ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಕರ್ತವ್ಯನಿಷ್ಠೆ ಬಗ್ಗೆ ಅಧಿಕಾರಿಗಳು ಗಮನಿಸುತ್ತಾರೆ
Published 25 ಮಾರ್ಚ್ 2024, 23:59 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಫ ಪ್ರಕೃತಿಯ ದೇಹ ಹೊಂದಿರುವ ನಿಮಗೆ ಈ ದಿನ ಉಸಿರಾಟಕ್ಕೆ ಸಂಬಂಧಿಸಿದಂತೆ ಆರೋಗ್ಯದಲ್ಲಿ ಏರು-ಪೇರು ಅನುಭವಕ್ಕೆ ಬರಲಿದೆ. ಕ್ರೀಡಾಪಟುಗಳಿಗೆ ಇಂದಿನ ಪಂದ್ಯದಲ್ಲಿ ಹೆಚ್ಚಿನ ಜಯ ಪ್ರಾಪ್ತಿಯಾಗುವುದು.
ವೃಷಭ
ಇಂದು ಹಣ ಮತ್ತು ಗೌರವದಲ್ಲಿ ಒಂದನ್ನು ಸಂಪಾದಿಸಬಹುದು, ತೀರ್ಮಾನ ನಿಮ್ಮದ್ದಾಗಿರುತ್ತದೆ. ಆರ್ಥಿಕ ಸಂಪತ್ತಿಗಿಂತ ಜನಸಂಪತ್ತುಂ ಮುಖ್ಯವೆಂಬುದನ್ನು ಮರೆಯದಿರಿ. ಹೊಸ ಬಂಡವಾಳ ಹೂಡಿಕೆಗೆ ಉತ್ತಮ ಸಮಯ.
ಮಿಥುನ
ಆಧ್ಯಾತ್ಮಿಕ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡುವುದರಿಂದ ಮನಃಶಾಂತಿ ಸಿಗುತ್ತದೆ. ನಿಮ್ಮ ಪ್ರಾಮಾಣಿಕತೆಗೆ ಸರಿಯಾದಂತಹ ಫಲಗಳು ಈ ದಿನ ದೊರೆಯುವುದು. ಅನ್ನದಾನ ಮಾಡುವುದರಿಂದ ಶುಭವಾಗುತ್ತದೆ.
ಕರ್ಕಾಟಕ
ಸಮಾಜದಲ್ಲಿ ಗೌರವ ಹೆಚ್ಚಿಸಿಕೊಳ್ಳುವ ಘಟನೆ ನಿಮ್ಮಿಂದ ನೆಡೆಯಲಿದೆ. ಪರರಿಗೆ ವಂಚಿಸುವ ಯಾವುದೇ ನಿಮ್ಮ ಅಭಿವೃದ್ಧಿಗೆ ಅಡ್ಡಿಮಾಡುತ್ತದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಿಂದ ಧನ ಲಾಭ ತರಲಿದೆ.
ಸಿಂಹ
ರಚನಾತ್ಮಕ ಕೆಲಸಗಳಿಗೆ ಹೆಚ್ಚಿನ ಪ್ರಾಶಸ್ತ÷್ಯ ಕೊಡುವುದರಿಂದ ಸಂತಸ ಪ್ರಾಪ್ತಿಯಾಗಲಿದೆ. ಕೌಟುಂಬಿಕವಾಗಿ ಈಗಿರುವ ಜವಾಬ್ದಾರಿಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಯಾವ ನಿರ್ಧಾರದಲ್ಲಿಯೂ ಆತುರ ಬೇಡ.
ಕನ್ಯಾ
ನಿಮ್ಮಿಂದ ಪ್ರಯೋಜನ ಪಡೆದ, ಜೀವನಾನುಭವ ಪಡೆದ ವ್ಯಕ್ತಿಗಳು ನಿಮ್ಮನ್ನು ದೂಷಿಸುವರು. ಹಣಕಾಸಿನ ವ್ಯಾಮೋಹ ಹೆಚ್ಚಾಗಿ ತೊಂದರೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಭೂ ವ್ಯವಹಾರದಲ್ಲಿ ಹೆಚ್ಚಿನ ಆದಾಯ ಇರಲಿದೆ.
ತುಲಾ
ನಿಮ್ಮ ಅಧಿಕಾರಿಗಳು ನೀವಿಟ್ಟಿರುವ ಕರ್ತವ್ಯನಿಷ್ಠೆಯ ಬಗ್ಗೆ ಈ ದಿನ ಗಮನಿಸಲ್ಲಿದ್ದಾರೆ. ಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ಶ್ರಮಕ್ಕೆ ತಕ್ಕಷ್ಟು ಆದಾಯ ಲಭಿಸಲಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಮೂಡುವುದು.
ವೃಶ್ಚಿಕ
ಈ ದಿನವನ್ನು ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ದರ್ಶನದಿಂದ ಪ್ರಾರಂಭಿಸಿ. ಅದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣುವಿರಿ. ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಮುಂಜಾಗ್ರತೆಯನ್ನು ತೆಗೆದುಕೊಳ್ಳಿರಿ.
ಧನು
ನಿಮ್ಮ ಹೃದಯದ ಭಾವನೆಯು ಒಳ್ಳೆಯ ಧ್ಯೇಯವನ್ನೇ ಹೊಂದಿದ್ದರೂ ಸಹಚರರಲ್ಲಿ ನೀವಾಡುವ ಮಾತುಗಳು ಭಿನ್ನಾಭಿಪ್ರಾಯ ಮೂಡಲು ಕಾರಣವಾಗುತ್ತದೆ. ಸಾಮಾಜಿಕ ಕೆಲಸಗಳಲ್ಲಿ ನಿಮ್ಮ ಪರಿಶ್ರಮ ಸಾರ್ಥಕವಾಗಲಿದೆ.
ಮಕರ
ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು. ಪ್ರವಾಸೋದ್ಯಮ ಮತ್ತು ಸಾರಿಗೆ ಸಂಸ್ಥೆಯವರಿಗೆ ಉತ್ತಮವಾದ ವ್ಯವಹಾರಗಳು ಪ್ರಾಪ್ತಿಯಾಗುವುದು. ಕುಟುಂಬದ ಸಮಸ್ಯೆಗಳಿಂದ ಮುಕ್ತಿ ಕಾಣಲಿದ್ದೀರಿ.
ಕುಂಭ
ಶೀಘ್ರಕೋಪಿಗಳಾಗುವ ನಿಮ್ಮ ವ್ಯಕ್ತಿತ್ವಕ್ಕೆ ಸ್ವಲ್ಪ ಮಟ್ಟಿನ ಬದಲಾವಣೆಯ ಗಾಳಿ ಬೀಸಲಿದೆ. ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಜಾಗರೂಕತೆ ಬಹಳ ಮುಖ್ಯವಾಗುವುದು. ನಿಮ್ಮ ವ್ಯಾಪಾರದ ಚತುರತೆಯಿಂದ ಧನಲಾಭ ಆಗುತ್ತದೆ.
ಮೀನ
ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೆÊಸದೇ ನಿಮ್ಮ ಮನದ ಭಾವನೆಯನ್ನು ಸ್ಪಷ್ಟವಾಗಿ ತೆರೆದಿಡಿ. ಪುಸ್ತಕ ಓದುವ ಹವ್ಯಾಸ ಹೊಂದಿದವರಿಗೆ ಉತ್ತಮವಾದ ನಿಮ್ಮ ಅಭಿರುಚಿಗೆ ತಕ್ಕಂತಹ ಪುಸ್ತಕವು ದೊರಕುವುದು.