ಭಾನುವಾರ, 6 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜನವರಿ 12 ಶುಕ್ರವಾರ 2024– ಈ ರಾಶಿಯವರಿಗೆ ಉದ್ಯೋಗ ಲಭಿಸುವ ಸಾಧ್ಯತೆ
Published 11 ಜನವರಿ 2024, 18:31 IST
ಪ್ರಜಾವಾಣಿ ವಿಶೇಷ
author
ಮೇಷ
ಉದ್ಯೋಗಾಕಾಂಕ್ಷಿಗಳಿಗೆ ಬಯಸಿದ ಕ್ಷೇತ್ರದಲ್ಲಿ ಸದವಕಾಶ ದೊರೆ ಯಲಿದೆ. ಗೆಳೆಯನಿಂದ ಆರ್ಥಿಕ ಸಹಾಯ ನಿರೀಕ್ಷಿಸಬಹುದು. ಹೊಸ ಉದ್ಯೋಗಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು.
ವೃಷಭ
ರಾಸಾಯನಿಕ ವಸ್ತುಗಳ ರಫ್ತು ವ್ಯವಹಾರ ನಡೆಸುವವರು ನಿಯಮಕ್ಕೆ ಬದ್ಧರಾಗಿರುವುದು ಉತ್ತಮ. ಮಹಿಳಾ ಉದ್ಯೋಗಿಗಳಿಗೆ ಜವಾಬ್ದಾರಿ ದೊರೆಯಲಿದೆ. ನಯ, ವಿನಯ, ಶಿಷ್ಟಾಚಾರಗಳನ್ನು ಕಾಪಾಡಿಕೊಳ್ಳಿ.
ಮಿಥುನ
ಪ್ರಮುಖ ಗುರಿ ಸಾಧನೆಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬೇಡಿಕೆ ಸಿಗುವುದು. ಹೊಂದಾಣಿಕೆಯ ಮನೋಭಾವ ಕಡಿಮೆಯಾಗುವುದರಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗದಂತೆ ಜಾಗ್ರತೆ ವಹಿಸಿ.
ಕರ್ಕಾಟಕ
ಯಾವುದೇ ಅನುಮಾನಗಳಿಲ್ಲದೇ ಏಕಮುಖವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಅಸಾಧ್ಯವಾಗುವುದು. ಮಕ್ಕಳ ಅಥವಾ ಸಾಕುಪ್ರಾಣಿಗಳ ಆರೋಗ್ಯ ವ್ಯತ್ಯಾಸದಿಂದ ಭಯ ಉಂಟಾಗಲಿದೆ.
ಸಿಂಹ
ವೃತ್ತಿಯಲ್ಲಿ ಅಧಿಕಾರಿಗಳು ಕಾರ್ಯಸಾಧನೆ ಗುರುತಿಸಿ ಹೆಚ್ಚಿನ ಸೌಲಭ್ಯ ಒದಗಿಸಿ ಕೊಡುವರು. ಕೈ ಹಾಕಿದ ಕೆಲಸಗಳು ಯಾವುದೇ ತೊಂದರೆ ಇಲ್ಲದೆ ನೆರವೇರುವುದು. ವಾಹನ ಖರೀದಿಯ ಬಗ್ಗೆ ಚಿಂತನೆ ಬರಲಿದೆ.
ಕನ್ಯಾ
ವೃತ್ತಿಯಲ್ಲಿ ಮೇಲಧಿಕಾರಿಗಳಿಗೂ ನಿಮಗೂ ಹೊಂದಾಣಿಕೆ ಮೂಡುವುದು ಕಷ್ಟವೆನಿಸಲಿದೆ. ದೂರದೃಷ್ಟಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗುವುದು ಉತ್ತಮ. ಹಸಿರು ಬಣ್ಣ ಅದೃಷ್ಟ ತರುವುದು.
ತುಲಾ
ಜನ ಸಂಪರ್ಕ ಬೆಳೆಸಿಕೊಳ್ಳುವುದನ್ನು ಅಭ್ಯಸಿಸಿಕೊಳ್ಳುವುದು ಉತ್ತಮ. ಮನೆ ಕಟ್ಟಡದ ಕೆಲಸಗಳು ಮುಕ್ತಾಯದ ಹಂತಕ್ಕೆ ತಲುಪುವುದು. ಯಾವುದೇ ಅನಿವಾರ್ಯಗಳಿದ್ದರೂ ದೂರದ ಪ್ರಯಾಣ ಸರಿಯಲ್ಲ.
ವೃಶ್ಚಿಕ
ಅನಿಸಿಕೆಗಳನ್ನು ಉತ್ತಮ ರೀತಿಯಲ್ಲಿ ಅಭಿವ್ಯಕ್ತಗೊಳಿಸಲು ಸಾಧ್ಯವಾಗುವುದು ಕಷ್ಟವೆನಿಸುತ್ತದೆ. ವಕೀಲರು ಕೋರ್ಟು ಕೆಲಸಗಳಲ್ಲಿ ಅಧಿಕ ವರಮಾನ ಗಳಿಸುವರು. ಕೋರ್ಟು ವ್ಯವಹಾರಗಳು ಮುಂದುವರಿಯುವುದು.
ಧನು
ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಿಂದ ವಿಚಾರ ತಿಳಿದುಕೊಳ್ಳುವುದು ಉತ್ತಮ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಲಭಿಸುವಂಥ ಸಾಧ್ಯತೆ ಇದೆ.
ಮಕರ
ತಪ್ಪುಗಳನ್ನು ತಿದ್ದಿಹೇಳುವಲ್ಲಿ ಹಿರಿಯ ಅಧಿಕಾರಿಗಳು ಈ ದಿನ ನಿಮ್ಮ ನೆರವಿಗೆ ನಿಲ್ಲುವರು. ಟ್ರಾವೆಲ್ ಏಜೆಂಟ್‌ಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತದೆ. ಅಧ್ಯಾಪಕ ವರ್ಗದವರಿಗೆ ಹೆಚ್ಚಿನ ಕೆಲಸ ಇರುವುದು.
ಕುಂಭ
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಅಧಿಕ ಕಮಿಷನ್ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸವು ಉತ್ತಮವಾಗಿ ನಡೆದು ಸಂತೋಷ ಉಂಟಾಗಲಿದೆ. ಸರ್ಕಾರಿ ಕೆಲಸಗಳು ಈ ದಿನ ಸುಲಭವಾಗಿ ಆಗಲಿದೆ.
ಮೀನ
ನಿರ್ಧಾರಗಳಿಗೆ ಪಾಲುದಾರರಿಂದ ಉತ್ತೇಜನಕಾರಿ ಪ್ರತಿಕ್ರಿಯೆ ದೊರೆಯುವುದು. ಮನೆಯಲ್ಲಿ ಮತ್ತು ಕುಟುಂಬ ಸದಸ್ಯರಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ. ವಾಣಿಜ್ಯ ವ್ಯಾಪಾರಗಳಿಂದ ಅಧಿಕ ಲಾಭ.
ADVERTISEMENT
ADVERTISEMENT