ದಿನ ಭವಿಷ್ಯ: ಪುನಃ ಹಿಂದಿನ ಕಂಪನಿಯನ್ನೇ ಆಶ್ರಯಿಸುವ ಬಗ್ಗೆ ಯೋಚನೆ ಮಾಡಿ
Published 23 ಜುಲೈ 2024, 23:52 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲವು ಪ್ರಮುಖ ಕಾರ್ಯಗಳನ್ನು ಮಾಡುವಾಗ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಅವನ್ನು ಲೆಕ್ಕಿಸದೆ ಗುರಿ ಸಾಧನೆಯ ಬಗ್ಗೆ ಯೋಚಿಸಿರಿ. ಉದ್ಯೋಗಕ್ಕಾಗಿ ನಡೆಸಿದ ಪ್ರಯತ್ನ ಈ ದಿನ ಫಲ ನೀಡಲಿದೆ.
ವೃಷಭ
ಅಧಿಕಾರಿ ವರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಜನ ಸಾಮಾನ್ಯರಿಂದ ಪ್ರೋತ್ಸಾಹ ದೊರಕುತ್ತವೆ. ಹೊಸ ವ್ಯವಹಾರಗಳ ಚಾಲನೆಗೆಂದು ಉತ್ತಮ ಮಾರ್ಗದರ್ಶನವನ್ನು ಹೊಂದುವಿರಿ.
ಮಿಥುನ
ವಿದ್ಯಾರ್ಥಿ ವರ್ಗಕ್ಕೆ ಬಂದಿರುವ ಜವಾಬ್ದಾರಿಯುಕ್ತ ನಡವಳಿಕೆ ಮತ್ತು ಉತ್ಸಾಹದಿಂದ ಏಳಿಗೆಯ ಸೂಚನೆ ಇರುವುದು. ಮದುವೆ ವಿಷಯಗಳತ್ತ ಗಮನಹರಿಸುವಂತೆ ಮನೆಯವರಿಂದ ಒತ್ತಡ ಬರಲಿದೆ.
ಕರ್ಕಾಟಕ
ಸಾಮರ್ಥ್ಯ, ದಕ್ಷತೆ ಹಾಗೂ ಸೇವಾ ಮನೋಭಾವಗಳಿಂದಾಗಿ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ವೃತ್ತಿಯಲ್ಲಿ ಉನ್ನತಿ ತೋರಿಬಂದರೂ ವಿಘ್ನ ಭೀತಿ ಇರುತ್ತದೆ.
ಸಿಂಹ
ಅತಿ ಔದಾರ್ಯತನ ತೋರಬೇಕೆನಿಸಿದಲ್ಲಿ ಹಣಕಾಸಿನ ಸ್ಥಿತಿಯನ್ನು ಗಮನಿಸಿಕೊಳ್ಳಿರಿ. ಏಕಾಗ್ರತೆಯಿಂದಾಗಿ ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಕೆಲಸವನ್ನು ಒಪ್ಪಿಕೊಳ್ಳಬಹುದು.
ಕನ್ಯಾ
ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸಿ ಸದುಪಯೋಗ ಪಡಿಸಿಕೊಳ್ಳುವುದು ಉತ್ತಮ. ಪರಿಸ್ಥಿತಿಯನ್ನು ಬುದ್ಧಿವಂತಿಕೆ ಮತ್ತು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು.
ತುಲಾ
ಪುನಃ ಹಿಂದಿನ ಕಂಪನಿಯನ್ನೇ ಆಶ್ರಯಿಸುವ ಬಗ್ಗೆ ಯೋಚನೆ ಮಾಡಿ. ಪೆಟ್ರೋಲಿಯಂ ಉತ್ಪನ್ನಗಳಿಂದ ಆದಾಯವಿದೆ. ಮನೆಯ ಹೆಚ್ಚುವರಿ ಆದಾಯದಿಂದ ಹುಮ್ಮಸ್ಸು ಹೆಚ್ಚುವುದು.
ವೃಶ್ಚಿಕ
ಗೃಹದಲ್ಲಿ ಸಂಭ್ರಮಾಚರಣೆಯ ಸಲುವಾಗಿ ಖರ್ಚುಗಳು ಸಂಭವಿಸಲಿವೆ. ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳುವುದು. ಚಿಂತೆ ಮತ್ತು ಭಯ ಇವೆರಡನ್ನೂ ದೂರ ಮಾಡಿಕೊಳ್ಳಿ.
ಧನು
ಆಸ್ತಿ ಕೊಳ್ಳುವಾಗ ಎಲ್ಲಾ ವಿವರಗಳ ಬಗ್ಗೆ ಎರಡೆರಡು ಬಾರಿ ಮಾಹಿತಿಯನ್ನು ಪಡೆದುಕೊಳ್ಳಿರಿ. ಒತ್ತಡ ತರುವಂಥ ಕೆಲಸಗಳಿಂದ ದೂರವಿರಿ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಹೊಂದುವಿರಿ.
ಮಕರ
ಈ ದಿನ ಹೆಚ್ಚಿನ ಆತ್ಮಸ್ಥೈರ್ಯದಿಂದ ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ ಜಯ ಕಾಣುವಿರಿ. ವಾಹನ ಮಾರಾಟಗಳಿಂದ ಆದಾಯ ಪಡೆದುಕೊಳ್ಳುವಿರಿ. ಶ್ರಮದ ಬದುಕಿನಿಂದ ಹೊಸ ಘಟ್ಟ ತಲುಪುವಿರಿ.
ಕುಂಭ
ಬಿಸಿನೆಸ್ ಸಂಬಂಧ ಬ್ಯಾಂಕ್ ಅಧಿಕಾರಿಗಳ ಜತೆ ತಕ್ಷಣದಲ್ಲಿ ಮಾತುಕತೆ ನಡೆಸಬೇಕಾದೀತು. ಸ್ವಂತ ಉದ್ಯಮದಲ್ಲಿರುವವರು ತಮ್ಮ ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಸಫಲತೆ ಹೊಂದುವರು.
ಮೀನ
ಮನೆಯ ದಾಖಲೆ ಪತ್ರಗಳನ್ನು, ಲೆಕ್ಕಪತ್ರಗಳನ್ನು ಪರಿಶೀಲಿಸಿ, ಸರಿಪಡಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿ. ಗೌರವಯುತ ಸ್ಥಾನಮಾನಗಳು ದೊರಕುತ್ತವೆ. ದಿನದ ಅಂತ್ಯದಲ್ಲಿ ಸಂತಸದ ಸುದ್ದಿ ಸಿಗಲಿದೆ.