ದಿನ ಭವಿಷ್ಯ: ಪಾರಂಪರಿಕ ವೃತ್ತಿಯನ್ನು ಮುಂದುವರಿಸುವವರಿಗೆ ಶುಭಫಲ ಪ್ರಾಪ್ತಿ..
Published 23 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ತೀರ್ಮಾನವೇ ಅಂತಿಮವಾಗಿರುವ ಕಾರಣ ಕೆಲವೊಂದು ವಿಷಯಗಳನ್ನು ಎರಡೆರಡು ಬಾರಿ ಪರಾಮರ್ಶಿಸಿ ನಿರ್ಧಾರಕ್ಕೆ ಬನ್ನಿ. ಪಾರಂಪರಿಕ ವೃತ್ತಿಯನ್ನು ಮುಂದುವರಿಸುವವರಿಗೆ ಶುಭಫಲ ಪ್ರಾಪ್ತಿ .
ವೃಷಭ
ಆಪ್ತರ ಮನೆಯಲ್ಲಿನ ನಡೆಯುವ ಸಮಾರಂಭಗಳಿಗೆ ಜವಾಬ್ದಾರಿ, ಓಡಾಟ ಹೆಚ್ಚಲಿದೆ. ಗಣಪತಿಯ ಪ್ರಾರ್ಥನೆ ಮಾಡದೆ ಪ್ರಾರಂಭ ಮಾಡಿದ ಕೆಲಸಗಳಿಗೆ ಹಲವು ವಿಘ್ನಗಳು ಬಂದೊದಗಬಹುದು.
ಮಿಥುನ
ಕೆಲಸಗಳನ್ನು ಒಬ್ಬರೆ ಮಾಡಬಹುದೆಂದು ಅಂದುಕೊಂಡಿರುವ ಕೆಲಸಕ್ಕೆ ಇತರರ ಸಹಾಯ ಪಡೆಯುವುದು ಅನಿವಾರ್ಯ. ಸಹೋದರರ ನಡುವಿನ ವ್ಯಾಜ್ಯಗಳು ಮನೆಯಿಂದ ಹೊರಗೆ ಹೋಗುವುದು ಸರಿಯಲ್ಲ.
ಕರ್ಕಾಟಕ
ಮಾರುಕಟ್ಟೆಯಲ್ಲಿ ವ್ಯಾಪಾರ ಅಧಿಕ ಅವಕಾಶಗಳೊಂದಿಗೆ ಶುಭಫಲ ತರಲಿದೆ. ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ತಂಟೆ ತಕರಾರುಗಳು ನಿಧಾನವಾಗಿ ದೂರ ಸರಿಯಲಿವೆ.
ಸಿಂಹ
ಜವಾಬ್ದಾರಿಯಲ್ಲಿನ ಸ್ಪಷ್ಟ ವಿಷಯವೊಂದು ಮನವರಿಕೆಯಾಗುವುದು. ಸಂಜೆಯ ಮುಂದೆ ತಂಗಾಳಿಯ ಜತೆ ಸ್ನೇಹಿತರೊ ಅಥವಾ ಸಂಗಾತಿಯೊಂದಿಗೆ ಕಾಲ ಕಳೆಯುವಿರಿ. ಹಳದಿ ಬಣ್ಣವು ಶುಭ ತರಲಿದೆ.
ಕನ್ಯಾ
ಮಗನ ವಿವಾಹದ ಸಿದ್ಧತೆಗಳು ಚುರುಕಾಗಿ ಮತ್ತು ಸಂಭ್ರಮದಿಂದ ಸಾಗಲಿವೆ. ಪ್ರಯಾಣದಲ್ಲಿ ಕಾಳಜಿಯ ಅಗತ್ಯವಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಬಿಡುವಿಲ್ಲದ ದಿನ.
ತುಲಾ
ಸುಂದರ ದಿನದ ಉಪಸಂಹಾರಕ್ಕೆ ಬಂದಾಗ ಮರುಕಳಿಸುವುದಿಲ್ಲವೆಂಬ ತಿಳಿನೋವು ಉಂಟಾಗಬಹುದು. ಶುಭ್ರವರ್ಣದ ವಸ್ತ್ರಗಳನ್ನು ಧರಿಸಿ ಇಂದಿನ ಸಮಾರಂಭದಲ್ಲಿ ಭಾಗವಹಿಸಿದಲ್ಲಿ ಘನತೆ ಹೆಚ್ಚುವುದು.
ವೃಶ್ಚಿಕ
ಕೆಲಸಗಳಿಗೆ ಸಂಗಾತಿಯ ಸಹಕಾರ ಹಿತವೆನಿಸುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡುವ ಎದುರಾಳಿಗಳೂ ತಲೆಬಾಗುವರು. ಮಕ್ಕಳು ಬೆಳವಣಿಗೆ ಹಾದಿಯಲ್ಲಿ ದಾರಿ ತಪ್ಪುತ್ತಿದ್ದಾರೆ ಎಂಬುದನ್ನು ಗಮನಿಸಿ.
ಧನು
ವಸ್ತುಗಳಿಗಾಗಿ ಇತರರು ಆಸೆ ಪಡುತ್ತಿರುವುದು ಹಾಸ್ಯಾಸ್ಪದವಾಗಿ ಕಾಣಬಹುದು. ಮನೆಯ ಹಿರಿಯರೊಬ್ಬರ ಮಧ್ಯಸ್ಥಿಕೆಯಿಂದ ನೆಂಟಸ್ತಿಕೆಯಲ್ಲಿ ಸಂಬಂಧ ಕೂಡಿ ಬರುವುದು. ಪ್ರೀತಿಪಾತ್ರರನ್ನು ಭೇಟಿಯಾಗುವಿರಿ.
ಮಕರ
ವ್ಯವಹರಿಸುವಾಗ ಎಲ್ಲಾ ವಿಚಾರಗಳಲ್ಲೂ ಸಾವಧಾನವಾಗಿ ಮುಂದುವರಿಯಿರಿ. ಬರವಣಿಗೆಯಿಂದಾಗಿ ಜೀವನವನ್ನು ನಡೆಸುತ್ತಿರುವವರು ವಿವಾದಾತ್ಮಕ ಹೇಳಿಕೆಯನ್ನು ನೀಡುವಂಥ ಬರಹಗಳನ್ನು ಕೈಗೆತ್ತಿಕೊಳ್ಳದಿರಿ
ಕುಂಭ
ಸದ್ಯಕ್ಕೆ ನಿಮಗೆ ಸಿಕ್ಕಿರುವ ಯಶಸ್ಸು ಅತ್ಯುನ್ನತ ಮಟ್ಟದ್ದಲ್ಲವಾದ್ದರಿಂದ ಅದನ್ನೆ ಹೆಚ್ಚು ಸಂಭ್ರಮಿಸುವ ಬದಲು ದೊಡ್ಡದ್ದಕ್ಕೆ ಪ್ರಯತ್ನ ಪಡಿ. ಕೆಲಸವನ್ನು ಕಲಿತು ಹೆಚ್ಚು ದುಡಿಮೆ ಮಾಡುತ್ತಿರುವವರನ್ನು ಕಂಡು ಅಸೂಯೆ ಪಡಿ.
ಮೀನ
ಹಲವು ದೇಹಬಾಧೆಗಳಿಂದ ಬಳಲುತ್ತಿರುವವರಿಗೆ ಅನಾರೋಗ್ಯದ ಮೇಲೆ ಬೇಸರ ಹುಟ್ಟಬಹುದು. ಯಂತ್ರೋಪಕರಣಗಳ ಸರಿಪಡಿಸುವಿಕೆ ಅಥವಾ ಬಿಡಿ ಭಾಗಗಳ ಮಾರಾಟದಿಂದ ಲಾಭ ಹೊಂದುವಿರಿ.