ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಸಜ್ಜನರ ಒಡನಾಟದಿಂದ ಕೆಲಸಗಳಿಗೆ ಹೆಚ್ಚಿನ ಪುಷ್ಟಿ
Published 20 ಜನವರಿ 2024, 22:08 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಂತ್ರೋಪಕರಣಗಳ ರಿಪೇರಿ ಮತ್ತು ಮಾರಾಟದಿಂದ ಮತ್ತು ಪಶುಸಂಗೋಪನೆಯಿಂದ ಲಾಭ ಇರುವುದು. ಕೌಟುಂಬಿಕವಾಗಿ ಮೂಡಿದ್ದ ಅನುಮಾನಗಳು ದೂರವಾಗಲಿದೆ. ಸತ್ಕಾರ್ಯಗಳಿಂದ ಮನೆಯಲ್ಲಿ ಸಡಗರ.
ವೃಷಭ
ಹಿತ್ತಾಳೆ, ತಾಮ್ರದಂಥ ಲೋಹದ ವಸ್ತುಗಳ ವ್ಯಾಪಾರಿಗಳಿಗೆ ಸಂಪಾದನೆ ಹೆಚ್ಚಳವಾಗಲಿದೆ. ಗಣ್ಯವ್ಯಕ್ತಿಗಳಿಗೆ ಸಮಾಜ ಮತ್ತು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಹಾಗೂ ಗೌರವಗಳು ಲಭಿಸಲಿವೆ.
ಮಿಥುನ
ನೂತನ ಮನೋಭಿಲಾಷೆ, ಯೋಚನೆಗಳು ಖರ್ಚಿಗೆ ದಾರಿ ಯಾದರೂ ಮುಂದಿನ ದಿನಗಳಲ್ಲಿ ಉಪಕಾರಿಯಾಗಿರುತ್ತದೆ. ಆಕಸ್ಮಿಕ ರೀತಿಯಲ್ಲಿ ಮದುವೆ ನಿಶ್ಚಯ ಕಾರ್ಯ ನಡೆಯಲಿದೆ.
ಕರ್ಕಾಟಕ
ನಿವೇಶನಗಳ ಖರೀದಿಯ ಆಲೋಚನೆಗಳಿಗೆ ಪೂರಕವಾದ ವಾತಾವರಣ ಸ್ನೇಹಿತರಿಂದ ಸಿಗಲಿದೆ. ಹಿಂದಿನಿಂದ ಬಾಕಿ ಇರುವ ಮನೆ ದೇವರ ಕೆಲಸಗಳನ್ನು ಮಾಡಿ ಮುಗಿಸುವ ನಿರ್ಧಾರಕ್ಕೆ ಬರುವಂತಾಗುವುದು.
ಸಿಂಹ
ಖರ್ಚು-ವೆಚ್ಚದಲ್ಲಿ ಮಿತಿ ಇದ್ದರೆ ಉತ್ತಮ. ಮುಖ್ಯವಾಗಿ ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಇನ್ನೊಬ್ಬರನ್ನು ಹೀಯಾಳಿಸುವುದು ಅಥವಾ ಅಪಹಾಸ್ಯ ಮಾಡುವುದು ನಿಮ್ಮ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ‌
ಕನ್ಯಾ
ಮಗಳ ಮದುವೆಯ ಸಲುವಾಗಿ ಆಭರಣವನ್ನು ಕೊಳ್ಳುವ ಬಗ್ಗೆ ಅಥವಾ ಇನ್ನೇನಾದರೂ ತಯಾರಿ ಮಾಡಿಕೊಳ್ಳುವ ಬಗ್ಗೆ ಯೋಚಿಸಿ. ವಾಹನ ವಹಿವಾಟುಗಳಲ್ಲಿ ನಿರೀಕ್ಷೆಗೂ ಮೀರಿದ ಲಾಭ ಪಡೆಯಬಹುದು.
ತುಲಾ
ಜಟಿಲ ಸಮಸ್ಯೆಗಳು ಬಗೆಹರಿದು ನೆಮ್ಮದಿ ಉಂಟಾಗುವುದು. ಆರ್ಥಿಕವಾಗಿ ಸಾಕಷ್ಟು ಸಂಪಾದನೆಯಾಗುವುದರಿಂದ ಅನಿವಾರ್ಯದ ಖರ್ಚಿಗೇನೂ ಯೋಚನೆ ಇರುವುದಿಲ್ಲ. ಹಿರಿಯರ ಮಾತಿನ ಬಗ್ಗೆ ಗಮನವಿರಲಿ.
ವೃಶ್ಚಿಕ
ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ ಮರಳಿ ಪ್ರಯತ್ನ ಮಾಡುವುದರಿಂದ ಜಯಶಾಲಿಯಾಗಬಹುದು. ಮಕ್ಕಳ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಆರೋಗ್ಯದ ಬಗ್ಗೆ ನಿಗಾ ವಹಿಸಿ.
ಧನು
ಎಲ್ಲರೊಂದಿಗೆ ಎಲ್ಲವಿಚಾರದಲ್ಲಿ ಹೊಂದಿಕೊಳ್ಳುವ ನಿಮ್ಮ ಗುಣ ಹಾಗೂ ಸಾಮರ್ಥ್ಯ ಈ ದಿನ ಬಹಳಷ್ಟು ಮುಖ್ಯವೆನಿಸುವುದು. ವಿದ್ಯೆ ಮತ್ತು ಬುದ್ಧಿವಂತಿಕೆಯನ್ನು ಸರಿಯಾದ ಮಾರ್ಗದಲ್ಲಿ ಬಳಸುವ ಬಗ್ಗೆ ತೀರ್ಮಾನಿಸಿ.
ಮಕರ
ಮನೆ ಬದಲಾಯಿಸುವ ಯೋಚನೆಗೆ ಇಂದು ಸರಿಯಾದ ಸಮಯ. ನಾನಾ ರೀತಿಯಲ್ಲಿ ಹಣವು ನಿಮ್ಮ ಕೈ ಸೇರಲಿದೆ. ಮುಂದಿನ ದಿನಗಳಲ್ಲಿ ಯಾವುದೇ ಅವ್ಯವಹಾರ, ತಪ್ಪುಗಳು ನಡೆಯದಂತೆ ಜಾಗ್ರತೆ ವಹಿಸಿ.
ಕುಂಭ
ವಂಶ ಪಾರಂಪರ್ಯದಿಂದ ಬಂದ ನಿಮ್ಮ ವ್ಯಾಪಾರ ವ್ಯವಹಾರಗಳು ಈ ದಿನ ಮತ್ತಷ್ಟು ಏಳಿಗೆಯನ್ನು ಕಾಣಲಿದೆ. ವ್ಯವಹಾರಿಕ ಸಲಹೆಗಳಿಗೆ ಮನ್ನಣೆ ದೊರೆಯಲಿದೆ. ಯಾವುದೇ ಕಟ್ಟುಪಾಡಿಗೆ ಸಿಕ್ಕಿಕೊಳ್ಳಬೇಡಿ.
ಮೀನ
ಸಜ್ಜನರ ಒಡನಾಟದಿಂದ ಕೆಲಸಗಳಿಗೆ ಹೆಚ್ಚಿನ ಪುಷ್ಟಿ ದೊರೆಯಲಿದೆ. ನೂತನ ವ್ಯಕ್ತಿಯ ಪರಿಚಯವು ಸರ್ಕಾರಿ ಕೆಲಸಕ್ಕೆ ಅನುಕೂಲವನ್ನು ಉಂಟು ಮಾಡಲಿದೆ. ವಿವಾಹದ ವಿಷಯಗಳು ಚರ್ಚೆಯಾಗುವುದು.