುವಂತಾಗಲಿದೆ. ವಿಶೇಷವಾಗಿ ಸಂಗೀತ ಶಾಸ್ತ್ರದ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅಧಿಕ ಸಮಯ ಸಿಗುವುದು.
ಧನು
ಹಲವಾರು ಅವಕಾಶಗಳು ನಿಮಗೆದುರಾಗಿದ್ದರೂ ಸರಿಯಾಗಿ ಇರುವುದನ್ನೇ ಆಯ್ಕೆ ಮಾಡುವಿರಿ. ಕಾರ್ಯದೊತ್ತಡದ ನಡುವೆಯೂ ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದನ್ನು ಮರೆಯದಿರಿ.
ಮಕರ
ಕಾರ್ಯ ಸಾಧನೆಗೆ ಕೆಲವರ ಅಡ್ಡಗಾಲು ಹಾಗೂ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆ ಇರುತ್ತದೆ. ಕಿಂಚಿತ್ ಕಾರ್ಯಸಿದ್ದಿಯಿಂದಲೂ ನೆಮ್ಮದಿ ಕಂಡು ಬರಲಿದೆ. ಮಕ್ಕಳ ಮೇಲಿದ್ದ ಮುನಿಸು ಕರಗುವುದು.
ಕುಂಭ
ತಾಯಿಯ ಆರೋಗ್ಯದ ಬಗ್ಗೆ ಗಮನವನ್ನು ಹರಿಸಿ; ಅದರಲ್ಲೂ ಹೊಟ್ಟೆಗೆ ಸಂಬಂಧಿಸಿದ ರೋಗ ಲಕ್ಷಣಗಳು ಅನುಭವಕ್ಕೆ ಬಂದಲ್ಲಿ, ತಡಮಾಡದೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಉತ್ತಮ.
ಮೀನ
ಮಕ್ಕಳ ಮೇಲಿನ ವ್ಯಾಮೋಹ ಅತಿಯಾಗಿ ಸಮಾಜದಲ್ಲಿ ಗೌರವ ಕಳೆದುಕೊಳ್ಳುವ ಘಟನೆ ನಿಮ್ಮ ಬಾಳಲ್ಲಿ ನೆಡೆಯಬಹುದು. ಕಂಪನಿಯ ಹಣಕಾಸಿನ ನಿರ್ವಹಣೆಯಲ್ಲಿ ನಿಮ್ಮ ಪಾತ್ರ ಪ್ರಮುಖವಾಗುವುದು.