ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಆಧ್ಯಾತ್ಮ ಚಿಂತಕರಿಗೆ ವಿಶೇಷವಾದ ದಿನ
Published 6 ಆಗಸ್ಟ್ 2024, 0:05 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೂರದ ಸಂಚಾರ ತೋರಿಬಂದರೂ ಅದನ್ನು ಮುಂದೂಡುವುದು ಅನಿವಾರ್ಯ. ಗಂಡನ ಹಣಕಾಸಿನ ಪರಿಸ್ಥಿತಿಗೆ  ಶ್ರಮಿಸಿ ಸಹಕರಿಸಬೇಕಾದಂತೆ ಆಗುವುದು. ವಾಣಿಜ್ಯ ಅಥವಾ ಆರ್ಥಿಕ ಒಪ್ಪಂದಗಳು ಏರ್ಪಡುವುದು.
ವೃಷಭ
ಗೃಹ ನಿರ್ಮಾಣ ಕಾರ್ಯವು ಆಮೆಯ ವೇಗದಲ್ಲಿ ಸಾಗುವುದರಿಂದ ಮನಸ್ಸಿಗೆ ತುಸು ತಳಮಳ, ಹೆದರಿಕೆ, ಆತಂಕ ಮೂಡಲಿದೆ. ಕುಟುಂಬದ ಆಂತರಿಕ ಸಮಸ್ಯೆ ಸಾಮರಸ್ಯದಿಂದ ಬಗೆಹರಿಯಲಿದೆ.
ಮಿಥುನ
ಮನೆಯವರಿಗೆ ನಿರ್ಧಾರವನ್ನು ಸ್ಪಷ್ಟ ಹಾಗೂ ಮೃದುವಾದ ಮಾತುಗಳಲ್ಲಿ ತಿಳಿಸಿ.ಹಲವು ದಿನಗಳಿಂದ ಇದ್ದಂತಹ ಹಂಬಲವು ಮಿತ್ರರ ಸಹಾಯದಿಂದ ನೆರವೇರುವುದು. ಹಲ್ಲಿನ ಆರೋಗ್ಯ ಗಮನಿಸಿ.
ಕರ್ಕಾಟಕ
ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಹೆಂಡತಿಯ ಬಳಗದಲ್ಲಿ ಆದಷ್ಟು ಮೌನವಾಗಿರಲು ನಿಶ್ಚಯಿಸಿ. ಧಾನ್ಯಗಳ ರಫ್ತು ಮಾರಾಟಗಾರರು  ಅನುಕೂಲವನ್ನು ಪಡೆಯುವಿರಿ. ಕಪ್ಪು ಬಣ್ಣವು ಅದೃಷ್ಟ ಬದಲಾಯಿಸಲಿದೆ.
ಸಿಂಹ
ಮಗನ ಮುಂದಿನ ಓದಿನ ವಿಷಯ  ಚರ್ಚೆಗೆ ಬರುವುದು. ಅಸಹಾಯಕ ಪರಿಸ್ಥಿತಿಯಲ್ಲಿರುವ ನೀವು ಪರಿಣತರ ಸಲಹೆಗಳೊಂದಿಗೆ ಗಣಪತಿಯ ಆರಾಧನೆಯಿಂದ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ.
ಕನ್ಯಾ
ಕಲಾಕಾರರಿಗೆ ಕಲೆಯ ಪ್ರದರ್ಶನದಿಂದ ಪ್ರಶಂಸೆ ಮತ್ತು ಗೌರವಾದರಗಳಿಂದ ಮನೋಲ್ಲಾಸ ಉಂಟಾಗುವುದು. ಈ ದಿನದ  ಘಟನೆ ಭಾವುಕರನ್ನಾಗಿ ಮಾಡಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ತುಲಾ
ರಸಗೊಬ್ಬರ ಮತ್ತು ಕೀಟನಾಶಕಗಳನ್ನು ವ್ಯಾಪಾರ ಮಾಡುವವರಿಗೆ ಲಾಭದ ಜತೆ ಆಯಾಸವೂ ಕಾಡಲಿದೆ. ಸಿನಿಮಾ ರಂಗಕ್ಕೆ ಸೇರಿಕೊಳ್ಳುವ ಬಗ್ಗೆ ಯೋಚಿಸುವವರಿಗೆ ಈ ದಿನ ಸುದಿನ. ಹೋರಾಟದಿಂದ ಯಶಸ್ಸು ಲಭಿಸಲಿದೆ.
ವೃಶ್ಚಿಕ
ಮಾತಿನ ಚತುರತೆಯಿಂದ ಕೆಲಸಗಳು ಸರಾಗವಾಗಿ ನೆರವೇರುವುದು.  ಉತ್ತಮ ಕಾರ್ಯದಿಂದ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗುವಿರಿ. ಸ್ವತ್ತಿನ ವಿಚಾರದಲ್ಲಿ ಬಂಧುಗಳು ನೆರವಿಗೆ ಬರುವರು.
ಧನು
ಅಸಾಧ್ಯ ಕಾರ್ಯ ಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ.  ಶತ್ರುಗಳ ಬಣ್ಣ ಬಯಲಾಗುವುದುಸಂತೋಷಕ್ಕೆ ಕಾರಣವಾಗುತ್ತದೆ. ಸಣ್ಣ ಉದ್ಯಮಿಗಳಿಗೆ ಹೆಚ್ಚು ವ್ಯಾಪಾರ ನಡೆಯುವುದು.
ಮಕರ
ಉದ್ಯೋಗದಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆ ಮಾಡುವವರು  ಜಾಗ್ರತರಾಗಿರಿ. ಕೋರ್ಟು ವ್ಯವಹಾರಗಳನ್ನು ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳುವಿರಿ. ಕಾನೂನು ವಿದ್ಯಾರ್ಥಿಗಳಿಗೆ ಯಶಸ್ಸು ಕಂಡುಬರುವುದು.
ಕುಂಭ
ಅಣ್ಣ ತಮ್ಮಂದಿರ ನಡುವಿನ ವಿಚಾರದಲ್ಲಿ ತೆಗೆದುಕೊಂಡಿದ್ದ ನಿರ್ಧಾರಗಳು ಸರಿಯಾಗಿದೆಯೇ ಎಂದು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ. ಅನ್ನದಾನ ಮಾಡುವ ಯೋಚನೆಗಳು  ಬರಲಿವೆ.
ಮೀನ
ಸಂಕೋಚವಿಲ್ಲದೆ ನೂತನ ಕಾರ್ಯಭಾರವನ್ನು ಹೆಗಲಿಗೇರಿಸಿಕೊಳ್ಳಿ. ಗಣಿತತಜ್ಞರಿಗೆ, ಆಧ್ಯಾತ್ಮ ಚಿಂತಕರಿಗೆ ವಿಶೇಷವಾದ ದಿನವೆನಿಸಲಿದೆ. ಭೂ ವ್ಯವಹಾರ ಪೂರ್ಣಗೊಂಡು ಹಣ ಕೈ ಸೇರುತ್ತದೆ.